Friday, 13th December 2024

Hero Motocorp: ಹಬ್ಬದ ಪ್ರಚಾರ ಅನಾವರಣ ಗೊಳಿಸಿದ ಹೀರೋ ಮೋಟೋಕಾರ್ಪ್

ಶುಭ್ ಮುಹೂರತ್ ಆಯಾ, ಹೀರೋ ಸಾಥ್ ಲಾಯಾ

ಬೆಂಗಳೂರು: ಮೋಟಾರುಸೈಕಲ್‌ಗಳು ಹಾಗೂ ಸ್ಕೂಟರುಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಭಾರತದಲ್ಲಿ ಹಬ್ಬದ ಶುಭಾರಂಭಗಳನ್ನು ಆಚರಿಸುವಂತಹ ಹಾಗೂ ನಾಡಿನ ಸಮೃದ್ಧ ಪರಂಪರೆ ಹಾಗೂ ಸಂಪ್ರದಾಯಗಳನ್ನು ಒಳಗೊಂಡ ಒಂದು ವಿನೂತನ ಹಬ್ಬದ ಪ್ರಚಾರವನ್ನು ಘೋಷಿಸಿದೆ.

‘ಶುಭ್ ಮುಹೂರತ್ ಆಯಾ, ಹೀರೋ ಸಾಥ್ ಲಾಯಾ” , ಹೀರೋ ಮೋಟೋಕಾರ್ಪ್‌ನ ಗ್ರಾಂಡ್ ಇಂಡಿಯನ್ ಫೆಸ್ಟಿವಲ್ ಆಫ್ ಟ್ರಸ್ಟ್(GIFT)ದ ಮೂರನೇ ಇಂಡಿಯನ್ ಫೆಸ್ಟಿವಲ್ ಆಫ್ ಟ್ರಸ್ಟ್ ಆವೃತ್ತಿ ಆಗಿದ್ದು, ಗ್ರಾಹಕರು ತಮ್ಮ ನೆಚ್ಚಿನ ಹೀರೋ ಮೋಟೋಕಾರ್ಪ್ ಉತ್ಪನ್ನಗಳನ್ನು ಮನೆಗೆ ತರುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ ಕೊಳ್ಳುವ ಒಂದು ಕೌತುಕಮಯ ಅವಕಾಶವನ್ನು ಒದಗಿಸುತ್ತಿದೆ.

ಉದ್ಯಮದಲ್ಲೇ-ಪ್ರಪ್ರಥಮವಾದ ದೃಷ್ಟಿಕೋನದಲ್ಲಿ, ಹೀರೋ ಮೋಟೋಕಾರ್ಪ್, ಯುವ ಐಕಾನ್‌ಗಳು ಹಾಗೂ ನಟರುಗಳಾದ ದಿವ್ಯೇಂದು ಶರ್ಮ ಹಾಗೂ ಹನ್ಸಿಕಾ ಮೋಟ್ವಾನಿಯನ್ನು ಒಳಗೊಂಡ ಶುಭ್ ಮುಹೂರತ್ ಸಾಥಿ ಎಂಬ ವಿನೂತನ ಜೆನ್ ಎಐ ಪ್ರಚಾರವನ್ನು ಪರಿಚಯಿಸಿದೆ. ಕೌತುಕಮಯವಾದ ಎಐ ಅಂಶದ ಮೂಲಕ, ಈ ಸೆಲೆಬ್ರಿಟಿಗಳು, ಇಂಗ್ಲಿಷ್, ಹಿಂದಿ, ಬಂಗಾಳಿ, ತಮಿಳು, ಕನ್ನಡ ಹಾಗೂ ಇನ್ನೂ ಇತರ ಭಾಷೆಗಳಲ್ಲಿ ತಮ್ಮ ಖರೀದಿ ಪಯಣದ ಮೂಲಕ ಎರಡು ದಶಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಮಾರ್ಗದರ್ಶನ ಒದಗಿಸಲು ಒಂದು ವೈಯಕ್ತೀಕೃತ ವಾದ ವೀಡಿಯೋ ಸಂದೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕೌತುಕವನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಹೀರೋ ಮೋಟೋಕಾರ್ಪ್, ಸೂಪರ್ ಸ್ಟಾರ್ ರಾಮ್ ಚರಣ್ ಅವರನ್ನು ಒಳಗೊಂಡ ಗ್ಲಾಮರ್ ಒಜಿ (Glamour OG) ಮತ್ತು ಕ್ರಿಕೆಟ್ ಐಕಾನ್ ವಿರಾಟ್ ಕೋಹ್ಲಿ ಅವರನ್ನು ಒಳಗೊಂಡ Xtreme ಕಮರ್ಶಿಯಲ್ ನೊಂದಿಗೆ ಸ್ಟೈಲಿಶ್ ಆದ Xtreme 125R ಮತ್ತು Xtreme 160R ಪ್ರದರ್ಶಿಸುವ ಮೂಲಕ ಎರಡು ಹೊಸ ಬ್ರ್ಯಾಂಡ್ ಜಾಹೀರಾತುಗಳನ್ನು ಕೂಡ ಪರಿಚಯಿಸಿದೆ.

