Thursday, 25th July 2024

‘ಕನ್ನಡದ ಕಬೀರ’ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ (82 ವರ್ಷ) ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು.

ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡದ ಕಬೀರ ಎಂದೇ ಹೆಸರಾಗಿದ್ದರು.

ತಾವು ಹೋದ ಕಡೆಯಲೆಲ್ಲ ಭಾವೈಕ್ಯತೆಯ ಸಂದೇಶ ಸಾರುತ್ತಿದ್ದರು. ಕುರಾನ್, ಬೈಬಲ್, ಭಗದ್ಗೀತೆ ಹಾಗೂ ಶರಣರ ತತ್ವಗಳ ಅಧ್ಯಯನ ಮಾಡಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ, ಧರ್ಮ ಸಹಿಷ್ಠುತೆ ಪಾಠವನ್ನು ಮಾಡುತ್ತಿದ್ದರು. ಇವರ ಸೇವೆಯನ್ನು ಮೆಚ್ಚಿ ಕೇಂದ್ರ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕನ್ನಡನಾಡು ಓರ್ಬ ಸಂತನನ್ನು ಕಳೆದುಕೊಂಡು ಬಡವಾಗಿದ್ದು, ಗಣ್ಯಾತಿಗಣ್ಯರು ಸುತಾರ ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

error: Content is protected !!