Wednesday, 11th December 2024

ಪೂಜ್ಯ ಅಪ್ಪಾಜೀ ಬೇಗ ಗಣಮುಖರಾಗಲಿ ದೇವರಲ್ಲಿ ಪ್ರಾರ್ಥನೆ: ಗಣಪತಿ ಬಾಣಿಕೋಲ

ಇಂಡಿ: ವಿಜಯಪೂರ ಶ್ರೀಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಶ್ರೀಗಳು ಜ್ಞಾನದ ಭಂಡಾರ ಈ ಭಾಗದ ಜನರಿಗೆ ನಡೇದಾಡುವ ದೇವರು ಇವರ ಆದರ್ಶದ ಪ್ರವಚನದ ನುಡಿಗಳಿಂದ ಜನರು ಪಾವನರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಗಣಪತಿ ಬಾಣಿಕೋಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಿಕ ಪುಣ್ಯಕ್ಷೇತ್ರವಾಗಿದ್ದ ಗುಮ್ಮಟ್ಟ ನಗರಿ ಸಾಧು ಸಂತ ಮಹಾಂತರು ತಪಸ್ವೀಗಳು ನೆಲೆಸಿದ ಪುಣ್ಯಭೂಮಿ ಪೂಜ್ಯ ಅಪ್ಪಾಜೀ ನಿಸ್ವಾರ್ಥ ಸೇವೆ, ಗುರುಧ್ಯಾನ, ಸಮಾನತೆ, ಸರಳ ಜೀವನ, ಅಕ್ಷರ ದಾಸೋಹ, ಶ್ರೀಗಳ ಮೂಲ ಉದ್ದೇಶವಾಗಿದೆ.

ಹಣಸಂಪತ್ತು ವಸ್ತುಗಳ ಮೇಲೆ ಆಸೆ ಹುಟ್ಟಬಾರದು ತಾವು ಧರಿಸುವ ಉಡುಪು ಗಳಿಗೆ ಜೇಬು ಕೂಡಾ ಇಟ್ಟಿಲ್ಲ ಅಧ್ಯಾತ್ಮಿಕವೇ ಜೀವನದ ಉಸಿರಾಗಿಸಿರುವ ಶ್ರೀಗಳು ವಯೋಸಹಜ ಕಾಯಲೆಯಿಂದ ಬಳಲುತ್ತಿರುವುದರಿಂದ ಕೋಟ್ಯಾಂತರ ಭಕ್ತ ಸಮೋಹಕ್ಕೆ ದು:ಖ ವಾಗಿದ್ದು ಭಗವಂತ ಇವರ ಆರೋಗ್ಯದಲ್ಲಿ ಚೇತರಿಕೆಯಾಗಿ ಮತ್ತೆ ಜ್ಞಾನದ ದಾಸೋಹ ಉಣಿಸಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
Read E-Paper click here