ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಕನಸು ಈಡೇರಬೇಕಾದರೆ ಪಕ್ಷದ ಎಲ್ಲಾ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಕೆಲಸ ಮಾಡಬೇಕು ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ನಗರದ ಕೊಲ್ಲಾಪುರದಮ ಸಭಾಂಗಣದಲ್ಲಿ ಹಮಿಕೊಂಡಿದ್ದ ಬೂತ್ ಸಮಿತಿ ಅಭಿಯಾನ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಿಂದ ನೋಂದಣಿ ಪ್ರಾರಂಭ ಮಾಡಿದ್ದೇವೆ. ರಾಜ್ಯದ ಮೂವತ್ತೊಂದು ಜಿಲ್ಲೆಯಲ್ಲಿಯೂ ಸದಸ್ಯತ್ವ ನೋಂದಣಿ ಕಾರ್ಯ ನಡೆಯಲ್ಲಿದ್ದು ಗ್ರಾಮೀಣಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಹಿಂದೆ ತುಮಕೂರು ಜಿಲ್ಲೆಯ ಹನ್ನೊಂದು ಕ್ಷೇತ್ರಗಳ ಪೈಕಿ ಒಂಬತ್ತು ಸ್ಥಾನಗಳನ್ನು ಪಕ್ಷ ಗೆದ್ದಿತ್ತು. ಅದೇ ರೀತಿ ಮುಂದಿನ ದಿನದಲ್ಲೂ ಪಕ್ಷ ಜಿಲ್ಲೆಯಲ್ಲಿ ಸದೃಡವಾಗಬೇಕು . ಮುಂದಿನ ದಿನಗಳಲ್ಲಿ ಜಿಪಂ, ತಾಪಂ, ಪಾಲಿಕೆ,ಪುರಸಭೆಯ ಚುನಾವಣೆಗಳು ನಡೆಯುತ್ತವೆ. ಗ್ರಾಮೀಣ ಮಟ್ಟದಲ್ಲಿ ಪಕ್ಷ ಸದೃಡವಾಗಿ ಬೆಳೆದರೆ ಎಲ್ಲಾ ಕಾರ್ಯಕರ್ತರಿಗೂ ಪ್ರಾತಿನಿಧ್ಯ ಕಲ್ಪಿಸಲು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರಿಗೆ ತರಬೇತಿ ಯನ್ನು ನಿರಂತರವಾಗಿ ಮಾಡುತ್ತೇವೆ ವಿಚಾರ ಸಂಕಿರಣ ಗಳನ್ನು ಹಮ್ಮಿಕೊಂಡು ಪಕ್ಷದ ತತ್ವಸಿದ್ಧಾಂತಗಳನ್ನು ತಿಳಿಸುವಕೆಲಸ ಮಾಡುತ್ತೇವೆ ಎಂದರು.
ಶಾಸಕ ಸುರೇಶ್ ಬಾಬು ಮಾತನಾಡಿ, ಪಕ್ಷವನ್ನು ಕೇಡರ್ ಬೇಸಡ್ ಪಕ್ಷವನ್ನಾಗಿ ಕಟ್ಟಬೇಕಾಗಿದೆ. ಕಳೆದ ಲೋಕಸಭೆಯಲ್ಲಿ ವಿ.ಸೋಮಣ್ಣ ನವರನ್ನು ಗೆಲ್ಲಿಸಲ್ಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ .ಸೋಮಣ್ಣ ಪಕ್ಷದ ಕಾರ್ಯಕರ್ತರನ್ನು ನೆನಪು ಮಾಡಿಕೊಳ್ಳುತ್ತಾರೆ. ಪಕ್ಷವನ್ನು ಸದೃಡವಾಗಿ, ಬಲಿಷ್ಠವಾಗಿ ಕಟ್ಟಬೇಕಾಗಿದೆ, ಹಾಸನ ಮತ್ತು ಮಂಡ್ಯ ಜಿಲ್ಲೆಗಿಂತ ಪಕ್ಷ ತುಮಕೂರಿನಲ್ಲಿ ಸದೃಢವಾಗಿದೆ. ಮಂಡ್ಯ, ಹಾಸನ ಈ ಎರಡು ಜಿಲ್ಲೆಗಳಿಗಿಂತ ತುಮಕೂರು ಜಿಲ್ಲೆಯಲ್ಲಿ ಪಕ್ಷ ಹೆಚ್ಚು ಮತಗಳನ್ನುಗಳಿಸಿದೆ ಎಂದು ಹೇಳಿದರು.
