Sunday, 13th October 2024

ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಮನವಿ

ತುಮಕೂರು: ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ ಮುಂದಿನ ನವೆಂಬರ್ 01ಕ್ಕೆ ಐವತ್ತು ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಸರಕಾರ ಈ ಸಾಲಿನ ಕನ್ನಡ ರಾಜೋತ್ಸವವನ್ನು ಅತಿವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸುವಂತೆ ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಮತ್ತು ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ ನಂತರ ಮೈಸೂರು ರಾಜ್ಯ ಎಂದು ಕರೆಯಲ್ಪಡುತಿದ್ದ ಕನ್ನಡಭಾಷೆ ಮಾತ ನಾಡುವ ಪ್ರದೇಶವನ್ನು, 1971 ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜು ಆರಸು ನೇತೃತ್ವದ ಸರಕಾರ ಕರ್ನಾಟಕ ಎಂದು ನಾಮಕರಣ ಮಾಡಿದ್ದರು.ಕರುನಾಡಿಗೆ ಕರ್ನಾ ಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪೂರೈಸುವ ನಿಟ್ಟಿನಲ್ಲಿ ಸರಕಾರ ಇದರ ಅಮೃತ ಮಹೋತ್ಸವ ಕಾರ್ಯಕ್ರಮವಾಗಿ ಕನ್ನಡ ರಾಜೋತ್ಸವ ಕಾರ್ಯಕ್ರಮ ವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸ ಬೇಕೆಂಬುದು ಕರುನಾಡ ವಿಜಯಸೇನೆಯ ಒತ್ತಾಯವಾಗಿದೆ ಎಂದರು.
ಈ ವೇಳೆ ಕರುನಾಡ ವಿಜಯಸೇನೆಯ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ್ ,ಹರೀಶ್,ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ನಯನ್, ಮಹಿಳಾ ಘಟಕದ ಅಧ್ಯಕ್ಷೆ ಯಾಸ್ಮೀನ್ ತಾಜ್,ಪ್ರಚಾರ ಸಮಿತಿ ಅಧ್ಯಕ್ಷರಾದ ರುದ್ರೇಶ್, ಸಂತೋಷ್,ರುದ್ರೇಶ್ ಯುವರಾಜ್, ಪವನ್ ಮತ್ತು ಅಪ್ಪು ಇದ್ದರು.