Wednesday, 11th December 2024

ಸೆ.3ರಂದು ಕೆಸರಾಳ ತಾಂಡಾದಲ್ಲಿ ಶಂಕರ, ಚಾಂದುಬಾಯಿ ಜಾತ್ರಾಮಹೋತ್ಸವ

ಇಂಡಿ: ನಗರದ ಕೆಸರಾಳ ತಾಂಡಾದ ಶಂಕರ ಚಾಂದುಬಾಯಿ ನಗರದಲ್ಲಿ ಸೆ.೩ರಂದು ಮಧ್ಯಾಹ್ನ ೧೨ ಗಂಟೆಗೆ ಶಂಕರ ಹಾಗೂ ಚಾಂದುಬಾಯಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಸೆ.೩ರಂದು ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೭ ಗಂಟೆವರೆಗೆ ಚಂದ್ರು ಪೊಲೀಸ್ ಇಂಡಿ ಹಾಗೂ ಶಾವತ್ರಿಬಾಯಿ ಗದಗ ಇವರಿಂದ ಬಂಜಾರ ಭಜನಾ ಕಾರ್ಯಕ್ರಮ ಹಾಗೂ ಬಂಜಾರ ನೃತ್ಯ ಕರ‍್ಯಕ್ರಮ ಜರುಗುವುದು. ರಾತ್ರಿ ೧೦ ಗಂಟೆಗೆ ಕೋಲಾಪೂರ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕರ‍್ಯಕ್ರಮ ಜರುಗಲಿದೆ ಎಂದು ಭೀಮು ರಾಠೋಡ, ಸಿದ್ದು ರಾಠೋಡ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂದೆ-ತಾಯಿ ಸೇವೆ ಮಾಡುವ ಉದ್ದೇಶದಿಂದ ಅವರ ದೇವಾಲಯ ನರ‍್ಮಾಣ ಮಾಡಲಾಗಿದೆ. ಚಿಕ್ಕವನಿದ್ದಾಗ ಬಡತನದಲ್ಲಿ ಕಾಳಕಳೆದಿದ್ದರಿಂದ ತಂದೆ-ತಾಯಿ ಸೇವೆ ಮಾಡಲು ಸಾಧ್ಯವಾಗದೆ, ದುಡಿಯಲು ಮಹಾರಾಷ್ಟ್ರಕ್ಕೆ ಹೋಗಬೇಕಾಯಿತು. ಹೀಗಾಗಿ, ಈಗಲಾದರೂ ಕಲ್ಯಾಣ ಕಾರ‍್ಯಗಳನ್ನು ಮಾಡುವುದರ ಮೂಲಕ ತಂದೆ-ತಾಯಿ ಋಣ ತೀರಿಸಬೇಕು ಎಂಬ ಉದ್ದೇಶದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ರ‍್ಮಸಭೆಗೆ ಬಂಜಾರ ಸಮುದಾಯದ ಸ್ವಾಮೀಜಿಗಳು ಹಾಗೂ ರಾಜಕೀಯ ಮುಖಂಡರು, ತಾಂಡಾದ ಹಿರಿಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿದರು. ಸಿದ್ರು ಅರಳಗುಂಡಗಿ, ಶ್ರೀಕಾಂತ ರಾಠೋಡ,ರ‍್ಮು ರಾಠೋಡ, ಸಂಜಯ ಜಾಧವ, ಶ್ರೀಮಂತ ಚವ್ಹಾಣ, ವಿಷ್ಣು ರಾಠೋಡ, ರಾಜು ರಾಠೋಡ, ಯುವರಾಜ ರಾಠೋಡ, ರ‍್ಜುನ ಚವ್ಹಾಣ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.