Thursday, 28th March 2024

ಮಾನಸ ಸರೋವರ ಛಾಯಾಗ್ರಾಹಕ ಬಸವರಾಜುಗೆ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ ಸೇರಿದಂತೆ ಹಲವು ಭಾಷೆಯ ಚಿತ್ರ ಗಳಿಗೆ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಬಿ.ಎಸ್.ಬಸವರಾಜುರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ತಿಪಟೂರಿನ ಮೂಲದ ಬಸವರಾಜು ಚಿಕ್ಕವಯಸ್ಸಿನಲ್ಲಿಯೇ ಛಾಯಗ್ರಹಣದ ಕಡೆ ಆಸಕ್ತಿ ಹೊಂದಿದ್ದ ರು. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಇವರು ಅಮೃತಘಳಿಗೆ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅದ್ಭುತ ಛಾಯಾ ಗ್ರಹಣ ನೆರವೇರಿಸಿದ್ದಾರೆ.

ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ತಿಪಟೂರಿನ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಕಾಲೇಜು ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಗಿಸಿ, ಬೆಂಗಳೂರಿನಲ್ಲಿ ಸಿನಿಮೋಟಗ್ರಫಿಯನ್ನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ತಮಿಳಿನ ಭಾಗ್ಯರಾಜ್ ನಿರ್ದೇಶನದ ಚಿತ್ರಗಳಲ್ಲಿಯೂ ತಮ್ಮ ಕೈಚಳಕ ತೋರಿ ರುವ ಬಸವರಾಜು ಸುಮಾರು 40 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸು ತ್ತಿದ್ದಾರೆ. ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿ ದ್ದಾರೆ. ಅಮೃತ ಘಳಿಗೆ ಚಿತ್ರದಲ್ಲಿ ಮೂಡಿಬಂದ ವರ್ಣರಂಜಿತ ಛಾಯಾ ಗ್ರಹಣಕ್ಕೆ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದಾರೆ. ಶರಪಂಜರದ ರಾಜಾರಾಂ ಗರಡಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ಕೋಟ್

ಜೀವಮಾನದಲ್ಲಿ ನಾವು ಸಲ್ಲಿಸುವ ಶ್ರೇಷ್ಠ ಕಾರ್ಯವನ್ನು ನೋಡಿ ಪ್ರಶಸ್ತಿ ಒಲಿಯಬೇಕು. ಪ್ರಶಸ್ತಿಗಿಂತ ಶ್ರದ್ದಾಭಕ್ತಿಯಿಂದ ನೆರವೇ ರಿಸುವ ಕಾರ್ಯ ಶಾಶ್ವತವಾಗಿರುತ್ತದೆ. ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ. – ಬಸವರಾಜು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

Leave a Reply

Your email address will not be published. Required fields are marked *

error: Content is protected !!