Saturday, 23rd November 2024

Kalaburagi News: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೊಟ್ಟೆ, ಪೌಷ್ಠಿಕ ಆಹಾರದ ಪೂರೈಕೆಯಲ್ಲಿ ಅವ್ಯವಹಾರ

ತನಿಖೆಗೆ ತಾಲೂಕ ದಲಿತ ಸೇನೆ ಆಗ್ರಹ
ಚಿಂಚೋಳಿ :
ಶಿಶು ಅಭಿವೃದ್ಧಿ ಇಲಾಖೆಯು ತಾಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೂರೈಕೆ ಆಗುವ ಪೌಷ್ಠಿಕ ಆಹಾರ ಮತ್ತು ಮೊಟ್ಟೆಗಳು ಮಕ್ಕಳಿಗೆ ತಲುಪಿಸದೆ ಕಡಿತಗೊಳಿಸಿ ಅವ್ಯವಹಾರ ನಡೆಸಲಾಗುತ್ತಿದೆ. ಪೂರೈಕೆ ಮಾಡುತ್ತಿರುವ ಇಲಾಖೆ ತನಿಖೆ ಮಾಡಿಸಬೇಕೆಂದು ಆರೋಪಿಸಿ ತಾಲೂಕ ದಲಿತ ಸೇನೆ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸರಕಾರಗಳು ಬಡವರ ಕಲ್ಯಾಣಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದ ಜನರ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢತೆಗೆ ಯೋಜನೆಗಳು ಜಾರಿಗೆ ತಂದಿದೆ. ಆದರೆ ಯೋಜನೆಗಳು ಗ್ರಾಮೀಣ ಭಾಗದ ಜನರ ಮನೆಯ ಬಾಗಿಲಿಗೆ ತಲುಪಿಸದೆ ನುಂಗಿ ಹಾಕುವ ಕೆಲಸ ಇಲಾಖೆ ಮಾಡುತ್ತಿದೆ. ಹೀಗಾಗಿ ಇಲಾಖೆಯ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.

ತಾಲೂಕಿನ ಹೂವಿನಬಾವಿ, ರುಸ್ತಂಪೂರ, ಯಲ್ಕಪಳ್ಳಿ, ಕನಕಪೂರ ಸೇರಿ ವಿವಿಧ ಗ್ರಾಮಗಳಲ್ಲಿ ಜೆಜೆಎಮ್ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ಜರುಗಿಸಿ ಅವ್ಯವಹಾರ ಮಾಡಲಾಗಿದೆ ಎಂದು 2022 ಡಿಸೆಂಬರ್ 13 ಮತ್ತು 2023 ಅ.15 ರಂದು ದೂರು ಸಲ್ಲಿಸಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.

15 ದಿನದೊಳಗೆ ತನಿಖೆಗೆ ಒಳಪಡಿಸಿ ಕ್ರಮಕೈಗೊಳ್ಳಬೇಕು. ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರತಿದಿನ ಮೊಟ್ಟೆ ವಿತರಣೆ ಮಾಡಬೇಕೆಂದು ರಾಜ್ಯ ಸರಕಾರ ಶಿಕ್ಷಣ ಇಲಾಖೆಗೆ ಆದೇಶಿಸಲಾಗಿರುತ್ತದೆ. ಆದರೆ ದಿನನಿತ್ಯ ಮಕ್ಕಳಿಗೆ ಮೊಟ್ಟೆ ವಿತರಿಸದೆ ಸರಕಾರದ ಆದೇಶ ಗಾಳಿಗೆ ತೂರಿ ಉಲ್ಲಂಘಿಸಲಾಗುತ್ತಿದೆ. 2023-24ನೇ ಸಾಲಿನ 34 ಅತಿಥಿ ಶಿಕ್ಷಕರ ಸಂಬಳ ಪಾವತಿಸದೆ, 2024-25ನೇ ಸಾಲಿನ ಅತಿಥಿ ಶಿಕ್ಷಕರ ಸಂಬಳ ಬಾಕಿ ಉಳಿಸಿಕೊಂಡಿದೆ. ಅಧಿಕಾರಿಗಳು ಮನ ಬಂದಂತೆ ಒಬ್ಬರಿಗೆ 30, 20, 40, ಸಾವಿರ ರೂಪಾಯಿಗಳು ಪಾವತಿಸಿ, ಸರಕಾರದ ಸಂಬಳ ಪಾವತಿಯ ಅನುದಾನ ದುರ್ಬಳಕೆ ಮಾಡಿಕೊಂಡು ನೈಜ ಅರ್ಹ ಅತಿಥಿ ಶಿಕ್ಷಕರಿಗೆ ಸಂಬಳ ಪಾವತಿಸುತ್ತಿಲ್ಲ. ಇದರ ಸಂಪೂರ್ಣ ತನಿಖೆಗೆ ಒಳಪಡಿಸಬೇಕೆಂದು ತಾಲೂಕ ದಲಿತ ಸೇನೆ ಸಮಿತಿ ಅಧ್ಯಕ್ಷ ರಾಘವೇಂದ್ರ ಹೂವಿನಬಾವಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಲ್ಲವೂ 15 ದಿನದೊಳಗಡೆ ತನಿಖೆ ನಡೆಸಿ ಕ್ರಮಕೈಗೊಳ ಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆ ಹೋರಾಟಗಾರ ಕಾಶಿನಾಥ ಶಿಂಧೆ, ಚೇತನ ನಿರಾಳಕರ್, ಶ್ರೀಕಾಂತ ರುಸ್ತಂಪೂರ, ರಮೇಶ ಕುಡ್ಡಳ್ಳಿ, ಮಾರುತಿ ತೇಗಲತಿಪ್ಪಿ, ವೀರಶೆಟ್ಟಿ, ಖತಲಪ್ಪ, ದೇವೀಂದ್ರಪ್ಪ ಕಟ್ಟಿಮನಿ, ನಾಗರಾಜ ಬೇವಿನಕರ್, ರಾಜಕುಮಾರ ದೊಟಿಕೊಳ ಅವರು ಸೇರಿ ಸಮಿತಿಯ ಹಲವು ಕಾರ್ಯಕರ್ತರು ಇದ್ದರು.