Wednesday, 29th November 2023

ಉಕ್ಕಿ ಹರಿದ ಕಾಗಿಣಾ‌ ನದಿ: ಕಲಬುರ್ಗಿ-ಸೇಡಂ ಸಂಪರ್ಕ ‌ಕಡಿತ

ಕಲಬುರ್ಗಿ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದ್ದರಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ರಸ್ತೆ ‌ಸಂಪರ್ಕ‌ ಕಡಿತಗೊಂಡಿದೆ.

ಸೇಡಂ ತಾಲ್ಲೂಕಿನ ಮಳಖೇಡ ಬಳಿ ಕಾಗಿಣಾ‌ ನದಿಯಲ್ಲಿ ಪ್ರವಾಹ ‌ಉಂಟಾಗಿ ಸೇತುವೆ ಮುಳುಗಿ ದ್ದರಿಂದ ಕಲಬುರ್ಗಿ-ಸೇಡಂ ಮಧ್ಯದ‌ ಸಂಪರ್ಕ ‌ಕಡಿತ ಗೊಂಡಿದೆ. ಸೇಡಂನ ಕಮಲಾವತಿ ನದಿ ಯೂ ಮೈದುಂಬಿ ಹರಿಯುತ್ತಿದೆ. ಭಾರಿ ಮಳೆ ಸುರಿದ ಪರಿಣಾಮ ಹಾಗೂ ನಾಗರಾಳ ಜಲಾಶಯ ದಿಂದ ನದಿಗೆ ನೀರು ಹರಿದು ಬಂದಿದ್ದರಿಂದ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಸಂಪರ್ಕ ಸ್ಥಗಿತಗೊಂಡಿದ್ದರಿಂದ ಕಲಬುರ್ಗಿ, ಸೇಡಂ ಮಧ್ಯೆ ಸಂಚರಿಸುವ ಸರ್ಕಾರಿ‌ ನೌಕರರು, ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವಂತಾಗಿದೆ. ಸೇಡಂ-ಮಳಖೇಡ, ಚಿತ್ತಾಪೂರ ಮಾರ್ಗದಿಂದ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಕಾಗಿಣಾ ಮತ್ತು ಕಮಲಾವತಿ ನದಿ ನೀರಿನಲ್ಲಿ ಪ್ರವಾಹ ಹೆಚ್ಚಿದ್ದರಿಂದ ನದಿಯತ್ತ ಯಾರೂ ಸುಳಿಯದಂತೆ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಮನವಿ ಮಾಡಿದ್ದಾರೆ.

ಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಮುಲ್ಲಾಮಾರಿ ನದಿ‌ಗೆ ನೀರು ಬಿಡಲಾಗಿದೆ. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು ನದಿ ಉಕ್ಕೇರಿ ಹರಿಯುತ್ತಿದೆ. ಜಲಾಶಯದಿಂದ ರಾತ್ರಿ 3000 ಕ್ಯುಸೆಕ್ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟರೆ, ನಂತರ ಒಳ ಹರಿವು ಏರಿಕೆಯಾಗಿದ್ದರಿಂದ 4 ಗೇಟುಗಳು ತೆರೆದು 4500 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಇದರಿಂದ ಚಿಮ್ಮನಚೋಡ, ಗಾರಂಪಳ್ಳಿ, ಮತ್ತು ತಾಜಲಾಪುರ ಸೇತುವೆಗಳು ಹಾಗೂ ಕನಕಪುರ, ಚಂದಾಪುರ, ಗರಗಪಳ್ಳಿ ಬಾಂದಾರು ಸೇತುವೆಗಳು ಮುಳುಗಿವೆ.

ಕಲಬುರ್ಗಿ, ಕಾಳಗಿ, ಚಿತ್ತಾಪುರ, ಅಫಜಲಪುರ, ಆಳಂದ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದೆ.

Leave a Reply

Your email address will not be published. Required fields are marked *

error: Content is protected !!