Friday, 13th December 2024

ಅಭಿವೃದ್ದಿ ಕೆಲಸ ಶ್ವೇತ ಪತ್ರ ಹೊರಡಿಸಿ: ಜೆಸಿಎಂಗೆ ಶಿವಕುಮಾರ್ ತಿರುಗೇಟು

ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಾಲ್ಲೂಕಿನ ಅಭಿವೃದ್ದಿಗೆ ಎಷ್ಟು ಅನುದಾನ ತಂದಿದ್ದಾರೆAದು ನಾಳೆಯೇ ಶ್ವೇತಪತ್ರ ಹೊರಡಿಸಬೇಕು. ಆ ಮೂಲಕ ಸತ್ಯಾಂಶ ಹೊರಗೆ ಬರಬೇಕು ಎಂದು ಚಿಕ್ಕನಾಯಕನಹಳ್ಳಿ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿ ಶಿವಕುಮಾರ್(ದಿನೇಶ್) ತಿರುಗೇಟು ನೀಡಿದ್ದಾರೆ.

ಕ್ಷೇತ್ರದ ಅಭಿವೃದ್ದಿಗೆ ೧೨೦೦ ಕೋಟಿ ಅನುದಾನ ತಂದಿದ್ದೇನೆ. ಇತರರು ಏನು ಕೊಡುಗೆ ಕೊಟ್ಟಿದ್ದಾರೆ ಎಂಬ ಜೆ.ಸಿ.ಎಂ ಅವರ ಬಹಿರಂಗ ಹೇಳಿಕೆಗೆ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದರು.

ಮತದಾರರ ಬಗ್ಗೆ ಕಾಳಜಿ ಬದ್ದತೆ ಇದ್ದರೆ ನೀವು ಶಾಸಕರಾದ ನಂತರ ಈವರಗೆ ಎನಾನಾ ಗಿದೆ? ಯಾವ ಸಾಧನೆಗಳಾಗಿವೆ? ನಿಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬ0ಧಿಸಿದ0ತೆ ಶ್ವೇತಪತ್ರ ಹೊರಡಿಸಿ. ಕ್ಷೇತ್ರದ ಅಭಿವೃದ್ದಿಗೆ ನೀವು ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೀರ, ಎಷ್ಟು ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ, ಮೂಲಭೂತ ಸೌಕರ್ಯ ಒದಗಿಸಿದ್ದೀರ, ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿ ಕಾಮಾಗಾರಿಗೆ ಮುಕ್ತಿ ಎಂದು ಕೊಡುತ್ತೀರ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಮಾಡುವ ಯಾವ ಯೋಜನೆ ನಿರ್ಮಿಸಿದೆ? ಎಂಬ ಲೆಕ್ಕವನ್ನು ಕ್ಷೇತ್ರದ ಜನರ ಮುಂದಿಡಿ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲುತ್ತದೆ. ಕಾರ್ಯಕರ್ತರು ಎದೆಗುಂದದೆ ಪಕ್ಷವನ್ನು ಸಂಘಟಿಸಬೇಕು. ಇಲ್ಲಿ ಕಾಂಗ್ರೆಸ್ ಸದೃಡವಾಗಿದ್ದು ಗೆಲ್ಲಲು ಸಮಸ್ಯೆ ಇಲ್ಲ. ಕ್ಷೇತ್ರದಲ್ಲಿ ಸುಮಾರು ದಿನಗಳಿಂದ ಬೀಡು ಬಿಟ್ಟಿದ್ದು ಕಾಂಗ್ರೆಸ್ ಬಗ್ಗೆ ಒಲವು ವ್ಯಕ್ತವಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಉತ್ಸಾಹ ತುಂಬುವ ಕೆಲಸ ಮಾಡಿದ್ದು ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಸಂಘಟನೆ ಬಹಳ ಸಧೃಡವಾಗಿದೆ ಎಂದರು.

ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ
ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಅಂತಹ ಪಕ್ಷಕ್ಕೆ ಯಾರು ಮತ ನೀಡುತ್ತಾರೆ. ರಾಜಕೀಯ ಮಾಡಲು ಆ ಪಕ್ಷಕ್ಕೆ ಯಾರು ಹೋಗು ತ್ತಾರೆ ಮುಂದೆ ಜೆಡಿಎಸ್ ಪಕ್ಷ ನೆಲ ಕಚ್ಚುತ್ತದೆ. ಕೆಲವು ಕಡೆ ಮಾತ್ರ ಪಕ್ಷ ನೆಲೆ ಉಳಿಸಿಕೊಂಡಿದ್ದು ಮುಂದೆ ಅಂತಹ ಜಾಗದಲ್ಲೂ ನೆಲೆ ಕಳೆದುಕೊಳ್ಳುತ್ತದೆ ಎಂದರು. ಈ ವೇಳೆ ವಕ್ತಾರ ಕೃಷ್ಣೇಗೌಡ ಸೇವಾದಳದ ಅಧ್ಯಕ್ಷ ನಿಶಾನಿ ಕಿರಣ್ ಇದ್ದರು.