ಮಧುಗಿರಿ: ಆಧ್ಯಾತ್ಮಿಕ ಸಾಧನೆಯಲ್ಲಿ ಕೇವಲ ಅಧ್ಯಯನ ಶೀಲರಾಗದೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿನ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮಧ್ಯಭಾಗ ದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಏರ್ಪ ಡಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಆಚರಣೆಗಳು ಧಾರ್ಮಿಕ ಮನೋಭಾವ ಮೂಡಿಸುವುದಲ್ಲದೆ ಒಂದೊ0ದು ಆಚರಣೆಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿರುತ್ತದೆ. ಮಕ್ಕಳಲ್ಲಿ ಆಧ್ಯಾತ್ಮಿಕತೆಯನ್ನು ಕಲಿಸಬೇಕಾಗಿದೆ, ಶಿವರಾತ್ರಿ ಎನ್ನುವುದು ಆಧ್ಯಾತ್ಮಿಕ ದಿವಸ ಶಿವರಾತ್ರಿ ಸಂದರ್ಭದಲ್ಲಿ ಜಾಗರಣೆ ಮಾಡಿ ಜಾಗರೂಕರಾಗಿ ಸಾತ್ವಿಕ ಆಹಾರ ಸೇವಿಸಬೇಕು. ವೈಜ್ಞಾನಿಕ ತಳಹದಿ ಮೇಲೆ ಆಚರಣೆ ಇದ್ದು ಇದರಿಂದ ಆರೋಗ್ಯ ದಲ್ಲಿ ಸದೃಢತೆ ಕಂಡುಕೊಳ್ಳ ಬಹುದು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಜಿ .ರಂಗಯ್ಯ ಮಾತನಾಡಿ ,ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವಿಶ್ವಧರ್ಮ ವಾಗಿ ರೂಪುಗೊಂಡ ಸಂಸ್ಥೆ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳನ್ನು ರೂಪಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆ ಎಲ್ಲಾ ಧರ್ಮವನ್ನು ಒಳಗೊಂಡAತೆ ಜಾತ್ಯಾತೀತ ಸಂಸ್ಥೆ ಮಾನವೀಯ ಮೌಲ್ಯ ಆತ್ಮ ಪರಮಾತ್ಮನ ವಿಚಾರಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ. ಪ್ರಕಾಶ್, ಮಾಜಿ ಸದಸ್ಯರಾದ ಭಾರತಿಲಕ್ಷ್ಮಿಕಾಂತ್. ಮುಖಂಡರುಗಳಾದ ಎಂ.ವಿ. ಮೂಡ್ಲಗಿರಿಶ್. ಕೆ.ಎಸ್. ಪಾಂಡುರ0ಗ ರೆಡ್ಡಿ, ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ನಟರಾಜ್ ದೀಕ್ಷಿತ್, ಸಂಸ್ಥೆಯ ಸಂಚಾಲಕಿ ಬಿ.ಕೆ .ಕಲಾ ಉಪನ್ಯಾಸಕರಾದ ಮಹೇಂದ್ರ ಇತರರು ಹಾಜರಿದ್ದರು.
*
ಮಧುಗಿರಿ ಪಟ್ಟಣದ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಜಾಗರಣ ಪ್ರಯುಕ್ತ ಅಂದು ಬೆಳಿಗ್ಗೆ ೬:೦೦ಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಮತ್ತು ರಾತ್ರಿ ೧೦.೩೦ ರಿಂದ ಬೆಳಿಗ್ಗೆ ೫:೦೦ ವರೆಗೂ ೪.ಯಾಮಗಳ ರುದ್ರಭಿಷೇಕ ಪೂಜೆ ನಡೆಯಲಿದೆ ಎಂದು ಭಕ್ತ ಮಂಡಳಿಯವರು ತಿಳಿಸಿದ್ದಾರೆ.
ಅಂದು ರಾತ್ರಿ ೧೨ ಗಂಟೆಗೆ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಕಾಸ ಶಾಖ ಮಠದ ಶ್ರೀ ವೀರಭದ್ರ ಸ್ವಾಮಿಯವರು ಯಮದ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀ ಪಾರ್ವತಿ ಅಮ್ಮನವರ ಭಕ್ತ ಮಂಡಳಿ ವಾಸವಿ ಮಹಿಳಾ ಸಂಘ ಮಹಿಳಾ ಸಮಾಜ ಮಧು ಲಹರಿ ಭಜನಾ ಮಂಡಳಿ ಜ್ಞಾನ ವರ್ಧಿನಿ ಮಹಿಳಾ ಸಂಘ ಕೈವಾರ ಯೋಗಿ ನಾರಾಯಣ ಬಲಿಜ ಮಹಿಳಾ ಭಜನಾ ಮಂಡಳಿ ನಿಮಿಷಾಂಬ ಮಹಿಳಾ ಸಂಘ ಅಕ್ಕಮಹಾದೇವಿ ಮಹಿಳಾ ಸಂಘ ವರದಾಯಿನಿ ಸೇವಾ ಟ್ರಸ್ಟ್ ಸತ್ಯ ಸಾಯಿ ಸೇವ ಶ್ರೀ ಶಾರದ ವಿಠಲ ಭಜನಾ ಮಂಡಳಿ, ವಾಗ್ದೇವಿ ಕಲಾ ವೃಂದ ಕಲಾ ಕುಟಿರ ಡ್ಯಾನ್ಸ್ ಟೀಮ್ ಶಾರದಾ ಮಹಿಳಾ ಸಂಘ ಲಾಲಿತ್ಯ ಮಕ್ಕಳ ಕಲಾ ಕೂಟ ಇವರುಗಳಿಂದ ಸಾಂಸ್ಕೃತಿಕ ಭಜನಾ ಕಾರ್ಯಕ್ರಮಗಳು ನಡೆಯಲಿದೆ ಎಲ್ಲಾ ಕಾರ್ಯಕ್ರಮ ಭಕ್ತಾಮಹೇಶ್ವರ ಸಕಾಲಕ್ಕೆ ಆಗಮಿಸಿ ಮಲ್ಲೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಭಕ್ತ ಮಂಡಳಿಯವರು ಮನವಿ ಮಾಡಿ ದ್ದಾರೆ. ರಾತ್ರಿ ೧೦:೩೦ ರಿಂದ ೧೨ ಗಂಟೆಗೆ ಮೊದಲನೇ ಯಾಮಾ ೧೨ ರಿಂದ ಒಂದು ಮೂವತ್ತಕ್ಕೆ ಎರಡನೇ ಯಮ ರಾತ್ರಿ ೧:೩೦ ರಿಂದ ೩ ರ ವರೆಗೆ ಮೂರನೇಯಮ್ಮ ರಾತ್ರಿ ಮೂರರಿಂದ ನಾಲ್ಕನೆಯ ಪೂಜೆ ನಡೆಯಲಿದೆ