Wednesday, 11th December 2024

ಎಲ್ಲಾ ಪುರಸಭಾ ಸದಸ್ಯರುಗಳು ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಿ

ಚಿಕ್ಕನಾಯಕನಹಳ್ಳಿ: ಪಟ್ಟಣದ ಅಭಿವೃದ್ದಿಗೆ ನಗರೋತ್ಥಾನದಿಂದ ಎರಡು ಕೋಟಿ ಹಣವನ್ನು ಮಂಜೂರು ಮಾಡಿಸಿದ್ದೀನಿ ಇದು ಎರಡನೇ ಬಾರಿಯಾಗಿದ್ದು ಎಲ್ಲಾ ಪುರಸಭಾ ಸದಸ್ಯರುಗಳು ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಿ ಎಂದು ಕಾನೂನು ಹಾಗು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಪುರಸಭೆಯಲ್ಲಿ ೧೫ನೇ ಹಣಕಾಸಿನ ಯೋಜನೆಯ ೨೦೨೨-೨೩ ನೇ ಸಾಲಿನ ಕ್ರಿಯಾ ಯೋಜನೆ ಹಾಗು ವಿವಿಧ ವಿಷಯ ಕುರಿತಂತೆ ಚರ್ಚೆಗಳ ವಿಚಾರದ ವಿಶೇಷ ಸಭೆಯಲ್ಲಿ ಮಾತನಾಡಿದರು. ಚಿಕ್ಕನಾಯಕನಹಳ್ಳಿ ಊರಿನ ಅಭಿವೃದ್ದಿಗೆ ಜೆಸಿಎಂ ಆದ್ಯತೆ ನೀಡುತ್ತಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ ಎಂದು ಪರಸಭಾ ಸದಸ್ಯೆ ರತ್ನಮ್ಮ ಕಳಸೇಗೌಡ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯೇ ನೀಡಿ ಮಾತನಾಡಿದ ಜೆ.ಸಿ.ಎಂ ಪಟ್ಟಣದಲ್ಲಿ ನೂತನವಾಗಿ ತಾಲ್ಲೂಕು ಕಚೇರಿಕಟ್ಟಡ,ಪಿಡಬ್ಲಿಯೋಡಿ ಇಲಾಖೆ ನೂತನ ಕಟ್ಟಡ,ಪೋಲಿಸ್ ಠಾಣೆ ಕಟ್ಟಡ, ನೀರಾವರಿ ಯೋಜನೆಯು ಪ್ರಗತಿಯಲ್ಲಿದೆ ಇವೆಲ್ಲಾ ಚಿಕ್ಕನಾಯಾಕನಹಳ್ಳಿಗೆ ಸಂಬದ ಪಟ್ಟ ಅಭಿವೃದ್ದಿ ಕಾರ್ಯ ಅಲ್ಲವೇ ಎಂದು ನಯವಾಗಿ ಉತ್ತರಿಸಿದರು.

ಮುಂದುವರೆದು ಮಾತನಾಡಿದವರು ಈಗಾಗಲೆ ನಗರೋತ್ಥಾನದಲ್ಲಿ ಪಟ್ಟಣದ ಅಭಿವೃದ್ದಿ ಗೆಂದೆ ೧೦ ಕೋಟಿ ಹಣ ಮಂಜೂರು ಮಾಡಿಸಿದ್ದೀನಿ, ಅಲ್ಲದೆ ಇತ್ತೀಚಿಗೆ ಜಿಲ್ಲೆಗೆ ನಗರೋ ತ್ಥಾನದಲ್ಲಿ ೩ಕೋಟಿ ಅನುದಾನವನ್ನು ಸರ್ಕಾರ ನೀಡಿದೆ ಅದರಲ್ಲಿ ಆದ್ಯತೆ ನೀಡಿ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ೨ಕೋಟಿ, ಹುಳಿಯಾರಿಗೆ ೧ ಕೋಟಿಯನ್ನು ಶಿಫಾರಸ್ಸುಮಾಡಿ ಮಂಜೂರು ಮಾಡಿಸಿ ದ್ದೀನಿ. ಅಭಿವೃದ್ದಿಕಾರ್ಯಕ್ಕೆ ನಾನು ಒತ್ತು ನೀಡಿದ್ದೀನಿ ಪಟ್ಟಣದಲ್ಲಿ ಎಲ್ಲೆಲ್ಲಿ ಅವಶ್ಯವಿದೆ ಆ ಪ್ರದೆಶೇಗಳಲ್ಲಿ ನಗರೋತ್ಥಾನದ ಹಣವನ್ನು ಬಳಸಿಕೊಂಡು ಎಲ್ಲಾ ಪುರಸಭಾ ಸದಸ್ಯರು ಗಳ ಸಹಕಾರದಲ್ಲಿ ಅಭಿವೃದ್ದಿ ಕೆಲಸಕ್ಕೆ ಮುಂದಾಗ ಬೇಕೆ0ದರು.

ಸದಸ್ಯ ರೇಣುಕ ಪ್ರಸಾದ್ ಮಾತನಾಡಿ ೨೦೧೯-೨೦ನೇ ಸಾಲಿನ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಅಡಿಯಲ್ಲಿ ಮನೆ ಗ್ರಾಂಟ್ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಪುರಸಭೆಯ ಅಧಿಕಾರಿಗಳು ಪರಸಭೆ ಆಡಳಿತ ಮಂಡಳಿಯ ಗಮನಕ್ಕೆ ತರದೆ ೧೧೧ಮನೆಗಳಿಗೆ ಗ್ರಾಂಟ್‌ನ ಪಟ್ಟಿ ತಾಯಾರಿಸಿದ್ದಾರೆ. ಆದರೆ ಇದುವರೆಗೂ ಸಂಬAದಪಟ್ಟ ಫಲಾನುಭವಿಗಳಿಗೆ ಮನೆಗಳ ಗ್ರಾಂಟ್ ಲಭಿಸಿಲ್ಲ ಎಂದು ಅಧಿಕಾರಿಗಳವಿರುದ್ದ ಆಕ್ರೋಶ ವ್ಯೆಕ್ತಪಡಿಸಿ ಫಲಾನುಭಿಗಳ ಪಟ್ಟೀಯನ್ನು ಸಚಿವರಿಗೆ ನೀಡಿ ಜನರಿಗೆ ನ್ಯಾಯ ಒದಗಿಸುವಂತೆ ಮನವಿಮಾಡಿದರು.

ಇದಕ್ಕೆ ಸಚಿವರು ನಾನು ಆಶ್ರಯ ಕಮಿಟಿಗೆ ಅಧ್ಯಕ್ಷನಾಗಿದ್ದೇನೆ ಆದರೆ ನನ್ನ ಗಮನಕ್ಕೆ ಬಂದಿಲ್ಲಾ ಎಂದು ಆಶ್ಚರ್ಯ ಚಕಿತಗೊಂಡು ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್‌ರವರನ್ನು ಮಾಹಿತಿ ಕೇಳಿ ಮನೆಗಳ ಗ್ರಾಂಟ್ ವಿಷಯಕ್ಕೆ  ಸಂಬ0ದಿಸಿ ದ0ತೆ ಸರ್ಕಾರದಿಂದ ಸುತ್ತೋಲೆ ಅಥವಾ ಮನೆಗಳ ಗ್ರಾಂಟ್‌ನ ಸಂಖ್ಯಾಗುರಿಯ ನಿರ್ದೇಶನಾ ಪತ್ರ ಇದ್ದರೆ ನೀಡಿ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳು ತಮ್ಮಗೆ ಇಚ್ಚೆಬಂದAತೆ ಆಡಳಿತವನ್ನು ನೆಡೆಸುತ್ತೀರ ಗರಂ ಆದರು.ಇದಕ್ಕೆ ಸಂಬ0ದಿಸಿದ ದಾಖಲಾತಿ ಗಳನ್ನು ನನಗೆ ನೀಡಿ ನಾನು ಪರಿಶೀಲನೆ ನೆಡೆಸುತ್ತೀನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

೧೫ನೇ ಹಣಕಾಸಿನ ಯೋಜನೆಯಡಿ ಮುಕ್ತನಿಧಿಯ ಕ್ರಿಯಾ ಯೋಜನೆಯ ೯.೩೦ ಹಣದಿಂದ ಪರಸಭೆಯ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ದಾರಿಗೆ ಸಿಸಿರಸ್ತೆ ಮಾಡಿಸುವಂತೆ ರೇಣುಕಾಗುರುಮೂರ್ತಿ ಮಾತನಾಡಿದರು. ೧೬ನೇ ವಾರ್ಡ ಸದಸ್ಯ ಸಾಮಿಲ್ ಬಾಬು ಮಾತನಡಿ ಹೊನ್ನೇಬಾಗಿ ಹತ್ತಿರವಿರುವ ಮುಸ್ಲೀಂ ಸಮುದಾಯದ ಸ್ಮಶಾನಕ್ಕೆ ರಸ್ತೆಗೆ ಆದ್ಯತೆ ನೀಡಿ ಅನುದಾನವನ್ನು ಕೊಡಿ ಎಂದು ಮನವಿ ಮಾಡಿದರು.

