Wednesday, 18th September 2024

ಶೇ.27 ರಷ್ಟು ಹೃದಯಾಘಾತ ಹೆಚ್ಚಳವಾಗಿದೆ : ಡಾ.ಎಚ್.ವಿ.ರಂಗಸ್ವಾಮಿ 

ತುಮಕೂರು:ಶೇ.27 ರಷ್ಟು ಹೃದಯಾಘಾತ ಹೆಚ್ಚಳವಾಗಿದೆ ಎಂದು ಐಎಂಎ ತುಮಕೂರು ಜಿಲ್ಲಾಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಳೆದ 25-30 ವರ್ಷಗಳಿಗೆ ಹೊಲಿಕೆ ಮಾಡಿದರೆ,ಈಗ ಜನರು ಸಾಂಕ್ರಾಮಿಕ ರೋಗಗಳಿಗಿಂತ,ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ,ಕ್ಯಾನ್ಸರ್ ಸಂಬಂಧಿ ಶ್ವಾಸಕೋಶದ ಕಾಯಿಲೆಗಳು ಮನುಷ್ಯರಲ್ಲಿ ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ ಎಂದರು.
ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆಯನ್ನು ಶೇ63 ರಿಂದ 55ಕ್ಕೆ ಇಳಿಸುವುದು, ಹಾಗೇಯ ಸಾವಿನ ಪ್ರಮಾಣವನ್ನು ಶೇ27 ರಿಂದ 18ಕ್ಕೆ ಇಳಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎತ್ತರಕ್ಕೆ ತಕ್ಕ ದೇಹ ತೂಕ ಹೊಂದುವುದು,ಉಪ್ಪಿನ ಪ್ರಮಾಣ ಕಡಿಮೆ ಬಳಕೆ,ಒತ್ತಡ ರಹಿತ ಜೀವನದ ಜೊತೆಗೆ, ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗ ಬಾರದಂತೆ ತಡೆಯಬಹುದಾಗಿದೆ.ಅಲ್ಲದೆ ಮೂವತ್ತು ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದು.ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕೆಂದು ಎಂದು  ಸಲಹೆ ನೀಡಿದರು.
ವಿಶ್ವ ಹೃದಯ ದಿನದ ಅಂಗವಾಗಿ ಮಾತನಾಡಿದ ಹೃದ್ರೋಗ ತಜ್ಞ ಡಾ.ಮುದ್ದುರಂಗಪ್ಪ,ಭಾರತದಲ್ಲಿ ರೋಗ ಭಾರತದಂತೆ ತಡೆಯುವ ಬದಲು ರೋಗ ಬಂದ ಮೇಲೆ ಅದನ್ನು ವಾಸಿ ಮಾಡಿಕೊಳ್ಳಲು ಕಷ್ಟ ಪಡುವವರ ಸಂಖ್ಯೆಯೇ ಹೆಚ್ಚು, 100 ಜನರಲ್ಲಿ ರಕ್ತದೊತ್ತಡ ಇದ್ದರೆ, ಅವರಲ್ಲಿ ಪರೀಕ್ಷೆಗೆ ಒಳಗಾಗು ವವರ ಸಂಖ್ಯೆ ಶೇ50, ಇವರಲ್ಲಿ ನಿಯಮಿತ ಚಿಕಿತ್ಸೆಗೆ ಒಳಗಾಗಿ ಕಾಯಿಲೆ ವಾಸಿ ಮಾಡಿಕೊಳ್ಳುವವರ ಸಂಖ್ಯೆ ಶೇ25 ಮಾತ್ರ. ಇದರಿಂದಾಗಿ ಅಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಪ್ರಮಾಣ ಶೇ22.5ರಷ್ಟಿದೆ.ಜನರಲ್ಲಿ ಜಾಗೃತಿ ಮೂಡಿಸಿ,ನಿಯಂತ್ರಣ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಶ್ರಮವಹಿಸಬೇಕಾಗಿದೆ ಎಂದರು.
ಎನ್.ಸಿ.ಡಿ.ಎಸ್ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ನಾಗರಾಜರಾವ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಐಎಂಎ ಕಾರ್ಯದರ್ಶಿ ಡಾ.ಮಹೇಶ್,ಮಹಿಳಾ ಪ್ರತಿನಿಧಿ ಡಾ.ಅನಿತಾಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *