Wednesday, 11th December 2024

ಸಂಭ್ರಮದ ಸಂವಿಧಾನ ಜಾಗೃತಿ ಜಾಥಾ

ಕೊಲ್ಹಾರ: ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ತಾಲೂಕಿನ ಸಿದ್ದನಾಥ ಗ್ರಾಮಕ್ಕೆ ಆಗಮಿಸಿತು. ತಹಶೀಲ್ದಾರ್ ಎಸ್.ಎಸ್ ನಾಯಕಲಮಠ, ಜಿಲ್ಲಾ ಪಂಚಾಯತ್ ಸಹಾಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಹಾಗೂ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ನಾಗೋಡ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.

ಜಾಥಾ ಮೆರವಣಿಗೆ ಗ್ರಾಮದ ತುಂಬೆಲ್ಲಾ ಸಾಗಿ ಸರಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿ ಬಹಿರಂಗ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿತು.
ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ಜಾಥಾದಲ್ಲಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಡೊಳ್ಳು ಕುಣಿತ, ಬೊಂಬೆಯಾಟ ವಾದ್ಯಮೇಳಗಳು ಭಾಗವಹಿಸಿದ್ದವು. ಶಾಲಾ ಮಕ್ಕಳು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಹಿತ ವಿವಿಧ ನಾಯಕರುಗಳ ವೇಷಭೂಷಣ ಧರಿಸಿ ಗಮನ ಸೆಳೆದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ನಾಗೋಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ್, ಶಿವಲಿಂಗಪ್ಪ ತಳೇವಾಡ, ಈರಣ್ಣ ನಾಗರಾಳ, ಜುಮನಗೌಡ ಪಾಟೀಲ್, ರೇವಣಪ್ಪ ಬೀರಕಬ್ಬಿ, ಶಿವಪುತ್ರಪ್ಪ ಮೇತ್ರಿ, ಮಹಾದೇವಪ್ಪ ಹೂಗಾರ, ಲಕ್ಷ್ಮಣ ಸುಣಗಾರ, ಯಮನೂರಿ ಛಲವಾದಿ, ರವಿ ಛಲವಾದಿ, ಬಸು ಛಲವಾದಿ, ಯಲ್ಲಪ್ಪ ಕೊಲಾರ , ಶಿವಾನಂದ ಕೋರಡ್ಡಿ ಸಿದ್ದನಾಥ ಎಲ್ ಟಿ. ಹಳೆರೊಳ್ಳಿ ಎಲ್.ಟಿ ಬಾಗಾನಗರ ಗ್ರಾಮದ ಮುಖಂಡರು ಇದ್ದರು.