ರಾಯಚೂರು: ದೇವಸ್ಥಾನಗಳಲ್ಲಿನ ದೇವರ ಹುಂಡಿಗಳಿಗೆ ಹಣ ಹಾಕುವುದು ದಾನವಲ್ಲ. ಅದು ಪಾಪದ ಪ್ರಾಯಶ್ಚಿತ್ತದ ಒಂದು ಮುಖವಾಗಿದೆ. ದೇವರ ಹುಂಡಿಗೆ ಹಣ ಹಾಕೋದು ಅಸಹ್ಯಕರವಾದದ್ದು ಎಂಬುದಾಗಿ ಸಾಹಿತಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇವರ ಹುಂಡಿಗೆ ಹಣ ಹಾಕುವುದು ಪಾಪವನ್ನ ರಿನಿವಲ್ ಮಾಡಿದಹಾಗೆ ಆಗುತ್ತದೆ. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿ ದ್ದೀನಿ, ಇಷ್ಟು ಜನರನ್ನ ಹಾಳು ಮಾಡಿದ್ದೀನಿ. ದಯವಿಟ್ಟು ಇದನ್ನ ಕ್ಷಮಿಸಿ ಎಂದಂತೆ. ಹೊಸದಾಗಿ ಪಾಪ ಮಾಡಲಿಕ್ಕೆ ಅವಕಾಶ ಮಾಡಿಕೊಡು ಅನ್ನುವುದು ಆಗಿದೆ ಎಂದು ಹೇಳಿದರು.
ಇನ್ನೇನು ರೋಜಾ, ಹಜ್, ರಜಾಕ್ ಇವೆಲ್ಲಾ ಶುರುವಾಗ್ತದೆ. ಅವೆಲ್ಲವೂ ಇನ್ನೊಬ್ಬರಿಗೆ ದಾನ ಕೊಡಬೇಕು ಅಂತಾನೇ ಹೇಳುತ್ತವೆ. ಕುರಾನ್ ಬಗ್ಗೆ ಹೇಳಿದ್ರೆ ಮುಸ್ಲಿಂ ಪರ ಮಾತನಾಡುತ್ತೇನೆ ಅಂತಲ್ಲ. ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅನಿಸುತ್ತದೆ. ಒಳ್ಳೆಯದು ಎಲ್ಲಿದೆ ಅದನ್ನ ನಾವು ಸ್ವೀಕರಿಸಬೇಕು. ಬಸವಣ್ಣ ಹೇಳಿದ್ದಾನೆ ಅದು ನಮ್ಮದು. ಮಹಮ್ಮದ್ ಪೈಗಂಬರ್ ಹೇಳಿದ್ದು ನಮ್ಮದು. ಯೇಸು ಕ್ರಿಸ್ತನು ಹೇಳಿದ್ದು ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳಕೊಡು ಎಂದು. ಆದರೆ ತಿರುಪತಿಯಲ್ಲಿ ನೋಡಿದ್ರೆ ನಿಜಕ್ಕೂ ಅತ್ಯಂತ ಅಸಹ್ಯಕರವಾದದ್ದು ಎಂದು ಲೇವಡಿ ಮಾಡಿದರು.
ದೇವರ ಹುಂಡಿಗೆ ಕೋಟಿಗಟ್ಟಲೆ ಹಣ, ಬಂಗಾರ ಹಾಕೋದು ಅಸಹ್ಯ. ಮುಂದೆ ನಾನು ಏನೂ ಆ ಬಗ್ಗೆ ಹೇಳುವುದಿಲ್ಲ. ಇವನು ಹಿಂದೂ ದ್ರೋಹಿ ಅಂತಾರೆ. ಅದು ದೊಡ್ಡ ಪ್ರಾಬ್ಲಂ. ಮುಸಲ್ಮಾನರನ್ನ ಹೊಗಳಿದ ತಿರುಪತಿ ಹುಂಡಿಗೆ ಹಾಕುವವರಿಗೆ ಡ್ಯಾಶ್ ಇಟ್ಟ ಎನ್ನುತ್ತಾರೆ. ಬಡವರಿಗೆ ದಾನ ಮಾಡಿ ಒಳ್ಳೆಯ ಕಾರ್ಯಗಳನ್ನ ಮಾಡಿ ಎಂದು ಹೇಳಿದರು.