Wednesday, 18th September 2024

ಭಾರತದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಎಚ್ ಪಿ ಹೆಸರಿನ ಇಂಕ್ ಟೋನರ್ & ಕಾಟ್ರಿಡ್ಜ್ ಗಳ ವಶ

• ಎಚ್ ಪಿ ಯ ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಕಾನೂನು ಅಧಿಕಾರಿಗಳೊಂದಿಗೆ 4.4 ಲಕ್ಷ ನಕಲಿ ಉತ್ಪನ್ನಗಳ ವಶ
ಬೆಂಗಳೂರು: ವಿಶ್ವವಿಖ್ಯಾತ ಬ್ರ್ಯಾಂಡ್ ಆಗಿರುವ ಎಚ್ ಪಿ ಹೆಸರಿನಲ್ಲಿ ನಕಲಿ ಬ್ರ್ಯಾಂಡ್ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಜಾಲಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ ಪಿ ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಸಂಸ್ಥೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಪ್ರಕಾರ 2022 ರ ನವೆಂಬರ್ ನಿಂದ 2023 ರ ಅಕ್ಟೋಬರ್ ವರೆಗೆ ಭಾರತದಲ್ಲಿ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ನಕಲಿ ಎಚ್ ಪಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಈ ಅವಧಿಯಲ್ಲಿ ಎಚ್ ಪಿ ಯ ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಸಂಸ್ಥೆ ಸಹಭಾಗಿತ್ವದಲ್ಲಿ ಕಾನೂನು ಜಾರಿ ಅಧಿಕಾರಿಗಳು ವಿವಿಧ ಮಾರುಕಟ್ಟೆಗಳಲ್ಲಿ 4.4 ಲಕ್ಷ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ನಕಲಿ ಉತ್ಪನ್ನಗಳಲ್ಲಿ ಟೋನರ್ ಗಳು, ಇಂಕ್ ಕಾಟ್ರಿಡ್ಜ್ ಗಳು ಸೇರಿವೆ. ಗ್ರಾಹಕರಿಗೆ ವಂಚನೆ ಮಾಡಿ ಈ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ತಡೆಯಲಾಗಿದೆ. ಅಧಿಕಾರಿಗಳು ಪ್ರಮುಖವಾಗಿ ಮುಂಬೈ ನಗರದ ವಿವಿಧ ಮಾರುಕಟ್ಟೆಗಳಲ್ಲಿ ದಾಳಿ ನಡೆಸಿ ಈ ನಕಲಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟವನ್ನು ತಡೆದಿದ್ದಾರೆ. ಇಲ್ಲಿ ಒಂದು ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಸಂಸ್ಥೆಯು ಗ್ರಾಹಕರು ಮೋಸ ಹೋಗಿ ಇಂತಹ ಎಚ್ ಪಿ ಹೆಸರಿನ ನಕಲಿ ಉತ್ಪನ್ನಗಳನ್ನು ಖರೀದಿ ಮಾಡುವುದು ಮತ್ತು ಬಳಸುವುದನ್ನು ತಡೆಯುವ ಉದ್ದೇಶದಿಂದ ಇಂತಹ ದಾಳಿಗಳನ್ನು ನಡೆಸಿ ಗ್ರಾಹಕರ ಹಕ್ಕು ಮತ್ತು ಹಣವನ್ನು ಉಳಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಭಾರತದ ಮಾರುಕಟ್ಟೆಯಲ್ಲಿ ವಂಚಕ ಪ್ರಿಂಟಿಂಗ್ ಪೂರೈಕೆಯನ್ನು ತಡೆಯುವುದು ಮತ್ತು ಇಂತಹ ವಂಚನಾ ಜಾಲದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ನಕಲಿ ಇಂಕ್ ಮತ್ತು ಟೋನರ್ ನೋಡಲು ಅಸಲಿ ಎಚ್ ಪಿ ಉತ್ಪನ್ನಗಳಂತೆಯೇ ಇರುತ್ತವೆ. ಆದರೆ, ಕಳಪೆ ಗುಣಮಟ್ಟವನ್ನು ಹೊಂದಿರುತ್ತವೆ. ಇವುಗಳನ್ನು ಬಳಸುವುದರಿಂದ ಬಳಕೆದಾರರಿಗೆ ನಷ್ಟ ಉಂಟಾಗುತ್ತದೆ. ಅಂದರೆ, ಇಂತಹ ಇಂಕ್ ಮತ್ತು ಟೋನರ್ ಗಳಿಂದ ಪ್ರಿಂಟೌಟ್ ಗಳ ಗುಣಮಟ್ಟ ಅತ್ಯಂತ ಕಳಪೆಯದ್ದಾಗಿರುತ್ತದೆ, ಪ್ರಿಂಟರ್ ಕಾರ್ಯಕ್ಷಮತೆಗೆ ಕುಂದುಂಟಾಗುತ್ತದೆ ಮತ್ತು ನಕಲಿ ಕಾಟ್ರಿಡ್ಜ್ ಗಳಲ್ಲಿ ಉಂಟಾಗುವ ಸೋರಿಕೆಯಿಂದಾಗಿ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ ಹಾಗೂ ಕೆಲಸ ಮಾಡದಿರುವ ನಕಲಿ ಕಾಟ್ರಿಡ್ಜ್ ಗಳ ಖರೀದಿಯಿಂದ ಹಣ ಕಳೆದುಕೊಳ್ಳ
ಬೇಕಾಗುತ್ತದೆ.
ಎಚ್ ಪಿ ಇಂಡಿಯಾದ ಪ್ರಿಂಟಿಂಗ್‍ ಸಿಸ್ಟಮ್ಸ್ ನ ಹಿರಿಯ ನಿರ್ದೇಶಕ ಸುನೀಶ್ ರಾಘವನ್ ಅವರು ಮಾತನಾಡಿ, “ಭಾರತದಲ್ಲಿನ ನಮ್ಮ ಮೌಲ್ಯಯುತ ಗ್ರಾಹಕರನ್ನು ನಕಲಿ ಉತ್ಪನ್ನಗಳಿಂದ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಅಭಿಯಾನದ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ ನಕಲಿ ಉತ್ಪನ್ನಗಳಿಂದ ದೂರವಿರುವಂತೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಈ ಅಭಿಯಾನವು ಪ್ರತಿಯೊಬ್ಬರೂ ಖಾತರಿ ಎಚ್ ಪಿ ಉತ್ಪನ್ನಗಳನ್ನು ಖರೀದಿಸುವಂತೆ ಮತ್ತು ಬಳಕೆ ಮಾಡುವಂತೆ ಮಾಡುತ್ತಿದೆ. ಈ ಮೂಲಕ ಗುಣಮಟ್ಟದ ಮಾನದಂಡಗಳನ್ನು ಉನ್ನತೀಕರಿಸುವುದು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ. ಕಸ್ಟಮರ್ ಡೆಲಿವರಿ ಇನ್ಸ್ ಪೆಕ್ಷನ್ ಸರ್ವೀಸ್ ನಂತಹ ಉಪಕ್ರಮಗಳ ಮೂಲಕ ಪ್ರಿಂಟಿಂಗ್ ಉತ್ಪನ್ನಗಳ ನಿಖರತೆಯನ್ನು ಖಾತರಿಪಡಿಸುವುದು, ಅವರಲ್ಲಿ ವಿಶ್ವಾಸ ತುಂಬುವುದು ಮತ್ತು ನೆಮ್ಮದಿಯನ್ನು ನೀಡಿ ಗ್ರಾಹಕರನ್ನು ಸಬಲರನ್ನಾಗಿ ಮಾಡುತ್ತಿದೆ. ಕಾನೂನು ಜಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಾಗೃತಿ ಅಭಿಯಾನ ಉಪಕ್ರಮಗಳ ಮೂಲಕ ನಾವು ನಕಲಿ ಉತ್ಪನ್ನಗಳನ್ನು ಪತ್ತೆ ಹೆಚ್ಚಿ, ಗ್ರಾಹಕರ ವಿಶ್ವಾಸವನ್ನು ರಕ್ಷಿಸುತ್ತಿದ್ದೇವೆ ಮತ್ತು ಉದ್ಯಮದ ಮಾನದಂಡಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದೇವೆ’’ ಎಂದರು.
