Friday, 29th November 2024

Vijayapura News: ವಕೀಲರೊಂದಿಗೆ 10 ಸಾವಿರ ಅಧಿಕ ಟ್ಯಾಕ್ಟರ ರ‍್ಯಾಲಿ- ಸುವರ್ಣಸೌಧ ಮುತ್ತಿಗೆ

ಇಂಡಿ: ೨ಎ, ಪಂಚಮಸಾಲಿ ಸಮಾಜದ ಹೋರಾಟ ಕಳೆದ ಅನೇಕ ವರ್ಷಗಳಿಂದ ಬಿಜೆಪಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾಡುತ್ತಾ ಬಂದಿದ್ದು ಯಾವ ಸರಕಾರಗಳು ಸರಿಯಾದ ಕ್ರಮಕೈಗೊಳ್ಳದೆ ಇರುವುದರಿಂದ್ದ ಕೂಡಲಸಂಗಮ ಪೀಠದ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೈತೃತ್ವದಲ್ಲಿ ನಮ್ಮ ಸಮುದಾಯದ ವಕೀಲರ ಒಕ್ಕೂಟದೊಂದಿಗೆ ಡಿ.೧೦ರಂದು ೧೦ ಸಾವಿರಕ್ಕಿಂತ ಅಧಿಕ ಟ್ಯಾಕ್ಟರ್ ರ‍್ಯಾಲಿ ಮಾಡಿ ಸುವರ್ಣ ಸೌಧಾ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ವ್ಹಿ.ಎಚ್ ಬಿರಾದಾರ, ನ್ಯಾಯವಾದಿ ಜೇವೂರ ಜಂಟಿ ಹೇಳಿಕೆ ನೀಡಿದ್ದಾರೆ.

ಕ.ರಾ.ಸ,ನೌ ಸಂಘ ತಾಲೂಕಾ ಶಾಖೆ ಇಂಡಿ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ೧ ತಿಂಗಳ ಹಿಂದೆ ವಕೀಲರ ಸಂಘದ ವತಿಯಿಂದ ಬೆಳಗಾವದಲ್ಲಿ ಬೃಹತ್ತ ಸಮಾವೇಶ ಮಾಡಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೂ ಪ್ರಯೋಜನವಾಗಿಲ್ಲ ಈ ಹಿಂದೆ ರಾಜಕೀಯ ನಾಯಕರಾದ ವಿಜಯಾನಂದ ಕಾಶಪ್ಪನವರ್ ೨ಎ ಮೀಸಲಾತಿ ಸರಕಾರ ನೀಡಬೇಕು ಎಂದು ಹೋರಾಟ ಮಾಡಿದ್ದಾರೆ ಆದರೆ ಎಥಾ ಪ್ರಕಾರ ಹೋರಾಟ ಹಾದಿ ತುಳಿಯದೆ ಟ್ಯಾಕ್ಟರ್ ರ‍್ಯಾಲಿ ಮಾಡಬೇಡಿ ಕೈ ಬೀಡಿ ಎಂದು ಹೇಳಿಕೆ ನೀಡಿರುವುದು ನಮ್ಮ ಪೂಜ್ಯ ಕೂಡಲಸಂಗಮಪೀಠದ ಜಗದ್ಗುರುಗಳಿಗೆ ಅವಮಾನ ಮಾಡಿದಂತಾಗಿದೆ.

ಅಷ್ಠೇ ಅಲ್ಲದೆಪಂಚಮಸಾಲಿ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ. ನಿಮ್ಮ ಟಿಕೇಟ ರಾಜಕೀಯ ಲಾಭಕ್ಕಾಗಿ ದಿಲ್ಲಿವರೆಗೆ ಪೂಜ್ಯ ಶ್ರೀಗಳಿಗೆ ಕರೆದುಕೊಂಡು ಹೋಗಿ ನಿಮ್ಮ ಹೈಕಮಾಂಡ ಮನಸ್ಸು ಒಪ್ಪಿಸಿದ್ದಾರೆ ಆದರೆ ಏಕಾ ಎಕೀ ಕೈ ಬಿಡಲು ಕಾರಣ ಎನು ? ಎಂಬುದು ಸಮುದಾಯದ ಜನರಲ್ಲಿ ಸಂಶಯ ಮನೆಮಾಡಿದೆ ಅಧಿಕಾರ ಅಂತಸ್ತುಕ್ಕಿAತ ಸಮುದಾಯ ಮುಖ್ಯ ಎಂಬುದು ಅರಿತುಕೊಳ್ಳಬೇಕು .ಒಂದು ವೆಳೆ ಶ್ರೀಗಳ ವಿರುದ್ಧವಾಗಿ ನಡೆದುಕೊಂಡರೆ ಮುಂಬರುವ ದಿನಗಳಲ್ಲಿ ತಕ್ಕಪಾಠಕಲಿಸುವುದಾಗಿ ತಿಳಿಸಿದ ಅವರು ಕೂಡಲೆ ನಿಮ್ಮ ಹೇಳಿಕೆ ಹಿಂಪಡೆದು ಪಂಚಮಸಾಲಿ ಸಮುದಾಯದ ಮುಂಬರುವ ಪೀಳಿಗೆಯ ಶ್ರೇಯೋಭಿವೃದ್ದಿಯ ಹೋರಾಟದಲ್ಲಿ ಬರಬೇಕು. ಒಂದು ವೇಳೆ ಟ್ಯಾಕ್ಟರ ರ‍್ಯಾಲಿ ತಡೆ ಗಟ್ಟಿ ಸಮುದಾಯದ ಜನರಿಗೆ ಅಡ್ಡಿಪಡಿಸಿದರೆ ಇಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರ ಕಾಂಗ್ರೆಸ್ ಸರಕಾರ ನೇರ ಹೊಣೆಯಾಗುತ್ತದೆ. ರಾಜಕಾರಣಕ್ಕಿಂತ ಸಮುದಾಯ ಮುಖ್ಯ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೋಂಡು ಯಶಸ್ವೀಗೋಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಕೀಲರಾದ ಎಸ್.ಆರ್ ಜೇವೂರ ,ಬಾಳು ಮುಳಜಿ, ಅನೀಲಗೌಡ ಬಿರಾದಾರ, ಬಿ.ಜಿ ಜೊತಗೊಂಡ, ನ್ಯಾಯವಾದಿ ಬಿ.ಬಿಬಿರಾದಾರ, ವ್ಹಿ.ಪಿ ಪಾಟೀಲ, ಶಿವಾನಂದ ಚಾಳಿಕಾರ, ಸೋಮಶೇಖರ ದೇವರ ಸೇರಿದಂತೆ ಅನೇಕ ಮುಖಂಡರು ಇದ್ದರು.

ಇದನ್ನೂ ಓದಿ: #VijayapuraBreakinf