ಬೂತ್ ಮಟ್ಟದ ಸಮಿತಿ ರಚನೆ ಮಾಡುವಾಗ ಎಲ್ಲಾ ಜಾತಿಯವರು ಮತ್ತು ಮಹಿಳೆಯರನ್ನು ಹಿರಿಯರನ್ನು ಒಳಗೊಂಡಂತೆ ಪ್ರಾತಿನಿಧ್ಯ ನೀಡಬೇಕು ಪ್ರತಿ ಬೂತ್ ಮಟ್ಟದ ಸದಸ್ಯರಿಂದಲ್ಲೂ ಸದಸ್ಯತ್ವ ಶುಲ್ಕ ಹತ್ತು ರೂಪಾಯಿ ಪಡೆಯಲೇಬೇಕು ಆಗ ಕಾರ್ಯಕರ್ತರಲ್ಲಿ ನಾನು ಶುಲ್ಕ ನೀಡಿ ಸದಸ್ಯ ಆಗಿದ್ದೇನೆ ಎಂಬ ಹೆಮ್ಮೆ ಇರುತ್ತದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಶಿವಶಂಕರ್ , ಜಿಲ್ಲಾಧ್ಯಕ್ಷ ಆಂಜಿನಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ತಿಮರಾಯಪ್ಪ, ಸುಧಾಕರ್ ಲಾಲ್, ವೀರಭದ್ರಪ್ಪ, ಎಚ್.ಲಿಂಗಪ್ಪ, ಮುಖಂಡರಾದ ಶಾಂತಕುಮಾರ್, ನಾಗರಾಜು, ಮಾಜಿ ಜಿಪಂ ಸದಸ್ಯ ತಿಮಾರೆಡ್ಡಿ, ಗಂಗಣ್ಣ, ಪಾಲಿಕೆ ಮಾಜಿ ಉಪಮೇಯರ್ ನಾಗರಾಜ್, ಪಾಲಿಕೆ ಸದಸ್ಯರಾದ ಮಂಜುನಾಥ್, ಮನು, ಯೋಗೀಶ್, ರಾಮಚಂದ್ರಯ್ಯ, ಮಹಿಳಾ ಘಟಕದ ಲಕ್ಷ್ಮಮ, ರೇಖಾ, ಮುಖಂಡರಾದ ಉಗ್ರೇಶ್, ಭದ್ರಣ್ಣ, ಜಹಂಗೀರ್ ರವೀಶ್, ಕೊಂಡವಾಡಿ ಚಂದ್ರಶೇಖರ್, ಮೆಡಿಕಲ್ ಮಧು, ಮಧು ಗೌಡ ಮತ್ತಿತರರು ಇದ್ದರು.
*
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಲಿತರಿಗೆ ನೀಡುತ್ತಿದ್ದ ಸೌಲಭ್ಯಗಳಿಗೂ ಕತ್ತರಿ ಹಾಕುತ್ತಿದೆ . ಕುಮಾರಸ್ವಾಮಿ ಅವರು ನೀಡಿದ್ದ ಪಂಚರತ್ನ ಯೋಜನೆಗಳೇ ಕಾಂಗ್ರೆಸ್ ನ ಗ್ಯಾರೆಂಟಿಗಳಿಗಿಂತ ಚೆನ್ನಾಗಿದ್ದವು. ರೈತರಿಗೆನಾವು ನನ್ನಾದರೂ ಕೊಟ್ಟರೆ, ರೈತರು ಮರಳಿ ಮತ್ತೆ ನಮಗೆ ನೀಡುತ್ತಾರೆ: ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ.