Wednesday, 11th December 2024

ಅ.೧೭ ರಂದು ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಯ ಹಕ್ಕೋತ್ತಾಯ ಸಮಾವೇಶ

ಚಿಕ್ಕನಾಯಕನಹಳ್ಳಿ : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅ.೧೭ರಂದು ಪ್ರತಿಭಾಚಿ ಪುರಸ್ಕಾರ ಹಾಗು ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಗೆ ಹಕ್ಕೋತ್ತಾಯ ಸಮಾ ವೇಶ ಆಯೋಜಿಸಲಾಗಿದೆ ಎಂದು ಕಾಡುಗೊಲ್ಲ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ ಹೇಳಿದರು.

ಶುಕ್ರವಾರ ತಾ.ಪಂಚಾಯತ್ ಸಭಾಂಗಣದಲ್ಲಿ ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಗೆ ಹೋರಾಟ ವಿಚಾರ ಕುರಿತು ತಾಲ್ಲೂಕು ಕಾಡುಗೊಲ್ಲರ ಸಂಘದಿ0ದ ನಡೆಸಿದ ಸುದ್ದಿ ಗೊಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಗೌಡ, ಯಜಮಾನ, ಪೂಜರಪ್ಪಗಳು ಸೇರಿದಂತೆ ಸಮುದಾಯದ ಅನೇಕರ ಅಪ್ಪಣೆಯ ಮೇರೆಗೆ ಸಮಾವೇಶವು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಸ್ಕಾಂ ಕಚೇರಿಯಿಂದ ಕರಗ ಹಾಗು ಕಲಾ ತಂಡಗಳ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ, ಕಾಡುಗೊಲ್ಲರ ರಾಜ್ಯಾಧ್ಯಕ್ಷ ರಾಜಣ್ಣ, ಮಾಜಿ ಶಾಸಕರಾದ ಕಿರಣ್‌ಕುಮಾರ್, ಸುರೇಶ್‌ ಬಾಬು, ಲಕ್ಕಪ್ಪ, ಜಯಚಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಸಲು ಸತೀಷ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೌರವಧ್ಯಕ್ಷ ಬಸವರಾಜು ಮಾತನಾಡಿ ಕಾಡುಗೊಲ್ಲ ಸಮುದಾಯ ಬುಡಕಟ್ಟು ಪರಂಪರೆಯನ್ನು ಹೊಂದಿದ್ದು ಹಟ್ಟಿಗಳಲ್ಲಿ ವಾಸವಾಗಿದ್ದಾರೆ. ರಾಜ್ಯದ ೧೨ ಜಿಲ್ಲೆಗಳಿಲ್ಲಿ ೬.೫ ಲಕ್ಷ ಕಾಡುಗೊಲ್ಲರ ಜನಸಂಖ್ಯೆ ಇದೆ. ಪ್ರೊ.ಅನ್ನಪೂರ್ಣ ಅವರು ಕುಲಶಾಸ್ತç ಅಧ್ಯಯನ ನಡೆಸಿ ವರದಿಯನ್ನು ಸರಕಾರಗಳಿಗೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ಸಬಲೀಕರಣದ ಸಚಿವ ಎ.ನಾರಾಯಣ ಸ್ವಾಮಿ, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ನಾಗೇಶ್, ರಾಜ್ಯಾಧ್ಯಕ್ಷ ರಾಜಣ್ಣನವರ ಸಹಕಾರದಿಂದ ಕೇಂದ್ರ ಬುಡಕಟ್ಟು ಸಚಿವರಾದ ಅರ್ಜುನ್ ಮುಂಡಾ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಉಪಾಧ್ಯಕ್ಷ ರಾಮಯ್ಯ, ಕಾಡುಗೊಲ್ಲ ಯುವಸೇನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ರಾಮಪ್ಪನಹಟ್ಟಿ, ತಾ.ಅಧ್ಯಕ್ಷ ಮಂಜು ಕೆಂಪರಾಯನಹಟ್ಟಿ, ಮುಖಂಡರಾದ ಲಿಂಗರಾಜು, ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.