Friday, 21st June 2024

ಮಹಾರಾಷ್ಟ್ರ ಮಾದರಿ ಬೆಳೆ ಪರಿಹಾರ ನಿರ್ಧಾರಕ್ಕೆ

ಅಥಣಿಯ ದರೂರದಲ್ಲಿ ನಡೆದ ಪರಿಹಾರ ವಿತರಣೆ-ಅಹವಾಲು ಸ್ವೀಕಾರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿದರು.

ರೈತರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರಕಾರ ಸಿದ್ಧ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಣೆಗೆ ಪ್ರಧಾನಿ ಬಳಿ ನಿಯೋಗ

ಬೆಳೆಹಾನಿ ಪರಿಹಾರ ನಿಟ್ಟಿಿನಲ್ಲಿ ಮಹಾರಾಷ್ಟ್ರದ ಮಾದರಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಧ್ಯಯನ ವರದಿಯ ಬಳಿಕ ಸರಕಾರದ ಆರ್ಥಿಕ ಸ್ಥಿಿತಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಅಥಣಿಯ ದರೂರ ಗ್ರಾಾಮದಲ್ಲಿ ನಡೆದ ಪರಿಹಾರ ವಿತರಣೆ-ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಪ್ರವಾಹದಿಂದ ಮನೆ, ಬೆಳೆ ಕಳೆದುಕೊಂಡು ಜನರು ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ರಾಜ್ಯ ಸರಕಾರ ಸಾಧ್ಯವಿರುವ ಎಲ್ಲ ನೆರವು ನೀಡಿದೆ. ರಾಜ್ಯದ ಹಣಕಾಸು ಪರಿಸ್ಥಿಿತಿ ಸರಿ ಇಲ್ಲದಿದ್ದರೂ ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ ಐದು ಲಕ್ಷ ರುಪಾಯಿ ನೀಡಲು ಸರಕಾರ ನಿರ್ಧರಿಸಿದೆ ಎಂದರು.

ವಿವಿಧ ಹಂತಗಳಲ್ಲಿ ಪರಿಹಾರ ವಿತರಣೆ ಕಾರ್ಯ ಈಗಾಗಲೇ ನಡೆದಿದೆ. ಒಂದೇ ಮನೆಯಲ್ಲಿ ವಾಸಿಸುವ ಎರಡೂ ಕುಟುಂಬಗಳಿಗೂ ಪ್ರತ್ಯೇಕ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರೈತರು ಒಪ್ಪಿಿದರೆ ಶಾಶ್ವತ ಸ್ಥಳಾಂತರಕ್ಕೆೆ ಸರಕಾರ ಸಿದ್ಧವಿದೆ ಎಂದರು.

16 ಗ್ರಾಾಮಗಳಿಗೆ ನೀರು ಪೂರೈಸುವ 89 ಕೋಟಿ ರು. ವೆಚ್ಚದ ಬಹುಗ್ರಾಾಮ ಕುಡಿಯುವ ನೀರು ಯೋಜನೆಗೆ 15 ದಿನಗಳಲ್ಲಿ ಸಚಿವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಕಾರಿ ಸಂಸ್ಥೆೆ ಮತ್ತು ರಾಷ್ಟ್ರೀಕೃತ ಬ್ಯಾಾಂಕುಗಳಲ್ಲಿನ ಸಾಲಮನ್ನಾಾ ಯೋಜನೆಗೆ ಸರಕಾರ ಬದ್ಧವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪರಿಷ್ಕರಣೆಗೆ ಪ್ರಧಾನಿ ಅವರ ಗಮನಕ್ಕೆೆ ತರಲಾಗುವುದು. ಇದಕ್ಕಾಾಗಿ ಪ್ರಧಾನಿ ಮತ್ತು ಗೃಹಸಚಿವರ ಬಳಿ ನಿಯೋಗ ಕೊಂಡೊಯ್ಯಲಾಗುವುದು. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪರಿಷ್ಕರಣೆ ಮಾಡಿದರೆ ಮಾತ್ರ ಹೆಚ್ಚಿಿನ ಪರಿಹಾರ ನೀಡುವುದು ಸಾಧ್ಯವಾಗಲಿದೆ ಎಂದರು.

ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ:
ಕೃಷ್ಣಾಾ ನದಿ ಪ್ರವಾಹದಿಂದ ಬಾಧಿತರಾದ ಸಂತ್ರಸ್ತರಿಗೆ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ಪರಿಹಾರದ ಚೆಕ್‌ಗಳನ್ನು ವಿತರಿಸಿದರು. ದರೂರ, ಹುಲಗಬಾಳಿ ಸೇರಿದಂತೆ ವಿವಿಧ ಗ್ರಾಾಪಂ ವ್ಯಾಾಪ್ತಿಿಯಲ್ಲಿನ ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ಅಥಣಿ, ರಾಯಬಾಗ ಹಾಗೂ ಕಾಗವಾಡ ತಾಲೂಕಿನ ಸಂತ್ರಸ್ತರ ಪರವಾಗಿ ಮುಖಂಡರು ಅವರ ಅಹವಾಲುಗಳನ್ನು ಮುಖ್ಯಮಂತ್ರಿಿಗಳಿಗೆ ಸಲ್ಲಿಸಿದರು.

ಬಿಎಸ್‌ವೈ ವಿರುದ್ಧ ರೈತರ ಆಕ್ರೋಶ
ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಂದ ಮನವಿ ಸ್ವೀಕರಿಸದೇ ತೆರಳಿದ್ದರಿಂದ ರೈತರು ಆಕ್ರೋೋಶ ವ್ಯಕ್ತಪಡಿಸಿದರು. ಗುರುವಾರ ಮುಖ್ಯಮಂತ್ರಿಿಗೆ ಮನವಿ ಕೊಡಲು ಹೋದಾಗ ನೀವು ಹೇಳಿದಷ್ಟು ಪರಿಹಾರ ಕೊಡಲಾಗದು ಎಂದು ಉಪಮುಖ್ಯಮಂತ್ರಿಿ ಲಕ್ಷ್ಮಣ ಸವದಿ ಸಿಟ್ಟಿಿಗೆದ್ದಿದ್ದರು. ಹೀಗಾದರೆ ಹೇಗೆ? ಸರಕಾರದ ಬಳಿ ಹಣ ಇಲ್ಲವಾದರೆ ಸಂತ್ರಸ್ತರನ್ನು ಭೇಟಿಯಾಗುವ ನಾಟಕವನ್ನೇಕೆ ಮಾಡುತ್ತಿಿದ್ದಾರೆ ಎಂದು ರೈತ ಧುರೀಣೆ ಜಯಶ್ರೀ ಪ್ರಶ್ನಿಿಸಿದರು. ಇದಕ್ಕೂ ಮುನ್ನ ಅತಿಥಿಗೃಹದ ಆವರಣದಲ್ಲಿ ಮನವಿ ಸಲ್ಲಿಸಿದ ರೈತ ಮುಖಂಡರ ಇನ್ನೊೊಂದು ತಂಡ ಸಮರ್ಪಕವಾಗಿ ಪರಿಹಾರ ನೀಡುವಂತೆ ಆಗ್ರಹಿಸಿತು. ಪರಿಹಾರಕ್ಕಾಾಗಿ ಘೋಷಣೆ ಕೂಗಿ ಸರಕಾರದ ಕ್ರಮಕ್ಕೆೆ ತೀವ್ರ ಅಸಮಾಧಾನ ಸೂಚಿಸಿತು. ರೈತ ಮುಖಂಡೆ ಜಯಶ್ರೀ ಸೇರಿದಂತೆ 10ಕ್ಕೂ ಹೆಚ್ಚು ರೈತರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದರು.

Leave a Reply

Your email address will not be published. Required fields are marked *

error: Content is protected !!