ಧಾರವಾಡ: ‘ಪದವೀಧರರ ಸಮಸ್ಯೆಗಳನ್ನು ಸರ್ಕಾರದ ಗಮಕ್ಕೆ ತಂದು, ಒತ್ತಡ ಹೇರಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದಲ್ಲಿ ಪದವೀಧರ ಮತದಾರರನ್ನು ಭೇಟಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲುವು ಸಾಧಿಸಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಗುರಿಕಾರ ಅವರನ್ನು ಭೇಟಿ ಮಾಡಿದ ನಿರುದ್ಯೋಗ ಯುವಕರು ತಮ್ಮ ಸಮಸ್ಯೆಗಳನ್ನು ಹೇಳಿ ಕೊಂಡರು. ಪದವೀಧರರ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಕುರಿತು ಧ್ವನಿ ಎತ್ತು ವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುರಿಕಾರ ಪರವಾಗಿ ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ವಿವಿಧ ತಂಡಗಳು ಪ್ರಚಾರ ಕಾರ್ಯ ಕೈ ಗೊಂಡರು. ನಗರದ ಗ್ರಂಥಾಲಯ, ಕಾನೂನು ಕಾಲೇಜು, ಅಬಕಾರಿ ಇಲಾಖೆ, ಸಣ್ಣ ಉಳಿತಾಯ, ಅಬಕಾರಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿ ವಿವಿಧೆಡೆ ಪ್ರಚಾರ ನಡೆಸಿದರು.
ಎಸ್.ಎಸ್.ಕಣವಿ, ಎಂ.ಎಸ್.ಕಳ್ಳಿಮನಿ, ಎಸ್.ಕೆ. ರಾಮದುರ್ಗ, ಪಿ.ಬಿ.ನದಾಫ, ಈರಪ್ಪ ಕಿತ್ತೂರ, ಕೆ.ಎಸ್.ಭೀಮಣ್ಣವರ, ಸಿ.ಎನ್. ರಡ್ಡೇರ, ಐ.ಎಸ್.ಸಾಸ್ವಿಹಳ್ಳಿ, ಕೆ.ಎನ್.ಗಡ್ಡಿ ಇದ್ದರು.