Friday, 20th September 2024

ಪೊಲೀಸರೆಂದು ಹೇಳಿಕೊಂಡ ವ್ಯಕ್ತಿಯೋರ್ವನ ಕಿಡ್ನಾಪ್ 

ತುಮಕೂರು : ನಾವು ಪೊಲೀಸರೆಂದು ಹೇಳಿಕೊಂಡು ಬಂದ ನಾಲ್ವರು ಮನೆಯಲ್ಲಿದ್ದ ವ್ಯಕ್ತಿ ಯೋರ್ವನನ್ನು ಹೊರ ಕರೆದು ಕಾರಿನಲ್ಲಿ ಕಿಡ್ನಾಪ್ ಮಾಡಿರುವ ಘಟನೆ  ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಕುಮಾರ್ ಕಿಡ್ನಾಪ್ ಆದ ವ್ಯಕ್ತಿಯಾಗಿದ್ದು ಈತ ಚಿತ್ರದುರ್ಗದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪತ್ನಿ ಸುಮಿತ್ರ ತುಂಬು ಗರ್ಭಿಣಿ ಆಗಿರುವುದರಿಂದ ತವರು ಮನೆ ಬುಕ್ಕಾಪಟ್ಟಣ ಬಿಡಲಾಗಿದ್ದು ಆಕೆಯನ್ನು ನೋಡಲು ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಿರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಿಚಾರಿಸಿದರೆ ಹುಳಿಯಾರು ಠಾಣೆ ಪೊಲೀಸರನ್ನು ವಿಚಾರಿಸಿ ಎನ್ನುತ್ತಿದ್ದಾರೆ. ಹುಳಿಯಾರು ಠಾಣೆಯವರನ್ನು ಕೇಳಿದರೆ ನಾವು ಕರೆದುಕೊಂಡು ಬಂದಿಲ್ಲ ಎನ್ನುತ್ತಿದ್ದಾರೆ. ಎರಡು ಠಾಣೆಯಲ್ಲೂ ದೂರು ಕೊಟ್ಟರು ಸಹ ಸ್ವೀಕರಿಸದೆ ಠಾಣೆಯಿಂದ ಠಾಣೆಗೆ ಆಲಿಸು ತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತೋಷ್ ಕುಮಾರ್ ಅವರನ್ನು ಹುಡುಕಿ ಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.