Friday, 13th December 2024

KPCC: ಮಹಾತ್ಮರ ಧೂಳಿಗೆ ಸಮಾನರಲ್ಲದ ನಾಯಕರು ಗಾಂಧಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ : ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್

ಮಹಾತ್ಮರನ್ನು ಗುಂಡಿಕ್ಕಿ ಕೊಲೆಗೈದ ಗೂಡ್ಸೆಗೆ ಮಹಾತ್ಮರೆಂದು ಪೂಜಿಸುತ್ತಿದ್ದಾರೆ

ಚಿಂಚೋಳಿ: ಮಹಾತ್ಮ ಗಾಂಧಿಜೀಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಕಾಲ್ನಡಿಗೆಯಲ್ಲಿ 79 ಸಾವಿರ ಕಿ. ಲೋ ಮೀಟರ್ ನಡೆದರು ಎಂದು ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ತಿಳಿಸಿದರು.

ಮಹಾತ್ಮ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಮತ್ತು ಅಖಿಲ ಕಾಂಗ್ರೆಸ್ ಸಮಿತಿಯ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳ ಸಂಭ್ರಮಾಚಾರಣೆಯ ಹಿನ್ನೆಲೆಯಲ್ಲಿ ಚಿಂಚೋಳಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಚಂದಾಪೂರ ಮಹಾತ್ಮ ಗಾಂಧಿ ವೃತ್ತದವರೆಗೆ ಗಾಂಧಿ ಭಾರತ, ಗಾಂಧಿ ನಡೆಗೆ ಪಾದಯಾತ್ರೆ ಕೈಗೊಂಡು ಮಾತನಾಡಿದರು.

ಮಹಾತ್ಮ ಗಾಂಧಿಜಿಯವರು 2338 ಬಾರಿ ಜೈಲಿಗೆ ಸೇರಿದ್ದರು. 18 ಸಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಮಹಾತ್ಮ ಗಾಂಧಿ ಅವರ ಶಾಂತಿ ನಡೆಗೆ ಮತ್ತು ಸಿದ್ಧಾಂತಗಳಿಗೆ ಇತರ ದೇಶಗಳ ನಾಯಕರಾದ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್, ಬರಾಕ್ ಒಬಾಮ ಅವರು ಗುರುಗಳಾಗಿ ಸ್ವೀಕರಿಸಿ ಅವರ ದೇಶಗಳ ಸ್ವಾತಂತ್ರ್ಯಕ್ಕೆ ಮಹಾತ್ಮ ಗಾಂಧಿಯವರಿಗೆ ಸ್ಫೂರ್ತಿಯಾಗಿಸಿಕೊಂಡಿದ್ದರು. ಗಾಂಧಿಯವರಿಗೆ ಶುಭಾಷಚಂದ್ರ ಬೋಸ್ ರಾಷ್ಟ್ರಪಿತಾಮಹ ಎಂದು ಕರೆದರೇ, ರವೀಂದ್ರ ಟೈಗೋರ್ ಮಹಾತ್ಮ ಎಂದು ಹೆಸರಿಟ್ಟರು. ಆದರೆ ಮಹಾತ್ಮ ಗಾಂಧಿ ಅವರ ಕಾಲಿನ ಧೂಳಿಗೆ ಸಮಾನ ಅಲ್ಲದ ನಾಯಕರು ಮಹಾತ್ಮರ ಬಗ್ಗೆ ಟೀಕೆ ಟಿಪ್ಪಣೆಗಳು ಮಾಡುತ್ತಿದ್ದಾರೆ. ಗಾಂಧೀಯವರನ್ನು ಗುಂಡೂಕಿ ಕೊಳೆಗೈದ ಗೂಡ್ಸೆಗೆ ಪೂಜಿಸುತ್ತಿದ್ದಾರೆ. ಭಾರತದ ಮಟ್ಟದಲ್ಲಿ ಒಂದು ಗಾಂಧಿ ವಿಚಾರಗಳ ಪಡೆ ಮತ್ತು ಇನ್ನೊಂದು ಗೂಡ್ಸೆ ವಿಚಾರವಾದಿಗಳ ಪಡೆಗಳ ಮಧ್ಯೆ ದೊಡ್ಡ ಸಂಘರ್ಷ ನಡೆಯುತ್ತಿದೆ.

ದಿನ ದಲಿತ, ಬಡವ, ಪ್ರಜಾಪ್ರಭುತ್ವಕ್ಕೆ ಪರವಾಗಿರುವ, ಸಂವಿಧಾನಕ್ಕೆ ಬದ್ಧರಾಗಿರುವ ಎಲ್ಲಾ ಜಾತಿಗಳ ಸಂಘಟನೆ ಗಳು ಒಂದಾಗಿ ಮಹಾತ್ಮ ಗಾಂಧಿ ಅವರ ವಿಚಾರಗಳು ತಿಳಿದುಕೊಂಡು ಜನರಿಗೆ ಪಸರಿಸಬೇಕಾಗಿದೆ. ಈ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಒಂದು ವರ್ಷಗಳ ಕಾಲ ಗಾಂಧಿಜೀ ಅವರ ಬಗ್ಗೆ ಜನರಿಗೆ ತಿಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪುರಸಭೆ ಅಧ್ಯಕ್ಷ ಆನಂದ ಟೈಗರ್, ನಿವೃತ್ತ ನಾಯಧೀಶರು ಗೋಖಲೆ ಅವರು ಮಾತನಾಡಿದರು. ಈ ಸಂಧರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಲ್ತಾನ ಬೇಗಂ ಖಾಲಿಲ್ ಪಟೇಲ್, ಚಿಂಚೋಳಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ಕಾಳಗಿ ಅಧ್ಯಕ್ಷ ದೇವೀಂದ್ರಪ್ಪ ಹೆಬ್ಬಾಳ, ಅನಿಲ ಜಮಾದಾರ್, ಸಾಯಬಣ್ಣ ಮಾಸ್ಟರ್, ಲಕ್ಷ್ಮಣ ಆವಂಟಿ, ಶರಣು ಪಾಟೀಲ್ ಮೋತಕಪಳ್ಳಿ, ನಾಗೇಶ ಗುಣಾಜಿ ಸೇರಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Kalaburagi KKRTC: ಕಲಬುರಗಿ ಕೆಕೆಆರ್‌ಟಿಸಿ ಸಿವಿಲ್ ವಿಭಾಗದಲ್ಲಿ ಗೋಲ್‌ಮಾಲ್, ಕೋಟ್ಯಂತರ ರೂಪಾಯಿ ಡೀಲ್..!