ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳನ್ನು ಗುರುತಿಸಿ ಅಭಿಮಾನಿಗಳಿಂದ ಡಾ. ಹುಲಿನಾಯ್ಕರ್ ಗೆ ಅಭಿನಂದನ ಸಮಾರಂಭ ಏರ್ಪಡಿಸಲಾಗಿದೆ.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಎಂ.ಆರ್ ಹುಲಿನಾಯ್ಕರ್ ಅವರಿಗೆ 75 ವರ್ಷದ ಕಳೆದರೂ ಕೂಡ ಈವರೆಗೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.
ಇದೀಗ 77ನೇ ವಸಂತಕ್ಕೆ ಕಾಲಿಟ್ಟಿರುವ ಡಾ. ಹುಲಿನಾಯ್ಕರ್ ರವರ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ, ಡಾ.ಎಂ.ಆರ್.ಹುಲಿನಾಯ್ಕರ್ ಅಮೃತ ಮಹೋತ್ಸವ ಸಮಿತಿ ರಚಿಸಿ ದೇಶ, ವಿದೇಶಗಳಲ್ಲಿ ಹಾಗೂ ರಾಜ್ಯಾದ್ಯಂತ ಇರುವ ಹುಲಿನಾಯ್ಕರ್ ಅವರ ಅಭಿಮಾನಿಗಳು ಸೇರಿ ಇದೇ ತಿಂಗಳು 25.11.2023 ನೇ ಶನಿವಾರ ಬೆಳಗ್ಗೆ 11 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಡಾ.ಕೆ.ಆರ್.ಕಮಲೇಶ್ ನಿರೂಪಣೆಯ ಕ್ರಿಯಾಶೀಲ ಕಾಯಕಯೋಗಿ ಡಾ. ಎಮ್. ಆರ್. ಹುಲಿನಾಯ್ಕರ್ ರವರ ಆತ್ಮಕಥನ ‘ ಅಂತರಂಗದ ಅವಲೋಕನ ‘ ಗ್ರಂಥ ಲೋಕಾ ರಪಣೆಗೊಳ್ಳಲಿದೆ.
ಕಾರ್ಯಕ್ರಮ ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಆಹ್ವಾನಿಸುವ ಸಲುವಾಗಿ ಮಧುಕರ್.ಟಿ.ಎನ್ ಡಾ ಎಂ ಆರ್ ಹುಲಿ ನಾಯ್ಕರ್ ಅಮೃತ ಮಹೋತ್ಸವ ಸಮಿತಿ ಸಂಚಾಲಕರು ಹಾಗೂ ಪ್ರಜಾ ಪ್ರಗತಿ ದಿನಪತ್ರಿಕೆಯ ಉಪಸಂಪಾಧಕರ ನೇತೃತ್ವದಲ್ಲಿ ಹುಲಿನಾಯ್ಕರ್ ಅಭಿಮಾನಿಗಳು ಸೇರಿ ನಗರದ ಪರಿವೀಕ್ಷಣ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.