Wednesday, 11th December 2024

HDFC Life: ವಿಶ್ವ ಹೃದಯ ದಿನದಂದು ಎಚ್‌ಡಿಎಫ್‌ಸಿ ಲೈಫ್ ನಿಂದ ‘ದಿ ಮಿಸ್ಸಿಂಗ್ ಬೀಟ್’ ಅಭಿಯಾನ

ಬೆಂಗಳೂರು: ಭಾರತದ ಪ್ರಮುಖ ವಿಮಾ ಸಂಸ್ಥೆಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್, ಕಾರ್ಡಿಯೋಪಲ್ಮನರಿ ಪುನರುಜ್ಜೀವನದ (ಸಿಪಿಆರ್) – ಜೀವ ಉಳಿಸುವ ತಂತ್ರದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ‘ದಿ ಮಿಸ್ಸಿಂಗ್ ಬೀಟ್’ ಎನ್ನುವ ಜಾಹೀರಾತು ಅಭಿಯಾನ ಪ್ರಾರಂಭಿಸಿದೆ.

ಭಾರತದಲ್ಲಿ ಇತ್ತೀಚೆಗೆ ಹೃದಯ ಸ್ಥಂಭನದಿಂದ ಹೆಚ್ಚು ಸಾವು ಸಂಭವಿಸುತ್ತದೆ. ಹೃದಯ ಸಂಬಂಧಿತ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಅನೇಕ ಜನರು ಸಿದ್ಧರಿದ್ದರೂ, ಸ್ನೇಹಿತರಿಗೆ, ಕುಟುಂಬಸ್ಥರಿಗೆ ಮತ್ತು ಇತರರಿಗೆ ಅರಿವಿನ ಕೊರತೆಯಿಂದಾಗಿ ಸಂದರ್ಭಕ್ಕೆ ತಕ್ಕಂತೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ತಿಳಿಯುವುದಿಲ್ಲ.

ಹೃದಯವು ಬಡಿಯುವುದನ್ನು ನಿಲ್ಲಿಸಿದಾಗ ಅಥವಾ ಪ್ರಮುಖ ಅಂಗಗಳಿಗೆ ರಕ್ತವನ್ನು ಪರಿಚಲನೆ ಮಾಡಲು ಸಾಧ್ಯವಾಗದಿದ್ದಾಗ ಸಿಪಿಆರ್ ಮಾಡುವುದು ಬಹು ಮುಖ್ಯ ಆಗಿರುತ್ತದೆ. ಹೃದಯಾಘಾತಗಳು ಅಥವಾ ಮುಳುಗುವ ಘಟನೆ ಜೊತೆಗೆ ಇತರ ಮಾರಣಾಂತಿಕ ಸಂದರ್ಭಗಳಲ್ಲಿ ಸಹ ಇದು ನಿರ್ಣಾಯಕವಾಗಿದೆ.

ಆದರೂ ಜೀವಗಳನ್ನು ಉಳಿಸುವ ಸಾಮರ್ಥ್ಯದ ಹೊರತಾಗಿಯೂ, ಭಾರತದ ಜನಸಂಖ್ಯೆಯ 2% ಕ್ಕಿಂತ ಕಡಿಮೆ ಜನರು ಸಿಪಿಆರ್ ಬಗ್ಗೆ ತಿಳಿದಿರುತ್ತಾರೆ. ಸಿಪಿಆರ್ ಇದು ಕೆಲವೊಮ್ಮೆ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದು. ಈ ಗಮನಾರ್ಹ ಅಂಶವೇ ಎಚ್‌ಡಿಎಫ್‌ಸಿ ಲೈಫ್ ಗೆ ವಿಶ್ವ ಹೃದಯ ದಿನದಂದು ‘ದಿ ಮಿಸ್ಸಿಂಗ್ ಬೀಟ್’ ಅಭಿಯಾನ ಆರಂಭಕ್ಕೆ ಪ್ರೇರಣೆ ಆಗಿರುವುದು.

ಕಿರುಚಿತ್ರದ ಮೂಲಕ ಮೂಡಿ ಬಂದಿರುವ ಈ ಅಭಿಯಾನವು ನಾಲ್ಕು ವ್ಯಕ್ತಿಗಳ ಭಾವನಾತ್ಮಕ ಪ್ರಯಾಣವನ್ನು ಒಳಗೊಂಡಿದೆ. ಅವರ ಕನಸುಗಳು, ಸಂಬಂಧಗಳು ಮತ್ತು ದುರ್ಬಲತೆಗಳನ್ನು ಪ್ರದರ್ಶಿಸುತ್ತದೆ. ಪ್ರತಿಯೊಂದು ಕಥೆಯು ಹೃದಯದ ತುರ್ತುಸ್ಥಿತಿಗಳಲ್ಲಿ ಸಿಪಿಆರ್ ನ ಜೀವರಕ್ಷಕ ಸಾಮರ್ಥ್ಯವನ್ನು ಪ್ರದರ್ಶಿಸುವ, ಪ್ರಮುಖವಾದ ಕ್ಷಣಗಳಲ್ಲಿ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಈ ಚಿತ್ರದ ಮೂಲಕ, ಎಚ್ ಡಿ ಎಫ್ ಸಿ ಲೈಫ್ ವೈಯಕ್ತಿಕ ಮಟ್ಟದಲ್ಲಿ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಸಿಪಿಆರ್ ನಿಂದ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ಒತ್ತಿಹೇಳುತ್ತದೆ.

ಅಭಿಯಾನದ ಕುರಿತು ಎಚ್‌ಡಿಎಫ್‌ಸಿ ಲೈಫ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಗ್ರೂಪ್ ಹೆಡ್ ಸ್ಟ್ರಾಟಜಿ ವಿಶಾಲ್ ಸುಭರ್ವಾಲ್ ಮಾತನಾಡಿ, “ಎಚ್‌ಡಿಎಫ್‌ಸಿ ಲೈಫ್‌ಗೆ ಘನತೆ ಮತ್ತು ಹೆಮ್ಮೆ ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರವಲ್ಲದೆ ನಿರ್ಣಾಯಕ ಕ್ಷಣಗಳಲ್ಲಿ ಇತರರಿಗೆ ಸಹಾಯ ಮಾಡುವ ಸಾಮರ್ಥ್ಯದಿಂದಲೂ ಬರುತ್ತದೆ ಎಂದು ನಂಬುತ್ತೇವೆ. ಈ ಅಭಿಯಾನವು ಕೇವಲ ಜಾಗೃತಿ ಮೂಡಿಸುವ ಬಗ್ಗೆ ಅಲ್ಲ – ಇದು ಸ್ಪೂರ್ತಿದಾಯಕ ಕ್ರಿಯೆಯ ಬಗ್ಗೆ. ಸಿಪಿಆರ್ ಗೆ ಸಿದ್ಧವಾಗಲು ಮೊದಲ ಹೆಜ್ಜೆ ಇಡಲು ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಸರಿಯಾದ ಜ್ಞಾನ ಮತ್ತು ಸಿದ್ಧತೆಯೊಂದಿಗೆ, ನಾವು ಜೀವಗಳನ್ನು ಉಳಿಸಬಹುದು ಮತ್ತು ನಿಜವಾಗಿಯೂ ಗೌರವದ ಮನೋಭಾವನೆಯಿಂದ ಬದುಕಬಹುದು’ ಎಂದರು.

ಎಲ್ ಎಸ್ ಡಿಜಿಟಲ್‌ನ ಎಲ್ ಎಸ್ ಕ್ರಿಯೇಟಿವ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸೃಜನಾತ್ಮಕ ಅಧಿಕಾರಿ ಮನೇಶ್ ಸ್ವಾಮಿ ಮಾತನಾಡಿ, ‘ಜನರ ಜೀವನದ ಮೇಲೆ ಪ್ರಭಾವ ಬೀರಲು ಉತ್ತಮವಾದನ್ನು ಮಾಡಲು ಜಾಹೀರಾತುದಾರರು ಮತ್ತು ಸೃಜನಶೀಲ ವ್ಯಕ್ತಿಗಳಿಗೆ ಇದು ಅಪರೂಪದ ಅವಕಾಶಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ, ನಾವು ಸುದ್ದಿಗಳಲ್ಲಿ, ಇಂಟರ್ನೆಟ್‌ನಲ್ಲಿ ಮತ್ತು ಸ್ನೇಹಿತರು ಮತ್ತು ಕುಟುಂಬದವರಲ್ಲಿ ಹಠಾತ್ ಹೃದಯ ಸ್ತಂಭನದ ಬಗ್ಗೆ ಭಯಾನಕ ಕಥೆಗಳನ್ನು ಕೇಳುತ್ತಿದ್ದೇವೆ. ‘ದಿ ಮಿಸ್ಸಿಂಗ್ ಬೀಟ್’ ನೊಂದಿಗೆ, ನಮ್ಮ ಗುರಿ ಕೇವಲ ಪ್ರಚಾರಕ್ಕಿಂತ ಹೆಚ್ಚಿನದನ್ನು ಸಾಧಿಸುವುದು.