ಸದಸ್ಯ ಸಿ.ಡಿ.ಸುರೇಶ್ ಮಾತನಡಿ ಹೊನ್ಗನೇಬಾಗಿ ಹತ್ತಿರುವ ಇರುವ ಸ್ಮಾಶಾನವು ಪುರಸಭಾ ವ್ಯಾಪ್ತಿಗೆ ಬರುವುದಿಲ್ಲ ಹಾಗು ಅದು ಪುರಸಭೆಗೆ ಸಂಬAದ ಪಟ್ಟ ಭೂಮಿಯೂ ಅಲ್ಲ ಖಾಸಗಿಗೆ ಸಂಬAದ ಪಟ್ಟ ಸ್ಮಾಶಾನದ ಅಭಿವೃದ್ದಿಗೆ ಪುರಸಭೆಯಿಂದ ಹಣ ವನ್ನು ಖರ್ಚುಮಾಡಲು ಸಾದ್ಯವಾಗುವುದಿಲ್ಲ ಹಾಗೇನಾದರು ಪುಸಭೆಯಿಂದ ಹಣ ನೀಡಿದರೆ ನ್ಯಾಯಾಲಯಕ್ಕೆ ದಾವೆಯನ್ನು ಹಾಕಲಾಗುವುದು ಎಂದು ಎಚ್ಚರಿಸಿದರು.ಬಳಿಕ ಸಾಮಿಲ್ ಬಾಬು, ಜಕಾಉಲ್ಲಾ ಮತ್ತು ಸಿ.ಡಿ.ಸುರೇಶ್ ರವರ ಮದ್ಯೆ ವಾದ ವಾಗ್ವಾದಗಳು ನಡೆದವು. ಮದ್ಯ ಪ್ರವೇಶಿಸಿದ ಜೆ.ಸಿ.ಎಂ ಸಮಾದಾನಗೊಳಿಸಿ ಅಲ್ಲಿಯೇ ರಾಜ್ಯ ವರ್ಕ್ಪ್ ಬೋರ್ಡ್ ಅಧ್ಯಕ್ಷರಿಗೆ ದೂರವಾಣಿ ಕರೆಮಾಡಿ ಹೊನ್ನೇಬಾಗಿ ಹತ್ತಿರವಿರುವ ಮುಸ್ಲೀಂ ಸಮುದಾಯದ ಸ್ಮಾಶನದ ಅಭಿವೃದ್ದಿಗೆ ಹಣ ನೀಡುವಂತೆ ಶಿಫಾರಸ್ಸು ಮಾಡಿದರು.

ಪರಸಭೆಯಲ್ಲಿ ನೆಡೆಯುವ ಸಭೆಗಳಿಗೆ ಪರಿಸರ ಇಂಜಿನೀಯರ್ ಜ್ಯೋತೀಶ್ವರಿ ಗೈರಾಗುತ್ತಿದ್ದಾರೆ ಮತ್ತು ಪುರಸಭೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪುರಸಭಾ ಸದಸ್ಯರಿಂದ ದೂರು ಕೇಳಿಬಂತು. ಪ್ರತಿಕಿಯೆ ನೀಡಿದ ಜೆ.ಸಿ.ಎಂ ನಾನು ಮೊದಲೇ ಸಿಒಗೆ ಹೇಳಿದ್ದೆ ಜ್ಯೋತೀಶ್ವರಿಯವರನ್ನು ಪರಸಭೆಯಿಂದ ಬೇರೆಕಡೆ ವರ್ಗಾಯಿಸಿ ಎಂದಿದ್ದೆ ಎಂದರವರು ರಾಜ್ಯ ಪೌರಾಢಳಿತ ನಿರ್ದೇಶಕರಾದ ಅರ್ಚನಾರವರಿಗೆ ಕರೆಮಾಡಿ ಜ್ಯೋತೀಶ್ವರಿಯವರನ್ನು ಕೂಡಲೆ ವರ್ಗಾಯಿಸುವಂತೆ ಸೂಚಿಸಿ ಮತ್ತೆ ಆಸ್ಥಾನಕ್ಕೆ ಬೇರಬ್ಬರನ್ನು ಭರ್ತಿಮಾಡುವಂತೆ ಸೂಚಿಸಿದರು.

ರುದ್ರಗುಡಿ ಹತ್ತಿರದ ಶುದ್ಧಕುಡಿಯುವ ನೀರಿನ ಘಟಕದ ನಿರ್ವಹಣೆಗೆ ಶೀಘ್ರವಾಗಿ ಟೆಂಡರ್ ಕರೆಯುವಂತೆ ಸಭೆಯಲ್ಲಿ ತೀರ್ಮಾನಿ ಸಲಾಯಿತು. ಸಭೆಯಲ್ಲಿ ಅಧ್ಯಕ್ಷೆ ಪುಷ್ಪಹನುಮಂತರಾಜು,ಉಪಾಧ್ಯಯಕ್ಷೆ ಲಕ್ಮೀಪಾಂಡುರ0ಗ , ಸದಸ್ಯರಾದ ಮಲ್ಲೇಶ್, ರಾಜಶೇಖರ್,ನಾಗರಾಜು ರಾಜಮ್ಮ,ಜಯಮ್ಮ,ಉಮಾ,ಸಿ.ಬಿ.ತಿಪ್ಪೇಸ್ವಾಮಿ,ಮಂಜುನಾಥಗೌಡ,ನಾಮಿನಿಸದಸ್ಯರಾದ ಮಿಲಿಟರಿ ಶಿವಣ್ಣ,ಗೋವಿಂದ ರಾಜು,ಸಿ.ಮಲ್ಲಿಕಾರ್ಜುನಸ್ವಾಮಿ,ದೇವರಾಜು ಸೇರಿದಂತೆ ಮತ್ತಿತರು ಇದ್ದರು.