Saturday, 12th October 2024

ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಶೀಘ್ರ…!

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ಹೊಸ ಪಕ್ಷ ನೋಂದಣಿ ಕಾರ್ಯದಲ್ಲಿ ತೊಡಗಿದ್ದರಂತೆ. ತಮ್ಮ ನೂತನ ಪಾರ್ಟಿಗೆ ಕಲ್ಯಾಣ ಕರ್ನಾಟಕ ಪಕ್ಷ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.ತನ್ನನ್ನು ದೂರ ಮಾಡುತ್ತಿರುವ ವಿಷಯ ತಿಳಿಯುತ್ತಲೇ ಬಿಜೆಪಿಗೆ ತಿರುಗೇಟು ನೀಡಲು ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡ್ತಾರೆ, ಗಂಗಾವತಿಯಿಂದ ತಾವೇ ಸ್ಪರ್ಧೆ ಮಾಡಿ, ಉತ್ತರ ಕರ್ನಾಟಕದ ಮೂವತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿ ಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತಾರೆ ಎನ್ನಲಾಗಿದೆ.

ಈ ಹಿನ್ನೆಲೆ ಎಚ್ಚೆತ್ತ ಬಿಜೆಪಿ ಹೈಕಮಾಂಡ್ ಸಾರಿಗೆ ಸಚಿವ ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿ ಮನವೊಲಿಸಲು ಮುಂದಾ ಗಿತ್ತು. ಹೈಕಮಾಂಡ್ ನೀಡಿದ ಟಾಸ್ಕ್​ ಸ್ವೀಕರಿಸಿದ್ದ ಶ್ರೀರಾಮುಲು ಆಪ್ತ ಗೆಳೆಯನಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗಲ್ಲ ಎಂಬ ಅಭಯವನ್ನು ಹೈಕಮಾಂಡ್​ಗೆ ನೀಡಿದ್ದರು. ಶ್ರೀರಾಮುಲು ಈ ಬಗ್ಗೆ ಅಮಿತ್ ಶಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಹೇಳಲಾಗಿದೆ.

ಹೊಸ ಪಕ್ಷ ಸ್ಥಾಪನೆಗೆ ಮುಂದಾಗದಂತೆ ಶ್ರೀರಾಮುಲು ಮನವಿ ಮಾಡಿಕೊಂಡರೂ ಜನಾರ್ದನ ರೆಡ್ಡಿ ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಅಚ್ಚರಿಯ ಹೇಳಿಕೆ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಪರೋಕ್ಷವಾಗಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸುಳಿವನ್ನು ನೀಡಿದ್ದರು.

Read E-Paper click here