ತುಮಕೂರು: ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದ್ದು, ಗ್ರಾಹಕರ ಸೇವೆಗೆ ಅತ್ಯಾಧುನಿಕ ಸೇವೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳಿಗೆ ಟಿಎಂಸಿಸಿ ಮಾರ್ಗದರ್ಶನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತುಮಕೂರು ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ 15ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಆರ್ಟಿ ಅಫಿಷಿಯಲ್ ಇಂಟೆಲಿ ಜೆನ್ಸ್ ತಂತ್ರಾಂಶಕ್ಕೆ ಚಾಲನೆ ಹಾಗೂ ಬ್ಯಾಂಕ್‌ನ ವರ್ಷದ ಅತ್ಯುತ್ತಮ ಗ್ರಾಹಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಸೇವೆಯನ್ನು ಒದಗಿಸಿದರೆ, ಉತ್ತಮವಾಗಿ ಬೆಳೆಯಬಹು ದಾಗಿದೆ, ಸಹಕಾರಿ ಕಾಯ್ದೆಯಲ್ಲಿ ಮಾಡಲಾದ ಬದಲಾವಣೆಯಿಂದ ಸೌಹಾರ್ದ ಸಹಕಾರ ಸಂಘಗಳು ಜನರ ಬಳಿಗೆ ಹೋಗಿದ್ದು, ಸೌಹಾರ್ದ ಸಂಸ್ಥೆಗಳು ಸಾಕಷ್ಟು ಸಾಧನೆಯನ್ನು ಮಾಡುತ್ತಿದ್ದು, ಸಹಕಾರಿ ಸಂಸ್ಥೆಗಳು ಜನರ ನೆರವಿಗೆ ಹಾಗೂ ಸಮಾಜದ ಎಲ್ಲ ಶ್ರೇಣಿಯ ಜನರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡಲಿ ಎಂದು ಸಲಹೆ ನೀಡಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಇಂದು ಸಹಕಾರಿ ಸಂಸ್ಥೆಗಳು ಉಳಿದುಕೊಳ್ಳಬೇಕಾದರೆ ತಂತ್ರಜ್ಞಾನ ಹಾಗೂ ಸೇವೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದಕ್ಕೆ ಟಿಎಂಸಿಸಿ ಉದಾಹರಣೆಯಾಗಿದೆ. ಸಹಕಾರಿ ಸಂಸ್ಥೆಗಳು ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಹಿಂದುಳಿದರೆ ಸಹಕಾರಿ ಸಂಸ್ಥೆಗಳು ನಶಿಸುವ ಅಪಾಯವನ್ನು ಎದುರಿಸುತ್ತಿವೆ ಇಂತಹ ಸಂದರ್ಭದಲ್ಲಿ ತಂತ್ರಾಂಶದ ಮೂಲಕವೇ ಬ್ಯಾಂಕ್ ವಹಿವಾಟು ನಡೆಸಲು ಅವಕಾಶ ಕಲ್ಪಿಸಿರುವ ಟಿಎಂಸಿಸಿ ಉಳಿದ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗ್ರಾಹಕರ ನಡುವಿನ ಬಾಂಧವ್ಯ ಕಡಿಮೆಯಾಗುತ್ತಿದ್ದು, ಸಹಕಾರಿ ಸಂಸ್ಥೆಗಳು ಇದನ್ನು ಬಳಸಿ ಕೊಂಡು ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ಮುಂದಾಗಬೇಕು, ಹೊಸ ಹೊಸ ತಂತ್ರಜ್ಞಾನ ಹಾಗೂ ಗ್ರಾಹಕರಿಗೆ ಅವಶ್ಯಕವಿರುವ ಸೇವೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಟಿಎಂಸಿಸಿ ಅಧ್ಯಕ್ಷರಾದ ಡಾ. ಎನ್.ಎಸ್.ಜಯಕುಮಾರ್ ಅವರು ಮಾತನಾಡಿ, ಕೋವಿಡ್ ನಿಂದಾಗಿ ಬ್ಯಾಂಕ್ ವಹಿವಾಟುಗಳು ಮೊದಲಿನಂತೆ ನಡೆಯಲು ಸಾಧ್ಯವಿಲ್ಲದೇ ಇರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರ್ಟಿಅಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಅಳವಡಿಸಲಾಗುತ್ತಿದ್ದು, ಡಿಜಿಟಲ್ ತಂತ್ರಾಂಶಕ್ಕಿಂತ ಉನ್ನತವಾಗಿರುವ ಈ ತಂತ್ರಾಂಶ ಅಳವಡಿಸಿ ಕೊಳ್ಳುತ್ತಿ ರುವ ಮೊದಲ ಬ್ಯಾಂಕ್ ನಮ್ಮದಾಗಿದೆ ಎಂದರು.
ಅಮೇರಿಕ ಮೂಲದ ಗ್ಲೋಬಲ್ ಇಂಟೆಲಿಜೆನ್ಟ್ ವರ್ಚುವಲ್ ಅಸಿಸ್ಟೆಂಟ್ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಆರಂಭಗೊಳ್ಳು ತ್ತಿರುವ ಎಐ ತಂತ್ರಾಂಶದಿಂದ ಶಾಖಾರಹಿತವಾಗಿ ಗ್ರಾಹಕರಿಗೆ ನೇರವಾಗಿ ಸೇವೆಯನ್ನು ಒದಗಿಸಲು ಅವಕಾಶವಿದೆ, ಇಂತಹ ತಂತ್ರಾಂಶವನ್ನು ಅಳವಡಿಸಿಕೊಂಡಿರುವ ಪ್ರಪಂಚದ ಮೊದಲ ಸಹಕಾರಿ ಸಂಸ್ಥೆ ಟಿಎಂಸಿಸಿ ಎಂದು ತಿಳಿಸಿದರು.
ಗ್ರಾಹಕರಿಗೆ ಸುಲಭವಾದ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರಾರಂಭಿಸಲಾಗು ತ್ತಿದ್ದು, ಕಳೆದ ಆರು ತಿಂಗಳಿಂದ ಇಂಟರ್ಫೇಸ್ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ತಂತ್ರಾಂಶವನ್ನು ಅಳವಡಿಸಿ ಕೊಳ್ಳಲಾಗುತ್ತಿದ್ದು, ಜಯ ತಂತ್ರಾಂಶದಿಂದ ಗ್ರಾಹಕರು 24*7 ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಅವಶ್ಯಕ ಮಾಹಿತಿಯನ್ನು ಒದಗಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಟಿಎಂಸಿಸಿ ಉಪಾಧ್ಯಕ್ಷ ಟಿ.ಎ.ಶ್ರೀಕರ, ಟಿಎಂಸಿಸಿ ನಿರ್ದೇಶಕರು, ಸಿಇಒ ರಮೇಶ್ ಹಾಗೂ ಸಿಬ್ಬಂದಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ಷದ ಮೂವತ್ತು ಅತ್ಯುತ್ತಮ ಗ್ರಾಹಕರನ್ನು ಅಭಿನಂದಿಸಲಾಯಿತು.