Saturday, 23rd November 2024

K H Muniyappa: ರಾಜ್ಯದಲ್ಲಿ ಎಪಿಎಲ್ ಕಾರ್ಡುಗಳ ರದ್ದು ಮಾಡುವುದಿಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎ.ಪಿ.ಎಲ್.ಪಡಿತರ ಕಾರ್ಡ್ಗಳನ್ನು ರದ್ದುಪಡಿಸಿಲ್ಲ, ಮುಂದೆಯೂ ರದ್ದುಗೊಳಿಸುವುದಿಲ್ಲ. ಜನರು ಗೊಂದಲಕ್ಕೆ ಒಳಗಾಗಬಾರದು. ಅಪಪ್ರಚಾರಗಳಿಗೆ ಕಿವಿಗೊಡಬಾರದು. ಬಿ.ಪಿ.ಎಲ್. ಕಾರ್ಡ್ ಹೊಂದಲು ಅರ್ಹರಲ್ಲವರ ಪರಿಷ್ಕರಣೆ ನಡೆಯುತ್ತಿದೆ. ಅರ್ಹರಲ್ಲದವರನ್ನು ಎ.ಪಿ.ಎಲ್. ಪಟ್ಟಿಗೆ ಸೇರಿಸಲಾಗುತ್ತದೆ. ರದ್ದುಗೊಳಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಗೊಡ್ಲುಮುದ್ದೇನಹಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ ೮೦ ರಷ್ಟು ಮಂದಿ ಬಿ.ಪಿ.ಎಲ್. ಕಾರ್ಡುಗಳು ಹೊಂದಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಶೇ ೫೦ ರಷ್ಟು ಮಂದಿ ಬಿ.ಪಿ.ಎಲ್. ಕಾರ್ಡ್ಗಳು ಹೊಂದಿದ್ದಾರೆ. ನಮ್ಮ ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿದಾರರು, ಕಾರುಗಳು ಹೊಂದಿರು ವವರು, ಅನುಕೂಲಸ್ಥರ ಕುರಿತು ಪರಿಶೀಲನೆ ನಡೆಸಿ, ಅವರನ್ನು  ಎ.ಪಿ.ಎಲ್.ಗೆ ಸೇರಿಸುತ್ತೇವೆ. ರಾಜ್ಯದಲ್ಲಿ ೧ ಕೋಟಿ ೨೬ ಲಕ್ಷ ಬಿ.ಪಿ.ಎಲ್. ಕಾರ್ಡುಗಳಿಗೆ ಪಡಿತರ  ನೀಡುತ್ತಿದ್ದೇವೆ.ಇದನು ಅರಿಯದೆ ವಿರೋಧ ಪಕ್ಷಗಳು ರಾಜಕೀಯ ಪ್ರೇರಿತ ಮಾತುಗಳನ್ನು ಆಡುತ್ತಿದ್ದಾರೆ ಎಂದರು.

ಹಿAದಿನ ಬಿಜೆಪಿ ಸರ್ಕಾರ ರಾಜ್ಯದ ೬.೫ ಕೋಟಿ ಜನಸಂಖ್ಯೆಯಲ್ಲಿ ೪.೫ ಕೋಟಿ ಜನರನ್ನು ಬಿ.ಪಿ.ಎಲ್. ಪಟ್ಟಿಗೆ ಸೇರಿಸಿ ಕಾರ್ಡುಗಳು ವಿತರಣೆ ಮಾಡಿದ್ದಾರೆ. ಹಿಂದೆ ಎಪಿಎಲ್ ಕಾರ್ಡುದಾರರಿಗೂ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ಕೊಡುತ್ತಿದ್ದೆವು. ಆದರೆ, ಬಹಳಷ್ಟು ಮಂದಿ ತೆಗೆದು ಕೊಳ್ಳುತ್ತಿರಲಿಲ್ಲ. ಆದ್ದರಿಂದ ಸದ್ಯಕ್ಕೆ ಸಬ್ಸಿಡಿ ನಿಲ್ಲಿಸಿದ್ದೇವೆ. ಪರಿಷ್ಕರಣೆ ಪೂರ್ಣಗೊಂಡ ನಂತರ ಎ.ಪಿ.ಎಲ್. ಕಾರ್ಡುದಾರರು ಆಹಾರ ಧಾನ್ಯಗಳು ಬೇಕೆಂದರೆ ಕೊಡುತ್ತೇವೆ. ಕೇಳುವವರ ಸಂಖ್ಯೆ ತುಂಬಾ ವಿರಳವಾಗಿದೆ. ನಮ್ಮ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುದಾನದ ಕೊರತೆಯಿಲ್ಲ. ಬಜೆಟ್‌ನಲ್ಲಿ ೮ ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿದ್ದೇವೆ. ೬೫೦೦ ರಿಂದ ೭ ಸಾವಿರ  ಕೋಟಿ ಖರ್ಚಾಗುತ್ತಿದೆ. ಇನ್ನೂ ೧ ಸಾವಿರ ಕೋಟಿ ಹಣ ಉಳಿತಾಯವಾಗುತ್ತಿದೆ. ಹಣದ ಕೊರತೆ ನಮ್ಮಲ್ಲಿ ಇಲ್ಲ,ಚುನಾವಣೆ ಗಿಮಿಕ್‌ಗಾಗಿ ವಿರೋಧ ಪಕ್ಷಗಳು ಎಪಿಎಲ್ ಕಾರ್ಡುಗಳ ಬಗ್ಗೆ ಪ್ರಚಾರ ಮಾಡುತ್ತಿವೆ ಎಂದು ದೂರಿದರು..