ಬೆಂಗಳೂರು: ಕೆಎಫ್ ಸಿ ಬೆಂಗಳೂರಿನಲ್ಲಿ ಚಿಕನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿದೆ. ಮೂರು ದಶಕಗಳ ಹಿಂದೆ ಆರಂಭವಾದಾಗಿನಿಂದ ಇಂದಿನವರೆಗೆ ಈ ಬ್ರ್ಯಾಂಡ್ ಯೋಗ್ಯವಾದ ಆಹಾರ, ಚಿಕನ್ ಖಾದ್ಯಗಳ ಉತ್ಪಾದನೆ ಮತ್ತು ಆಹಾರ ಸುರಕ್ಷತೆ ಹಾಗೂ ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಈ ಮೂಲಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುತ್ತಿದೆ. ಬೆಂಗಳೂರಷ್ಟೇ ಅಲ್ಲದೇ ಭಾರತಾದ್ಯಂತ ಇರುವ ಕೆಎಫ್ ಸಿ ರೆಸ್ಟೋರೆಂಟ್ ಗಳು ದೇಶದ ರುಚಿಕಟ್ಟಾದ ಚಿಕನ್ ಅನ್ನು ಪೂರೈಸುವ ಬ್ರ್ಯಾಂಡ್ ಎಂಬ ಖ್ಯಾತಿಯನ್ನು ಗಳಿಸಿದ್ದು, ಗ್ರಾಹಕರ ಹಿತಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಿದ್ದು, ಎಲ್ಲಾ ರೀತಿಯ ಕಾನೂನು ಕಟ್ಟಳೆಗಳನ್ನು ಹಾಗೂ ನೈರ್ಮಲ್ಯದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಕೆಎಫ್ ಸಿ ಕಿಚನ್ ನಲ್ಲಿ ಆಹಾರ ಸುರಕ್ಷತೆಗೆ ಎಲ್ಲಿಲ್ಲದ ಒತ್ತು ನೀಡಲಾಗುತ್ತಿದೆ. ಪ್ರತಿದಿನವೂ ನುರಿತ ಚೆಫ್ ಗಳು ಇಲ್ಲಿಗೆ ಬರುವ ಚಿಕನ್ ಅನ್ನು ಕಠಿಣ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಆ ಚಿಕನ್ ತಾಜಾತನದಿಂದ ಕೂಡಿದೆಯೇ, ಅದರ ಗುಣಮಟ್ಟ ಉತ್ತಮವಾಗಿದೆಯೇ ಎಂಬುದನ್ನು ಹಲವು ಹಂತಗಳಲ್ಲಿ ಪರೀಕ್ಷೆ ಮಾಡುತ್ತಾರೆ. ಚಿಕನ್ ಹೊರಗಿನಿಂದ ಕ್ರಿಸ್ಪಿಯಾಗಿರುವುದು ಮತ್ತು ಒಳಗೆ ಜ್ಯೂಸಿಯಾಗಿರುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ.
ಕೆಎಫ್ ಸಿಯ ಕ್ರಿಸ್ಪಿ ಚಿಕನ್ ಗೆ ಅತ್ಯುತ್ಕೃಷ್ಟ ಗುಣಮಟ್ಟದ ಪದಾರ್ಥಗಳನ್ನು ಸೇರಿಸಲಾಗುತ್ತದೆ ಮತ್ತು ಈ ಕ್ರಿಸ್ಪಿ ಚಿಕನ್ ಅನ್ನು ತಾಜಾವಾಗಿಯೇ ಸಿದ್ಧಪಡಿಸಿಕೊಡಲಾಗುತ್ತದೆ. ಭಾರತದಲ್ಲಿ ಕೆಎಫ್ ಸಿ ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಹೆಸರಾಂತ ಪೂರೈಕೆದಾರರಿಂದ ಶೇ.100 ರಷ್ಟು ಮಸಲ್ ಚಿಕ್ ಅನ್ನೇ ಖರೀದಿ ಮಾಡುತ್ತದೆ. ಪೂರೈಕೆದಾರರ ಫಾರಂನಿಂದ ಗ್ರಾಹಕರ ಪ್ಲೇಟಿಗೆ ಹೋಗುವಷ್ಟರಲ್ಲಿ ಕಠಿಣವಾದ 34 ಹಂತಗಳ ತಪಾಸಣೆ ನಡೆಸಲಾಗುತ್ತದೆ.