ಇದು ಒಂದು ಚಳವಳಿ, ಕ್ರಿಯೆಗೆ ದೊಡ್ಡ ಕರೆ, ಸಿಪಿ ಆರ್ ಅನ್ನು ತಿಳಿದುಕೊಳ್ಳುವುದು ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ಅರ್ಥೈಸಬಲ್ಲದು ಎಂದು ನೆನಪಿಸುತ್ತದೆ’ ಎಂದರು.

“ಈ ಸಂವಹನ ತುಣುಕನ್ನು ಜೀವಂತಗೊಳಿಸುವ ಪ್ರಯಾಣವು ನಮ್ಮ ತಂಡಕ್ಕೆ ಉತ್ತಮವಾದ ಅನುಭವ ಆಗಿತ್ತು. ವೈಯುಕ್ತಿಕವಾಗಿ ಆಳವಾಗಿ ಪರಿಣಾಮ ಬೀರಿತ್ತು. ಈ ಅಭಿಯಾನದ ಮೇಲೆ ಕೆಲಸ ನಿರ್ವಹಿಸಲು ಪ್ರಾರಂಭಿಸಿ ಒಂದು ವರ್ಷಕ್ಕೂ ಅಧಿಕವಾಗಿದೆ . ನಾವು ಸಂಗ್ರಹಿಸಿದ ದತ್ತಾಂಶ ಮತ್ತು ಅಂಕಿಅಂಶಗಳಿಂದ ನಾವು ತುರ್ತಾಗಿ ಏನನ್ನಾದರೂ ಮಾಡಬೇಕಾಗಿದೆ ಎಂದು ಭಾವಿಸಿದೆವು. ಪ್ರೇಕ್ಷಕರು ಕೇವಲ ವೀಕ್ಷಿಸಬಾರದು ಆದರೆ ಸಿಪಿಆರ್ ನ ತುರ್ತು ಮತ್ತು ಪ್ರಾಮುಖ್ಯತೆಯನ್ನು ಅನುಭವಿಸಬೇಕೆಂದು ನಾವು ಬಯಸುತ್ತೇವೆ. ಪ್ರತಿ ತುಣುಕು ಮತ್ತು ಕಥೆಯನ್ನು ನೈಜ ಜೀವನದ ಘಟನೆಗಳಿಂದ ಭಾವನಾತ್ಮಕ ಸಂಬಂಧವನ್ನು ಪ್ರಚೋದಿಸಲು ರಚಿಸಲಾಗಿದೆ, ಸನ್ನಿವೇಶದ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸರಳ, ಜೀವ ಉಳಿಸುವ ಕೌಶಲ್ಯದ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ದೇಶವನ್ನು ಸಿಪಿಆರ್ ಸಿದ್ಧಗೊಳಿಸುವತ್ತ ಹೆಜ್ಜೆ ಇಡಲು ಜನರನ್ನು ಪ್ರೇರೇಪಿಸಲು ನಾವು ಭಾವಿಸುತ್ತೇವೆ. ನಾವು ಕೇವಲ ಕಥೆಗಳನ್ನು ಹಂಚಿಕೊಳ್ಳುತ್ತಿಲ್ಲ ನಾವು ಅಸಹಾಯಕತೆಯ ಮೇಲೆ ಕ್ರಿಯೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಇದೇ ವೇಳೆ ಹೇಳಿದರು.

2024ರ ಆರ್ಥಿಕ ವರ್ಷದಲ್ಲಿ ಎಚ್ ಡಿ ಎಫ್ ಸಿ ಲೈಫ್ 6.6 ಕೋಟಿ ಜೀವ ವಿಮೆಗಳನ್ನು ಒಳಗೊಂಡಿದೆ ಮತ್ತು ವೈಯಕ್ತಿಕ ಕ್ಲೈಮ್‌ಗಳಿಗೆ 99.5% ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತವನ್ನು ಸಾಧಿಸಿದೆ, ಇದು ಪಾಲಿಸಿದಾರರು ಮತ್ತು ಅವರ ಕುಟುಂಬಗಳಿಗೆ ಅದರ ಬಲವಾದ ಬದ್ಧತೆಯನ್ನು ಬಿಂಬಿಸುತ್ತದೆ.

ಇಲ್ಲಿ ಜಾಹೀರಾತು ಚಿತ್ರ ನೋಡಿ:https://youtu.be/UU1P-Px2mV4?si=RcUApdJxFk09YGB6