Wednesday, 11th December 2024

ಅರಣ್ಯ ಅಧಿಕಾರಿಗಳಿಂದ ಮತ್ತು ಹೈವೇ ರಸ್ತೆ ಕಾಮಗಾರಿಯಿಂದ ರೈತರಿಗೆ ಅನ್ಯಾಯ

ತಿಪಟೂರು: ತುಮಕೂರಿನ ರೈತರ ಬಗ್ಗೆ ಸರಕಾರ ಇತ್ತೀಚಿನ ದಿನಗಳಲ್ಲಿ ತೋರಿಸುತ್ತಿರುವ ನಿರ್ಲಕ್ಷತನದ ಬಗ್ಗೆ, ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿಸುವ ವಿಚಾರವಾಗಿ ಹಾಗೂ ದಿನೇ ದಿನೇ ಕೊಬ್ಬರಿ ಬೆಲೆ ಕುಸಿಯುತ್ತಿರುವ ಬಗ್ಗೆ ಮತ್ತು ಜಿಲ್ಲೆಯ ರೈತರ ಹಿತ ಕಾಪಾಡುವ ಸಲುವಾಗಿ ಇದೇ ಡಿ.26ರಂದು ಬೆಳಿಗ್ಗೆ 10.30 ಕ್ಕೆ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ರೈತ ಕೃಷಿ  ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ.
ರೈತ ಕಾರ್ಮಿಕರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಸಾಧಕ ಬಾಧಕಗಳನ್ನು ಚರ್ಚಿಸುವುದರ ಜೊತೆಗೆ ಇದೇ ಸಮಾವೇಶದಲ್ಲಿ ಸರಕಾರಕ್ಕೆ ಸಂಘಟನೆಯಿಂದ ರೈತರ ಪರವಾಗಿ ಹಲವಾರು ಅಂಶಗಳ ಹಕ್ಕುತ್ತಾಯ ಮಾಡುವುದಾಗಿ, ಜಿಲ್ಲೆಯಾದ್ಯಂತ ಇರುವ ರೈತರುಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ  ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾ ಲಕ ಎಸ್.ಎನ್.ಸ್ವಾಮಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ  ರಂಗದಾಮಯ್ಯ, ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಂಟಿ ಕಾರ್ಯದರ್ಶಿ ಗೋಪಿನಾಥ್ ಉಪಸ್ಥಿತರಿದ್ದರು.