Friday, 13th December 2024

ಬಸವರಾಜ ಹೊರಟ್ಟಿಯವರ ಕಾರು ಅಪಘಾತ

ಹುಬ್ಬಳ್ಳಿ: ಸಮಾರಂಭ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಕಾರು ಅಪಘಾತಕ್ಕೀಡಾಗಿದೆ.

ಬಿ.ವಿ.ಬಿ ಕಾಲೇಜಿನಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಈ ಘಟನೆ ನಡೆದಿದೆ.

ಹೊರಟ್ಟಿಯವರ ಕಾರು ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್‌ ಸವಾರ ಕೆಂಚಪ್ಪ ಗೂಡಣ್ಣನವರ ಅವರಿಗೆ ಗಾಯವಾಗಿದೆ.

ಘಟನೆ ನಡೆದ 10 ನಿಮಿಷ ಸ್ಥಳದಲ್ಲಿದ್ದ ಹೊರಟ್ಟಿ, ನಂತರ ಅಲ್ಲಿಂದ ಮತ್ತೊಂದು ವಾಹನದಲ್ಲಿ ತೆರಳಿದ್ದಾರೆ.