Wednesday, 11th December 2024

ಕೋರಮ್ಮದೆವಿ ಜಾತ್ರಾ ಮಹೋತ್ಸವ

ಕೊಲ್ಹಾರ: ಪಟ್ಟಣದ ಆರಾಧ್ಯ ದೇವತೆ ಕೋರಮ್ಮದೇವಿ ಜಾತ್ರಾ ಮಹೋತ್ಸವ ಪಟ್ಟಣದ ಯುಕೆಪಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ಪ್ರಯುಕ್ತ ಹೋಮ, ಹವನ, ರುದ್ರಾಭಿಷೇಕ, ಕಳಶ ಮೆರವಣಿಗೆ, ಅನ್ನಸಂತರ್ಪಣೆ, ಭಾವೈಕ್ಯತೆಯ ತತ್ವಪದಗಳು ಹಾಗೂ ಯುಕೆಪಿ ಗೆಳೆಯರ ಬಳಗದ ವತಿಯಿಂದ ಎತ್ತಿನ ಬಂಡಿಗಳ ಸ್ಪರ್ದೆ ಜರುಗಿತು.  ನ.26 ರಿಂದ ಪ್ರಾರಂಭವಾದ ಜಾತ್ರೆಯು ಮೂರು ದಿನಗಳ ಕಾಲ ಬಹು ವಿಜೃಂಭಣೆಯಿಂದ ಭಕ್ತಾದಿಗಳ ಉದ್ಘೋಷದೊಂದಿಗೆ ಜರುಗಿತು.

ಈ ಸಂದರ್ಭದಲ್ಲಿ ಮಲ್ಲಯ್ಯ ಮಠಪತಿ, ರಮೇಶ ಬಾಟಿ, ಈರಣ್ಣ ಬರಗಿ, ಯಲ್ಲಪ್ಪ ಬಾಟಿ, ಶೇಖಪ್ಪ ಗಾಣಿಗರ, ರಿಯಾಜ ಕಂಕರಪೀರ, ಸತೀಶ ದಂಡೀನ, ಮಲಕಾಜಿ ಗಾಣಿಗರ, ಸದ್ದಾಂ ಶಿರೂರ, ಮಂಜು ಅಂಬಿಗರ, ಶ್ರೀಶೈಲ ಏಳಂಗಡಿ, ರವಿ ಬರಗಿ, ಶ್ರೀಶೈಲ ಪೂಜಾರಿ, ಚೇತನ ಬಗಲಿ, ಶ್ರೀಶೈಲ ಕುಂಬಾರ, ರವಿ ಪತಂಗಿ, ಅಪ್ಪು ಪತಂಗಿ ಇತರರು ಇದ್ದರು.