ಭಾರತದಲ್ಲಿ 2023 ರಲ್ಲಿ ಪ್ರಮುಖ ದಾಳಿಗಳ ಪ್ರಮುಖಾಂಶಗಳು
ಎಚ್ ಪಿ ಸಹಭಾಗಿತ್ವದಲ್ಲಿ 2023 ರಲ್ಲಿ ಭಾರತದ ಮಾರುಕಟ್ಟೆಗಳಲ್ಲಿ ನಕಲಿ ಉತ್ಪನ್ನಗಳ ಮೇಲೆ ದಾಳಿ ಮತ್ತು ವಶಪಡಿಸಿಕೊಂಡ ಪ್ರಮುಖಾಂಶಗಳು ಇಂತಿವೆ:-
ಫೆಬ್ರವರಿ 2023, ಮುಂಬೈ ಪ್ರದೇಶ- ಎಚ್ ಪಿ ಪ್ರಿಂಟರ್ ಗಳಿಗೆ ನಕಲಿ ಕಾಟ್ರಿಡ್ಜ್ ಗಳನ್ನು ತಯಾರಿಸಿ ಅವುಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಅಧಿಕಾರಿಗಳು ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ದಾಳಿ ನಡೆಸಿ ನಕಲಿ ಕಾಟ್ರಿಡ್ಜ್ ಗಳು ಮತ್ತು 25,000 ಕ್ಕೂ ಹೆಚ್ಚು ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 2023, ದೆಹಲಿ ಮತ್ತು ಮುಂಬೈ ಪ್ರದೇಶ – ಮಾರ್ಚ್ ತಿಂಗಳಲ್ಲಿ ಕೆಲವು ದಿನಗಳಲ್ಲಿ ಎಚ್ ಪಿ ಪ್ರಿಂಟರ್ಸ್ ಗೆ ಎರಡು ದೊಡ್ಡ ನಕಲಿ ಪ್ರಿಂಟಿಂಗ್ ಉತ್ಪನ್ನಗಳ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 14,000 ಕ್ಕೂ ಅಧಿಕ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 2023, ಕೋಲ್ಕತ್ತ ಪ್ರದೇಶ- ಎಚ್ ಪಿ ಪ್ರಿಂಟರ್ ಗಳಿಗಾಗಿ ನಕಲಿ ಇಂಕ್ ಮತ್ತು ಟೋನರ್ ಕಾಟ್ರಿಡ್ಜ್ ಗಳನ್ನು ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಕೋಲ್ಕತ್ತ ಮತ್ತು ಇತರೆಡೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಮತ್ತು ಎಚ್ ಪಿ ತಂಡವು ಈ ಸ್ಥಳಗಳ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಸಿದ್ಧವಾಗಿದ್ದ ನಕಲಿ ಕಾಟ್ರಿಡ್ಜ್ ಗಳು ಸೇರಿ 17,000 ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿವೆ.