ಸಂಸ್ಥೆಯು ಆಕರ್ಷಕ ಹಬ್ಬದ ಕೊಡುಗೆಗಳ ಬುಟ್ಟಿಯನ್ನೇ ಒದಗಿಸುತ್ತಿದ್ದು ಅವು ಇವುಗಳನ್ನು ಒಳಗೊಂಡಿವೆ –

• ಹೀರೋ ಮೋಟೋಕಾರ್ಪ್‌ನ ಪ್ರೀಮಿಯಾ ಔಟ್‌ಲೆಟ್‌ಗಳಲ್ಲಿ ವಿಶೇಷ ವಿನಿಮಯ ಪ್ರಯೋಜನಗಳು
• 4.99%ನಷ್ಟು ಕಡಿಮೆ ಇರುವ ಬಡ್ಡಿದರಗಳು
• ರೂ. 1999 ಕಡಿಮೆ ಡೌನ್ ಪೇಮೆಂಟ್

ಹೆಚ್ಚುವರಿಯಾಗಿ, ಹೀರೋ ಮೋಟೋಕಾರ್ಪ್, ತನ್ನ ಸ್ಕೂಟರ್ ಶ್ರೇಣಿಯ ಮೇಲೆ ವಿಶೇಷ ಕೊಡುಗೆಗಳನ್ನು ಒದಗಿಸುತ್ತಿದೆ. ಡೆಸ್ಟಿನಿ ಪ್ರೈ, Xoom ಕಾಂಬಾಟ್ ಎಡಿಶನ್ ಅಥವಾ Pleasure+ Xtec ಮೇಲೆ ಗ್ರಾಹಕರು ವಿಶೇಷ ಪ್ರಯೋಜನಗಳನ್ನು ಆನಂದಿಅಬಹುದು. 77 ಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಹೀರೋ ಸ್ಕೂಟರುಗಳು, ಮನಶ್ಶಾಂತಿ ಮತ್ತು ವಿಶ್ವಸನೀಯತೆಯ ಖಾತರಿಯನ್ನು ಒದಗಿಸಲು ಭಾರತದಲ್ಲೇ ಪ್ರಪ್ರಥಮವಾದ ಮಹತ್ತರ 5-ವರ್ಷಗಳ ವಾರಂಟಿ ಒಳಗೊಂಡಂತೆ, ಸರಿಸಾಟಿಯಿಲ್ಲದ ಅನುಭವ ಒದಗಿಸುತ್ತದೆ.

ಹೀರೋ ಸ್ಕೂಟರ್ ನ ಖರೀದಿಸುವ ಇತರ ಲಾಭಗಳೆಂದರೆ –

• ರೂ. 7,777 ಮೌಲ್ಯದವರೆಗೆ ಹೀರೋ ಗುಡ್‌ಲೈಫ್ ಲಾಭಗಳು
• ಕೇವಲ ರೂ. 777ಗೆ ವಿಮೆ
• ರೂ. 77ಗೆ ರಸ್ತೆ ಬದಿ ನೆರವು
• 7 ಕಾಂಪ್ಲಿಮೆಂಟರಿ ಸರ್ವಿಸ್‌ಗಳು