Wednesday, 11th December 2024

ಬಾಹ್ಯಾಕಾಶದಲ್ಲೂ ಗ್ರಾಫ್ ಸಿದ್ಧಾಂತ ಅನ್ವಯ: ಡಾ. ಖಂಡೇಲ್ವಾಲ

ಕಲಬುರಗಿ: ಗ್ರಾಫ್ ಸಿದ್ಧಾಂತ ಅನ್ವಯ ಕೇವಲ ಗಣಿತಕ್ಕಷ್ಟೇ ಸೀಮಿತವಾಗಿರದೆ ಎಲ್ಲಾ ವಿಷಯದಲ್ಲಿದೆ. ಯಾವುದೇ ವಿಷಯ ವನ್ನು ಅತ್ಯಂತ ಸರಳ ಮತ್ತು ವೇಗವಾಗಿ ತಿಳಿದುಕೊಳ್ಳಲು ಗ್ರಾಫ್ಗಳು ಸಹಾಯಕ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಾ ಖಂಡೇಲ್ವಾಲ ಹೇಳಿದರು.

Read This

ರಾಷ್ಟ್ರೀಯ ಲಾಂಛನದ ಅನಗತ್ಯ ವಿವಾದ

http://vishwavani.news/national-emblem/

ಕೆಬಿಎನ್ ವಿಶ್ವವಿದ್ಯಾಲಯದ ಗಣಿತ ವಿಭಾಗದಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಗ್ರಾಫ್ ಸಿದ್ಧಾಂತ, ಗ್ರೂಪ್ ಸಿದ್ಧಾಂತ, ಅಲ್ಗೊರೋತಮ್, ಟೊಪೋಗ್ರಾಫಿಕಲ್, ಕೂಮ್ಯುನಿಟೊರಿಯಲ್ ಗ್ರಾಫ್ ಸಿದ್ಧಾಂತ ಇವುಗಳ ವ್ಯಾಖ್ಯೆ, ಸ್ವರೂಪ ಮತ್ತು ವ್ಯಾಪ್ತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಗ್ರಾಫ್ ಸಿದ್ಧಾಂತ ಎಂಬುದು ಬಹಳ ವ್ಯಾಪಾಕವಾಗಿ ಹರಡಿದೆ. ಗ್ರಾಫ್ ಸಿದ್ಧಾಂತ ಭೌತ ವಿಜ್ಞಾನ, ರಾಸಾಯಶಾಸ್ತ್ರ, ಮನೋ ವೈಜ್ಞಾನ, ಸಮಾಜಶಾಸ್ತ್ರ, ಸಮೂಹ ಸಂವಹನ, ಮುಂತಾದ ಕ್ಷೇತ್ರಗಳ್ಳಲ್ಲೂ ಅತಿಯಾಗಿ ಬಳಕೆಯಾಗುತ್ತದೆ. ವಿದ್ಯಾರ್ಥಿಗಳು ಸ್ವಂತ ಅಧ್ಯ ಯನ ನಡೆಸಬೇಕು. ಸಂಶೋಧನ ಮನೋಭಾವನೆ ಇಟ್ಟುಕೊಳ್ಳಬೇಕು.

ನವ ಆವಿಷ್ಕಾರವನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಬಹುದು. ವಿದ್ಯಾರ್ಥಿಗಳು ಹೊಸದನ್ನು ಕಲಿಯುತ್ತಿರಬೇಕು. ಅಂತರ್ಜಾಲ ಬಳಕೆ ಗೊತ್ತಿರಬೇಕು. ಉನ್ನತ ವ್ಯಾಸಂಗದ ವೇಬ್ಸೈಟಗಳಾದ ಯುಜಿಸಿ, ಎಂಎಚ್ ಆರ್ ಡಿ ಗಳನ್ನು ಬ್ರೌಸ್ ಮಾಡುತ್ತಿರಬೇಕು. ತಮಗೆ ದೊರಕುವ ಫೇಲೋಶಿಪ್ ಗಳ ಸದ್ಭಾಳಿಕೆ ಮಾಡಿಕೊಳ್ಳಿ ಎಂದು ನುಡಿದರು.

ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿವಿಯ ಕಲಾ, ಭಾಷಾ, ಮಾನವೀಯ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್, ಡಾ ನಿಶಾತ ಆರೀಫ್ ಹುಸೇನಿ ಮಾತನಾಡುತ್ತ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕ ಹಾಗೆ ತಮ್ಮ ಜ್ಞಾನವನ್ನು ಬೆಳೆಸಿ ಕೊಳ್ಳುತ್ತಿರಬೇಕು. ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಕೇವಲ ಮನೋ ರಂಜಣೆಗಾಗಿ ಅಲ್ಲˌ ಅಲ್ಲಿಂದ ಮಾಹಿತಿಯನ್ನೂ ಪಡೆಯಬಹುದು. ಶೈಕ್ಷಣಿಕೆವಾಗಿ ಅಭಿವೃದ್ಧಿ ಹೊಂದಲು ಸಾಮಾಜಿಕ ಜಾಲತಾಣ ಅನುಕೂಲ ಕರ. ತಮ್ಮ ಸುತ್ತ ಮುತ್ತಲಿನ ಜಗತ್ತಿನ ಪ್ರಚಲಿತ ವಿದ್ಯಮಾನ ಅವರಿಗೆ ಗೊತ್ತಿರಬೇಕು. ಪಿಎಚ್ಡಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿವಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ನಮ್ರತಾ ರಾವುತ, ಡಾ ಹಮೀದ್ ಅಕ್ಬರ್, ಡಾ.ಮೈಮುನ ಸರಡಗಿ, ಡಾ ಅಥರ್ ಮೊಯಿಸ್, ಡಾ. ನಗ್ಮಾ, ಡಾ. ಸುನಿಲ್, ಡಾ.ಜಹಾರಾನ, ಡಾ.ಅತಿಯಾ ಸುಲ್ತಾನ, ಡಾ.ಜಾವೆದ್ ಅಕ್ತರ್, ಡಾ. ಸೀಮಾ, ಸನಾ ಇಜಾಜ್, ಡಾ ಫಿರ್ದೋಸ್, ಡಾ ನಾಝಿಯಾ, ಪ್ರಿಯಾಂಕಾ, ಟೆಚ್ನಿಷಿಯನ್ ಸಂಗೀತ ಮತ್ತು ಗಣಿತ ವಿಭಾಗದ ವಿದ್ಯಾರ್ಥಿಗಳಿದ್ದರು.