ಈ ವೇಳೆ ರಾಜೀವ್ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಹಾಗೂ ವಕ್ತಾರ ಮುರುಳೀಧರ್ ಹಾಲಪ್ಪ, ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು ಎಂಬ ಕಾರಣಕ್ಕೆ ನೆರೆ ಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ,ಪರಸ್ಪರ ಮಿಲಿಟರಿ ಸಹಕಾರ ನೀಡಿ, ಶ್ರೀಲಂಕಾ ದಲ್ಲಿ ತಲೆದೊರಿದ್ದ ಅಂತರಿಕ ದಂಗೆಯನ್ನು ಭಾರತದ ಶಾಂತಿ ಪಾಲನಾ ಪಡೆಯ ಮೂಲಕ ಸದೆ ಬಡಿದು, ಅಲ್ಲಿ ಶಾಂತಿ ನೆಲಸುವಂತೆ ಮಾಡಿದ ಕಾರಣಕ್ಕಾಗಿ 1991ರ ಮೇ.21 ರಂದು ಮಾನವ ಬಾಂಬ್ಗೆ ಸಿಕ್ಕಿ ಪ್ರಾಣ್ಯ ತ್ಯಾಗ ಮಾಡಿದರು.
ತಾಯಿ ಇಂದಿರಾಗಾಂಧಿ ಅವರ ಮರಣ ನಂತರ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ರಾಜೀವ್ಗಾಂಧಿ ದೇಶವನ್ನು ವಿಜ್ಞಾನ,ತಂತ್ರಜ್ಞಾನದ ಮೂಲಕ ಮುನ್ನೆಡೆಸುವ ಕನಸು ಕಂಡಿದ್ದರೂ ಅದರ ಭಾಗವಾಗಿಯೇ ಹೊಸ ಹೊಸ ಸ್ಯಾಟಲೈಟ್ ಗಳನ್ನು ಹಾರಿ ಬಿಟ್ಟ ಪರಿಣಾಮ ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಟಿ.ವಿ, ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್ ಕಾಣಲು ಸಾಧ್ಯವಾಗಿದೆ.ಆದರೆ ವಿಜ್ಞಾನದ ಅವಿಷ್ಕಾರವೊಂದಕ್ಕೆ ಬಲಿಯಾಗಿದ್ದು ವಿಪರ್ಯಾಸ.1991ರಲ್ಲಿ ರಾಜೀವ ಗಾಂಧಿ ಅವರು ಮರಣ ಹೊಂದಿದ ಜಾಗ,ಇಂದು ಬೃಹತ್ ಯಾತ್ರಾ ಸ್ಥಳವಾಗಿದೆ.ಹಲವಾರು ಜನರಿಗೆ ಸ್ಪೂರ್ತಿಯ ತಾಣವಾಗಿದೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಜೀವಿತರದಲ್ಲಿ ಒಮ್ಮೆ ಅಲ್ಲಿಗೆ ಭೇಟಿ ನೀಡುವುದರಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ ಮಾತನಾಡಿ,1991 ಮೇ.21ರ ದಿನವನ್ನು ದೇಶದ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಮರೆಯು ವಂತಿಲ್ಲ. ಅತ್ಯ0ತ ದೂರದೃಷ್ಟಿಯುಳ್ಳ ಕೆಲವೇ ನಾಯಕರಲ್ಲಿ ರಾಜೀವ್ಗಾಂಧಿಯೂ ಒಬ್ಬರು, ದೇಶಕ್ಕಾಗಿ ಇಡೀ ಕುಟುಂಬವನ್ನೇ ಸಮರ್ಪಿಸಿಕೊಂಡಿದ್ದಾರೆ.ಅವರ ಹೆಸರಿನ ರಾಜೀವ್ ಜೋತಿ ಯಾತ್ರೆ ಇಂದು ತುಮಕೂರಿಗೆ ಬಂದಿದೆ.ರಾಜೀವ್ಗಾ0ಧಿ ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಮತ್ತೊಮ್ಮೆ ದೇಶದಲ್ಲಿ ಶಾಂತಿ ನೆಲಸುವಂತೆ ಮಾಡೋಣ ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ಜೋತಿ ಯಾತ್ರೆ ಸಮಿತಿಯ ಅಧ್ಯಕ್ಷರಾದ ದೊರೈರಾಜು,ಉಪಾಧ್ಯಕ್ಷ ಗೋಮಾತೀಶನ್ ಆಯ್ಯರ್, ಶ್ರೀನಿವಾಸಪ್ಪ ಕಾರ್ಯಾ ಧ್ಯಕ್ಷರು,ಸದಸ್ಯರಾದ ರಾಲ್ಪ್ ಮತ್ತಿತರರು ಜೋತಿಯೊಂದಿಗೆ ಆಗಮಿಸಿದ್ದರು.ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್,ಮುಖಂಡರಾದ ಷಣ್ಮುಖಪ್ಪ, ಸಿದ್ದಲಿಂಗೇಗೌಡ,ರೆಡ್ಡಿ ಚಿನ್ನಯಲ್ಲಪ್ಪ, ತರುಣೇಶ್, ಮಂಜುನಾಥ್, ನಟರಾಜು, ಅಮ್ಜಾದ್ವುಲ್ಲಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕವಿತಾ, ಮಂಗಳಮ್ಮ, ಸುಜಾತ, ವಸುಂಧರ್, ಭಾಗ್ಯಮ್ಮ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.