Friday, 13th December 2024

ಕನ್ನಡವನ್ನು ಸಹ ಪ್ರತಿಯೊಬ್ಬರು ಪ್ರೀತಿಯಿಂದ ಬೆಳೆಸಬೇಕು: ಪಿ.ಆರ್. ಸುಧಾಕರಲಾಲ್

ಮಧುಗಿರಿ : ಹೆತ್ತ ತಾಯಿಯನ್ನು ಗೌರವ ಭಾವನೆಗಳಿಂದ ಯಾವ ರೀತಿ ಕಾಣುತ್ತೇವೊ ಅದೇ ರೀತಿ ಮಾತೃಭಾಷೆ ಯಾದ ಕನ್ನಡ ವನ್ನು ಸಹ ಪ್ರತಿಯೊಬ್ಬರು ಪ್ರೀತಿಯಿಂದ ಬೆಳೆಸಬೇಕೆಂದು ಕೊರಟಗೆರೆಯ ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಕರೆ ನೀಡಿದರು.

ತಾಲೂಕಿನ ಪುರವರ ಹೋಬಳಿಯ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಸಾಹಿತ್ಯ ಪರಿಷತ್ ಸದಸ್ಯರ ಪದಗ್ರಹಣ ಹಾಗೂ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಇಂದಿನ ಪುಟ್ಟಮಕ್ಕಳ ಜೊತೆ ಯಲ್ಲಿಯೇ ನಾವುಗಳು ಕನ್ನಡ ದಲ್ಲಿಯೇ ಮಾತನಾಡ ಬೇಕು ಜೊತೆಗೆ ಕನ್ನಡವನ್ನು ಮಾತನಾಡುವುದನ್ನು ಕಲಿಸಬೇಕು.

ದೇಶದಲ್ಲಿ ಅನೇಕ ಭಾಷೆಗಳಿದ್ದರು ಸಹ ನಮ್ಮ ಕನ್ನಡ ಭಾಷೆಗೆ ಹೆಚ್ಚು ಜ್ಞಾನಪೀಠಾ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದ್ದು ನಮ್ಮತಾಯಿಯನ್ನು ಎಷ್ಟು ಪ್ರೀತಿ ಸಂತೋಷ ಕಾಣುತ್ತೀವೊ ಅಷ್ಟೇ ಗೌರವದಿಂದ ಕನ್ನಡ ಭಾಷೆಯನ್ನು ಕಾಣಬೇಕು. ಮುಂದಿನ ದಿನಗಳಲ್ಲಿ ಕನ್ನಡ ಪರ ಕಾರ್ಯಕ್ರಮ ಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.

ತಗ್ಗಿಹಳ್ಳಿಯ ರಾಮಕೃಷ್ಣ ಮಠದ ಶ್ರೀ ಸ್ವಾಮಿ ರಾಮಾನಂದ ಚೈತನ್ಯ ಸ್ವಾಮಿ ಮಾತನಾಡಿ, ಬಹಳಷ್ಟು ಜನ ಕನ್ನಡವನ್ನು ಗ್ರಾಮೀಣಾ ಪ್ರದೇಶದಲ್ಲೇ ಅಲ್ಲ ಕರ್ನಾಟಕ ರಾಜ್ಯದ ವಿಧಾನ ಸಭೆಯಲ್ಲೂ ಕೂಡ ಮಾತನಾಡುವಂತಹ ಶಾಸಕರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು ಇದ್ದರೂ ಸಹ ಎಲ್ಲಾರು ಪೂರ್ಣ ಪ್ರಮಾಣದ ಕನ್ನಡವನ್ನು ಮಾತನಾಡದೆ ತಮ್ಮ ಮಾತಿನ ಬರದಲ್ಲಿ ಇಂಗ್ಲಿಷ್ ಭಾಷೆಯ ಪದಬಳಕೆ ಮಾಡಿಕೊಂಡು ಮಾತನಾಡುತ್ತಿದ್ದಾರೆ . ನಮಗೆ ಎಲ್ಲಾ ಭಾಷೆಯ ಜ್ಞಾನ ವಿದ್ದರು ಸಹ ಮಾತೃ ಭಾಷೆಯ ಮೇಲೆ ಪ್ರೀತಿ ಇರಬೇಕು ಎಂದರು.

ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಕರ್ನಾಟದಲ್ಲೇ ಹುಟ್ಟಿ ಇಲ್ಲೇ ಬೆಳೆದಿರುವ ನಾವು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು, ಕನ್ನಡದ ಜಲ, ನೆಲ, ಭಾಷೆ, ನೀರನ್ನು ಕುಡಿಯುತ್ತಿದ್ದು ಕನ್ನಡದ ಮೇಲೆ ಅಭಿಮಾನ ಪ್ರೀತಿ ಪ್ರತಿಯೊಬ್ಬರಲ್ಲೂ ಕೂಡ ಬರಬೇಕು ಎಂದರು. ಮಧುಗಿರಿ ತಾಲೂಕು ಕಸಾಪ ಅಧ್ಯಕ್ಷೆ ಸಹನನಾಗೇಶ್ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿಸಿದ್ದರಾಜು, ಗೊಂದಿಹಳ್ಳಿ ಗ್ರಾ.ಪಂ ಅಧ್ಯಕ್ಷ ರಂಗನಾಥ್, ರಂಗಕರ್ಮಿ ಪ.ವಿ.ಸುಬ್ರಹ್ಮಣ್ಯ, ಉಪನ್ಯಾಸಕ ರಾಮಚಂದ್ರ, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ, ವಕೀಲ ಹನುಮಂತರೆಡ್ಡಿ, ಕೃಷ್ಣಮೂರ್ತಿ, ಬಿಜವಾರ ನಾಗರಾಜು, ಸತೀಶ್, ಶಿವಕುಮಾರ್, ಶಿವು ಅರಳಾಪುರ, ರಘು, ವೇಣುಗೋಪಾಲ್, ರಂಗಸ್ವಾಮಿ.ಪಿ.ಕೆ, ಅರಳಾಪುರ ರಮೇಶ್ ಮತ್ತಿತರರು ಇದ್ದರು.