Friday, 13th December 2024

ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರನ ಕೊಲೆ ಪ್ರಕರಣ: ಎಂಟು ಮಂದಿ ಬಂಧನ

ಹುಬ್ಬಳ್ಳಿ: ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ್  ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ 30 ವರ್ಷದ ಆಕಾಶ್ ಮಠಪತಿಯನ್ನು ಲೋಹಿಯಾ ನಗರದ ಪವನ್ ಸ್ಕೂಲ್ ಹಿಂಭಾಗ ಕೊಲೆ ಮಾಡಲಾಗಿತ್ತು. ಪುತ್ರ ಆಕಾಶ್​ ಕೊಲೆ ಅವನ ಸ್ನೇಹಿತರಿಂದಲೇ ಆಗಿದೆ ಎಂದು ತಂದೆ ಶೇಖರಯ್ಯ ಮಠಪತಿ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಆಕಾಶ್ ಮಠಪತಿ ಪತ್ನಿ, ಅತ್ತೆ ಮತ್ತಯ ಮಾವ ಸೇರಿದಂತೆ 12 ಜನರ ವಿರುದ್ಧ ಶೇಖರಯ್ಯ ಮಠಪತಿ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರೀದೇವಿ ಮತ್ತು ಮಾವ ಮೋಹನ ನಾಯಕ್​ ಅವರ ಕುಮ್ಮಕ್ಕಿನಿಂದಲೇ ಕೊಲೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ 12 ಜನರಲ್ಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.