Friday, 1st December 2023

ಪಶ್ಚಿಮ ಪದವೀಧರ ಚುನಾವಣೆ: ಪಕ್ಷೇತರ ಅಭ್ಯರ್ಥಿ ಗುರಿಕಾರ ಪರ ಪ್ರಚಾರ

ಹುಬ್ಬಳ್ಳಿ: ‘ಪದವೀಧರರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಮೂಲಕ ನಿರು ದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಇವುಗಳತ್ತ ಬದ್ಧತೆಯಿಂದ ಕೆಲಸ ಮಾಡುವ ಭರವಸೆ ಹೊಂದಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಬೆಂಬ ಲಿಸಬೇಕು’ ಎಂದು ರಂಗಭೂಮಿ ಕಲಾವಿದ ಮಲ್ಲಪ್ಪ ಹೊಂಗಲ್‌ ಅವರು ಶಿರಸಿಯ ಮತದಾರ ರಲ್ಲಿ ಮನವಿ ಮಾಡಿದರು.
ಬಸವರಾಜ ಗುರಿಕಾರ ಪರ ಮತಯಾಚನೆ ಮಾಡಿದ ಅವರು, ‘ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಮಹಾ ಮಂಡಳದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ದುಡಿದಿದ್ದಾರೆ. ಆ ಮೂಲಕ ಬಹಳಷ್ಟು ಜನರಿಗೆ ನೆರವಾಗಿದ್ದಾರೆ. ಪರಿಷತ್ ಪ್ರವೇಶದಿಂದ ಅವರಿಂದ ಕ್ಷೇತ್ರಕ್ಕೆ ಮತ್ತಷ್ಟು ನೆರವಾಗಲಿದೆ’ ಎಂದರು.
ಹಾವೇರಿ ಜಿಲ್ಲೆಯ ವಿವಿಧೆಡೆ ಗುಡ್ಡಪ್ಪ ಗುಂಡಪ್ಪನವರ, ಮಹದೇವಪ್ಪ ಹಲವಾಗ, ರಮೇಶ ಮಾಗೋಡ, ನಾಗರಾಜ ಗುಡ್ಡದ, ಶಿವರಾಜ ಕರಿಗಾರ, ಪ್ರದೀಪ ಕಾಯಕದ, ಪ್ರವೀಣ ಕುಪ್ಪೇಲೂರು ಮತಯಾಚಿಸಿದರು. ಧಾರವಾಡದ ಮನಗುಂಡಿ, ಮನಸೂರು, ಮುಗದ, ಕಲಕೇರಿ ಹಾಗೂ ವಿವಿಧ ಗ್ರಾಮಗಳಲ್ಲಿ ಆನಂದ ಹಾರಿಕೊಪ್ಪ ಅವರ ತಂಡವು ಪ್ರಚಾರ ಕಾರ್ಯ ಮಾಡಿತು.

Leave a Reply

Your email address will not be published. Required fields are marked *

error: Content is protected !!