Sunday, 13th October 2024

ನಿರಂತರ ಮಳೆಯಿಂದ ಮಾನ್ವಿಯ ಕುರ್ಡಿ ಗ್ರಾಮದಲ್ಲಿ ಮೂವರ ಸಾವು

ಮಾನ್ವಿ: ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ದಂಪತಿಗಳಾದ ಪರಮೇಶ, ಜಯಮ್ಮ , ಚಿಕ್ಕ ಮಗು ಭರತ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರು ಅವರ ಕುಟುಂಬದವರಿಗೆ ಸಾಂತ್ವನ ತಿಳಿಸಿ‌ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಿ, ಜಿಲ್ಲಾಡಳಿತದಿಂದ ಮೃತ ಸದಸ್ಯರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುತ್ತದೆ. ತಾಲೂಕು ಆಡಳಿತದಿಂದ ಅವರ ಕುಟುಂಬಕ್ಕೆ ಬಿದ್ದ ಮನೆಗೆ ಪರಿಹಾರ ಒದಗಿಸ ಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಕಾಂತ್, THO ಚಂದ್ರಶೇಖರ ಸ್ವಾಮಿ,RI, VA, ನಾಗೇಂದ್ರಪ್ಪ ಮಟಮಾರಿ ಚಂದ್ರಶೇಖರ ಸ್ವಾಮಿ, ಚಂದ್ರಶೇಖರ, ಮನೋಜ್ ಗೌಡ, ಹಾಜಿ ಸಾಬ್ , ಮಲ್ಲೇಶ್, ಈರಣ್ಣ, ಮಾರೇಶ, ನಾಗೇಂದ್ರ ಪ್ರವೀಣ್, ಊರಿನ ಹಿರಿಯ ಮುಖಂಡರುಗಳು ಮತ್ತು ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತ ರಿದ್ದರು.