ಮೇ 2023 ಮುಂಬೈ- ಮುಂಬೈ ಪ್ರದೇಶದಲ್ಲಿ ಎರಡು ಕಡೆಗಳಲ್ಲಿ ಎಚ್ ಪಿ ಪ್ರಿಂಟರ್ ಗಳಿಗೆ ನಕಲಿ ಪ್ರಿಂಟಿಂಗ್ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿತ್ತು. 10 ದಿನಗಳಲ್ಲಿ ಮಾರುಕಟ್ಟೆಗಳ ಮೇಲೆ  ದಾಳಿ ಮಾಡಿದ ಅಧಿಕಾರಿಗಳು 45,000 ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಜೂನ್/ಜುಲೈ 2023, ಮುಂಬೈ- ಎಚ್ ಪಿ ಪ್ರಿಂಟರ್ ಗಳಿಗೆ ನಕಲಿ ಪ್ರಿಂಟಿಂಗ್ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು 9,000 ಕ್ಕೂ ಹೆಚ್ಚು ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 2023, ಮುಂಬೈ- ಎಚ್ ಪಿ ಪ್ರಿಂಟರ್ ಗಳಿಗೆ ನಕಲಿ ಪ್ರಿಂಟಿಂಗ್ ಉತ್ಪನ್ನಗಳನ್ನು ತಯಾರಿಸಿ ಮತ್ತು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ  ಭಾರತೀಯ ಅಧಿಕಾರಿಗಳು ಈ ಸ್ಥಳಗಳ ಮೇಲೆ ದಾಳಿ ನಡೆಸಿ 11,000 ನಕಲಿ ಮತ್ತು ಅಕ್ರಮ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತದಲ್ಲಿ ಎಚ್ ಪಿ ತನ್ನ ಉಚಿತ ಕಸ್ಟಮರ್ ಡೆಲಿವರಿ ಇನ್ಸ್ ಪೆಕ್ಷನ್ (ಸಿಡಿಐ) ಸರ್ವೀಸ್ ನೀಡುತ್ತಿದೆ. ಪ್ರಾಥಮಿಕ ಉದ್ಯಮಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಂತಹ ಕಾರ್ಪೊರೇಟ್ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ದೊಡ್ಡ ಅಥವಾ ಮಧ್ಯಮ ಗಾತ್ರದ ಪ್ರಿಂಟಿಂಗ್ ಪೂರೈಕೆ ವಿತರಣೆಯಲ್ಲಿ ನಕಲಿ ಉತ್ಪನ್ನಗಳೆಂದು ಅನುಮಾನ ಬಂದರೆ ಈ ಉಚಿತ ತಪಾಸಣೆ ಮತ್ತು ಸೇವೆಗೆ ವಿನಂತಿ ಮಾಡಿಕೊಳ್ಳಬಹುದು. ಎಚ್ ಪಿ ಸಂಸ್ಥೆಯು 2023 ರಲ್ಲಿ ಸುಮಾರು 300 ಗ್ರಾಹಕ ವಿತರಣಾ ತಪಾಸಣೆಗಳನ್ನು ನಡೆಸಿದೆ (2023 ರ ಅಕ್ಟೋಬರ್ 31 ಕ್ಕೆ ಕೊನೆಗೊಂಡ ವರ್ಷ).
ಕಂಪನಿಯು ತನ್ನ ಆ್ಯಂಟಿ-ಕೌಂಟರ್ ಫೀಟಿಂಗ್ ಅಂಡ್ ಫ್ರಾಡ್ (ACF) ಅಭಿಯಾನವನ್ನು ನಡೆಸುತ್ತಿದೆ. ಇದು ಎಚ್ ಪಿ ಪ್ರಿಂಟರ್ ಗಳಿಗೆ ನಕಲಿ ಪ್ರಿಂಟಿಂಗ್ ಉತ್ಪನ್ನಗಳನ್ನು ಪೂರೈಕೆ ಮಾಡುವ ಜಾಲದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲು ಜಾರಿ ಅಧಿಕಾರಿಗಳೊಂದಿಗೆ ಎಚ್ ಪಿ ಕೆಲಸ ಮಾಡುತ್ತಿದೆ. ಉದಾಹರಣೆಗೆ ಗುಪ್ತಚರ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ಎಚ್ ಪಿಯ ನಕಲಿ ಉತ್ಪನ್ನಗಳ ಬಗ್ಗೆ hp.com/anticounterfeit ನಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಬಹುದು.

Leave a Reply

Your email address will not be published. Required fields are marked *