Friday, 13th December 2024

ಕ.ರಾ.ಮು.ವಿ ಕೇಂದ್ರದಲ್ಲಿ ಗಾಂಧೀಜಿಯವರ 154ನೇ ಜಯಂತಿ ಆಚರಣೆ

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತುಮಕೂರು ಕಛೇರಿಯಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ ಲೋಕೇಶ ಆರ್ ರವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿ ಮಹಾತ್ಮ ಗಾಂಧೀಜಿ ಭಾರತದ ಹೆಮ್ಮೆ. ಸತ್ಯ, ಅಹಿಂಸೆಯ ಮೂಲಕ ಜಗದ ಹೃದಯ ಗೆದ್ದ ಮಹಾತ್ಮರು. ಅಕ್ಟೋಬರ್ 2 ಭಾರತದ ಜನತೆಯ ಪಾಲಿನ ಮಹತ್ವದ ದಿನ. ಈ ವರ್ಷ ನಾವು ಗಾಂಧಿಜಿಯವರ 154ನೇ ಜಯಂತಿಯನ್ನು ಆಚರಿಸುತ್ತೇವೆ. ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಿದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ.ಸುರೇಶ್ .ಸಿ. ರವರು, ಮತ್ತು ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.