Sunday, 13th October 2024

ಬುಗುಡನಹಳ್ಳಿ ಗ್ರಾಮದವರಿಂದ ಮಾಜಿ ಶಾಸಕ ಸುರೇಶ್ ಗೌಡ ಜನ್ಮದಿನಾಚರಣೆ

ತುಮಕೂರು: ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರ 57ನೇ ಜನ್ಮದಿನದ ಆಚರಣೆಯನ್ನು  ಬೆಳ್ಳಾವಿ ಹೋಬಳಿ ಬುಗುಡನ ಹಳ್ಳಿ ಗ್ರಾಮದಲ್ಲಿ ಶ್ರೀ ಕಾರದ ವೀರ ಬಸವ ಮಹಾ ಸ್ವಾಮೀಜಿ ಗಳ ಆರ್ಶಿವಾದಗಳೊಂದಿಗೆ  ಎಲ್ಲಾ ಗ್ರಾಮಗಳ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಬಹಳ ಅದ್ಧೂರಿಯಾಗಿ ಗ್ರಾಮದ ಪ್ರಮುಖ ರಾಜ ಬೀದಿ ಗಳಲ್ಲಿ ವಾದ್ಯಗೋಷ್ಠಿ ಗಳೊಂದಿಗೆ ಜಾನಪದ ಕಲಾ ತಂಡಗಳನ್ನ ಒಳಗೊಂಡಂತೆ ಹೂ ಮಳೆ ಸುರಿಸುತ್ತಾ ಕಾರ್ಯಕ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಗೌಡರ ಬಗ್ಗೆ  ಶ್ರೀ ಮಠದ  ಕಾರದ ವೀರ ಬಸವ ಮಹಾ ಸ್ವಾಮಿಜಿಗಳು ಬುಗುಡನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣದೊಂದಿಗೆ  ಜನಪ್ರಿಯತೆ ಪಡೆದಿರುವ ಜನನಾಯಕ ಸುರೇಶ್ ಗೌಡರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವ ಅಭಿಮಾನಿಗಳಿಗೆ ಹಿತವಚನ ಹೇಳುತ್ತಾ ನಿಜವಾದ ಜನನಾಯಕ ಅಂದರೆ ಯಾರು? ಹಣ ಖರ್ಚು ಮಾಡಿ ನಾಯಕ ಎಂದು ಕರೆಸಿ ಕೊಳ್ಳುವವನು ನಾಯಕ ನಲ್ಲ.
ದುಡ್ಡು ಖರ್ಚು ಮಾಡದೆ ಪಟಾಕಿ ಹೊಡೆಸಿಕೊಳ್ಳುವ, ಹಾರ ಹಾಕಿಸಿ ಕೊಳ್ಳುವ, ಕೇಕ್ ಕಟ್ ಮಾಡಿಸಿ ಕೊಳ್ಳುವ, ಪ್ರತಿ ದಿನ ಸಾರ್ವಜನಿಕರ ಜೀವನದಲ್ಲಿ ಕಾಯಕ  ಮಾಡಿ ಜನಪ್ರಿಯತೆ ಯನ್ನ ಗಳಿಸುತ್ತಿರುವ ನಿಜವಾದ ಜನನಾಯಕ ಸುರೇಶ್ ಗೌಡ್ರು, ಅವರನ್ನು ಉಳಿಸಿ ಬೆಳೆಸುವ ಕರ್ತವ್ಯ ನಿಮ್ಮ ನಮ್ಮೆಲ್ಲರ ಮೇಲಿದೆ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಚಿದಾನಂದ್, ನಮ್ಮ ನಾಯಕರದ ಸುರೇಶ್ ಗೌಡರವರ ಪ್ರತಿದಿನದ ಕಾರ್ಯವೈಕರಿ  ನಾವು ನೋಡುವುದಾದರೆ ಇವರು ನಿದ್ದೆ ಮಾಡುತ್ತಾರೋ ಅಥವಾ ಇಲ್ಲವೋ ಎನ್ನುವಂತಹ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಚುನಾವಣೆಯಲ್ಲಿ ಸೋತ ದಿನದಿಂದ ಇಂದಿನವರೆಗೂ ಸಹ ಪ್ರತಿ ದಿನವೂ ದೀನದಲಿತರ ಬಡವರ ರೈತರ ಕೂಲಿ ಕಾರ್ಮಿಕರ ಕೆಲಸಗಳನ್ನು ಬಹಳ ಶ್ರದ್ಧೆ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು ಇವರ ಕಾರ್ಯವೈಖರಿಯನ್ನು ನೋಡಿ ನಾನು ಸಹ ಅವರ ಅಭಿಮಾನಿಯಾದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನಂತರ ಮಾತನಾಡಿದ ಸುರೇಶ್ ಗೌಡ ನನ್ನ ಜನ್ಮದಿನವನ್ನು ನನ್ನ ತಂದೆ ತಾಯಿ ನನ್ನ ಕುಟುಂಬ ಯಾರೂ ಸಹ ಆಚರಣೆ ಮಾಡಲಿಲ್ಲ ಆದರೆ ನನ್ನ ಕ್ಷೇತ್ರದ ಜನ ನನ್ನ ಜನ್ಮ ದಿನಕ್ಕೆ ಸ್ವಂತ ಹಣ ಖರ್ಚು ಮಾಡಿ ಸಮಯ ಕೊಟ್ಟು ಎಲ್ಲಾ ಗ್ರಾಮಗಳಲ್ಲಿ ಯೂ ನನ್ನ ಆಹ್ವಾನಿಸಿ ಪ್ರೀತಿ ವಿಶ್ವಾಸ ಅಕ್ಕರೆ ಅಭಿಮಾನ ಗೌರವದಿಂದ ನನ್ನನ್ನು ಕಾಣುತ್ತಿದ್ದೀರಾ ನನ್ನ ಕೊನೆ ಉಸಿರು ಇರುವ ವರೆಗೂ  ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ ನನ್ನನ್ನು ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದೀರಿ. ಸಾಮಾಜಿಕ ವಾಗಿ ಈ ಕ್ಷೇತ್ರಕ್ಕೆ ಸಾವಿರಾರು ಕೆಲಸಗಳನ್ನು  ಹಗಲು ರಾತ್ರಿ ಎನ್ನದೆ ಮಾಡಿರುತ್ತೇನೆ.
ಇನ್ನು ಮುಂದೆ  ಇಡೀ ದೇಶ ತುಮಕೂರು ಗ್ರಾಮಾಂತರವನ್ನು ತಿರುಗಿ ನೋಡುವ ಹಾಗೆ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡಿ ಬಡವರು ಕೂಲಿ ಕಾರ್ಮಿಕರು ನಿರ್ಗತಿಕರು ಹಿಂದುಳಿದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ನ್ಯಾಯ ದೊರಕಿಸಿ ಕೊಡುವುದೇ ನನ್ನ ಗುರಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ  ಶಂಕರ್,ಜಿಲ್ಲಾ ಕಾರ್ಯದರ್ಶಿ ಸಿದ್ದೇಗೌಡ,ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ  ಚಿದಾನಂದ್ ,ಎಸ್ಸಿ ಮೋರ್ಚ ಅಧ್ಯಕ್ಷ ರಾದ ನರಸಿಂಹ ಮೂರ್ತಿ, ಎಸ್ಟಿ ಮೋರ್ಚ ಅಧ್ಯಕ್ಷರಾದ ವಿಜಿಕುಮಾರ್, ಪ್ರ.ಕಾರ್ಯದರ್ಶಿ ರಘುನಾಥಪ್ಪ ,ಶಿವಕುಮಾರ್ , ಮಾಜಿ ಅಧ್ಯಕ್ಷ ಕೆಂಪಣ್ಣ ಗ್ರಾಮಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗ್ರಾಮ ಪಂ ಮಾಜಿ ಸದಸ್ಯರು, ರೈತಮೊರ್ಚ,ಯುವಮೋರ್ಚ, ಬೂತ್,ಹಿಂದುಳಿದ ಮೋರ್ಚ,ಡೈರಿ,ವಿಎಸ್ಎಸ್ಎನ್ ಮತ್ತು ಎಲ್ಲಾ ಮಂಡಲಗಳ  ಅಧ್ಯಕ್ಷರು, ಸದಸ್ಯರುಗಳು ಪದಾಧಿಕಾರಿಗಳು ಮತ್ತು ಬುಗಡನಹಳ್ಳಿ  ಅಕ್ಕಪಕ್ಕದ ಗ್ರಾಮಸ್ಥರು  ಮುಖಂಡರು ಉಪಸ್ಥಿತರಿದ್ದರು.