Friday, 13th December 2024

ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಕಲಿಯಲಿ: ಪ್ರೊ.ನಿರ್ಮಲ್ ರಾಜ್

ತುಮಕೂರು ವಿವಿಯಲ್ಲಿ 18 ಪಠ್ಯಪುಸ್ತಕಗಳ ಲೋಕಾರ್ಪಣೆ
ತುಮಕೂರು: ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ವಿಚಾರಗಳನ್ನು ಕಲಿತು ಅರಿತುಕೊಳ್ಳ ಬೇಕು ಎಂದು ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗ ಹಾಗೂ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ವತಿಯಿಂದ ನವೆಂಬರ್ 30 ರಂದು ಸರ್. ಎಂ. ವಿಶ್ವೇಶ್ವ ರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟಿçÃಯ ಶಿಕ್ಷಣ ನೀತಿ- 2020ರ ಪ್ರಕಾರ ಪದವಿ ತರಗತಿಗಳಿಗೆ ಸಿದ್ಧಪಡಿಸಲಾದ ಕನ್ನಡ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ 18 ಪಠ್ಯಪುಸ್ತಕ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳು ಬೆಂಗಳೂರAತಹ ಮಹಾನಗರಗಳಲ್ಲಿ ಕೆಲಸಗಿಟ್ಟಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಕನ್ನಡದಲ್ಲಿ ಅಭ್ಯಾಸ ಮಾಡುವವರ ಸಂಖ್ಯೆಯು ಕಮ್ಮಿ ಯಾಗುತ್ತಿದೆ ಎಂದರು.
ಹದಿನೆ0ಟು ಪಠ್ಯಪುಸ್ತಕಗಳು ಒಟ್ಟಿಗೆ ಲೋಕಾರ್ಪಣೆಗೊಂಡಿರುವುದು ಬಹುಮುಖ್ಯ ಸಂಗತಿ. ವಿದ್ಯಾರ್ಥಿಗಳು ಆಧುನಿಕ ದೃಷ್ಟಿಕೋನಗಳಲ್ಲಿ ಆಲೋಚಿಸಿ, ಅಧ್ಯಯನ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ವಿವಿಯ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ. ಡಿ. ವಿ. ಪರಮಶಿವಮೂರ್ತಿ ಮಾತನಾಡಿ, ರಾಷ್ಟಿçÃಯ ಶಿಕ್ಷಣ ನೀತಿಗೆ ಸಂಬAಧಿದAತೆ ಪಠ್ಯಪುಸ್ತಕಗಳ ತಯಾರಿ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಪರಿಭಾಷೆಗಳ ಅಡಿ ಯಲ್ಲಿ ಪಠ್ಯಪುಸ್ತಕಗಳ ಜೋಡಣೆ ಅತಿಮುಖ್ಯ. ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಅಧ್ಯಾಪಕರು ಶ್ರಮಿಸಬೇಕು ಎಂದು ತಿಳಿಸಿದರು.
ಪ್ರಸರಾಂಗ ವಿಭಾಗದ ನಿರ್ದೇಶಕರು ಹಾಗೂ ಕನ್ನಡ ಪಠ್ಯಪುಸ್ತಕಗಳ ಪ್ರಧಾನ ಸಂಪಾದಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ, ಪಠ್ಯಪುಸ್ತಕಗಳು ಕೇವಲ ಪಠ್ಯಕ್ಕೆ ಸಂಬAಧಿಸಿಲ್ಲ. ಇದು ವಿದಾರ್ಥಿಗಳ ಮುಂದಿನ ಜೀವನಕ್ಕೆ ಅನುಕೂಲವಗಲಿದೆ. ಈ ಪಠ್ಯಪುಸ್ತಕ ರಚನೆಗೆ ತುಮಕೂರು ವಿವಿ ಕುಲಪತಿಗಳು ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ. ಬೆಳೆಕೆರೆ ಲಿಂಗರಾಜಯ್ಯ, ತುಮಕೂರು ವಿವಿಯ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ, ಪದವಿ ಕಾಲೇಜಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಡಿ ಶಿವನಂಜಯ್ಯ, ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಪಕ ಡಾ. ಓ ನಾಗರಾಜು ಉಪಸ್ಥಿತರಿದ್ದರು.