Tuesday, 17th September 2024

ಇಸ್ಪೀಟ್:  ಗ್ರಾಪಂ ಸದಸ್ಯರು ಅಂದರ್

ತುಮಕೂರು: ಇಸ್ಪೀಟ್ ಆಡಿಸಲು ಹೋಗಿ ಗ್ರಾಪಂ ಸದಸ್ಯರೇ ಅಂದರ್ ಆಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿರುವ ವಿ.ಡಿ.ರಾಜಣ್ಣ, ಕುಮಾರ್ ಬಂಧನಕ್ಕೆ ಒಳಗಾಗಿರುವ ಗ್ರಾ.ಪಂ.ಸದಸ್ಯರು.
ಚಿಕ್ಕಕೊಡತಕಲ್ಲು ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಗುರುವಾರ ತಡರಾತ್ರಿ ಪಿಎಸ್‌ಐ ಮೋಹನ್‌ ಕುಮಾರ್  ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾಧ್ಯಂತ ಕೆಲವು ಜನಪ್ರತಿನಿಧಿಗಳು ಪೊಲೀಸರೊಂದಿಗೆ ಶಾಮೀಲಾಗಿ ಇಸ್ಪೀಟ್ ದಂಧೆ ನಡೆಸುತ್ತಿರುವುದು ಹಗಲಿನಷ್ಟೇ ಸತ್ಯವಾಗಿದ್ದರು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.
ವರದಿ ಪರಿಣಾಮ: ನವಂಬರ್ 12ರಂದು ಪತ್ರಿಕೆಯಲ್ಲಿ, ಕಲ್ಪತರು ನಾಡಿನಲ್ಲಿ ಸಕ್ಕರೆಗಿಂತ ಸರಾಗವಾಗಿ ಸಿಗುತ್ತದೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟ ಗೊಂಡಿತ್ತು ಪರಿಣಾಮವಾಗಿ ಅಂದಿನಿಂದಲೂ ಇಡೀ ಜಿಲ್ಲಾದ್ಯಂತ ಇಸ್ಪೀಟ್ ಗಾಂಜಾ ದಂಧೆ ನಡೆಸುವ ಕೆಲವು ಮಂದಿಯನ್ನು ಪೊಲೀಸ್ ಇಲಾಖೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Leave a Reply

Your email address will not be published. Required fields are marked *