Saturday, 14th December 2024

Tumkur Dasara: ತುಮಕೂರು ದಸರಾ:  ಜಂಬೂಸವಾರಿ ಮಾರ್ಗ ಪರಿಶೀಲನೆ

ತುಮಕೂರು: ಜಿಲ್ಲಾಡಳಿತದಿಂದ ನಗರದಲ್ಲಿ ಅಕ್ಟೋಬರ್ ೧೧ ಹಾಗೂ ೧೨ರಂದು ೨ ದಿನಗಳ ಕಾಲ ಜರುಗಲಿರುವ ತುಮಕೂರು ದಸರಾ-೨೦೨೪ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅರಣ್ಯ ಉಪ ಸಂರಕ್ಷಾಣಾಧಿಕಾರಿ ಅನುಪಮ, ಮುಜರಾಯಿ ತಹಶೀಲ್ದಾರ್ ಸವಿತಾ ಅವರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಯೊಂದಿಗೆ ಜಂಬೂಸವಾರಿ ಮಾರ್ಗವನ್ನು ಪರಿಶೀಲಿಸಿದರು. 

ಅಧಿಕಾರಿಗಳ ತಂಡವು ಟೌನ್ ಹಾಲ್ ವೃತ್ತದಿಂದ ಗಾಯತ್ರಿ ಚಿತ್ರ ಮಂದಿರ, ಎಂ.ಜಿ. ರಸ್ತೆ ಕಡೆಗೆ ತಿರುಗಿ ಜಿಲ್ಲಾಧಿಕಾರಿ ಗಳ ಕಚೇರಿ, ಅಮಾನಿಕೆರೆ ಮಾರ್ಗವಾಗಿ ಕೋತಿತೋಪು, ಶಿವ ಕುಮಾರ ಸ್ವಾಮೀಜಿ ವೃತ್ತ, ಭದ್ರಮ ವೃತ್ತ ಮೂಲಕ ಜೂನಿಯರ್ ಕಾಲೇಜು ಆವರಣದವರೆಗೆ ಕಾಲ್ನಡಿಗೆ ಮೂಲಕ ಜಂಬೂಸವಾರಿ ಮಾರ್ಗವನ್ನು ಪರಿಶೀಲಿಸಿತು.

ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯನಿರ್ವಾಹ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಮತ್ತಿರರು ಉಪಸ್ಥಿತರಿದ್ದರು.