ರಾಪಿಡೋದ ಸಾಸ್ ಮಾಡೆಲ್ ನಿಂದ ಆದಾಯದ ಹೆಚ್ಚಳ, ಆಟೋ ಕ್ಯಾಪ್ಟನ್ಗಳು ಗ್ರಾಹಕರಿಂದ ನೇರವಾಗಿ ಸುಲಭವಾಗಿ ಪೇಮೆಂಟ್ ಪಡೆಯಲು ಸಾಧ್ಯ
ಬೆಂಗಳೂರು: ಬೈಕ್-ಟ್ಯಾಕ್ಸಿಗಳು, ಆಟೋಗಳು ಮತ್ತು ಕ್ಯಾಬ್ಗಳು ಸೇರಿದಂತೆ ಮಲ್ಟಿಮಾಡೆಲ್ ಸೇವೆಗಳಿಗೆ ಹೆಸರುವಾಸಿಯಾದ ಭಾರತದ ಪ್ರಮುಖ ಟ್ರಾವೆಲ್ ಆಪ್ ರಾಪಿಡೋ, ಆಟೋ ಕ್ಯಾಪ್ಟನ್ಗಳಿಗಾಗಿ ತನ್ನ ಹೊಸ ಸಾಸ್(SaaS) ಮಾಡೆಲ್ ಅನ್ನು ಬಿಡುಗಡೆ ಮಾಡಿದೆ.
ಈ ಕ್ರಮದೊಂದಿಗೆ, ರಾಪಿಡೋ ಅಗ್ರಿಗೇಟರ್ ಕಮಿಷನ್ ಮಾಡೆಲ್ ನಿಂದ ಆಟೋ ಕ್ಯಾಪ್ಟನ್ಗಳಿಗೆ ಲೈಫ್ ಟೈಮ್ ಝೀರೋ ಕಮಿಷನ್ ವಿಧಾನಕ್ಕೆ ಸಾಗುತ್ತಿದೆ. ಈ ಮೂಲಕ ಚಾಲಕರಿಗೆ ಕಮಿಷನ್ ಗಳ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವರ ಗಳಿಕೆಯ ಮೇಲೆ ಹಿಡಿತ ಸಾಧಿಸುವ ಅಧಿಕಾರ ವನ್ನು ಅವರಿಗೆ ನೀಡುತ್ತದೆ. ಈ ಮಾಡೆಲ್ ನ ಅಡಿಯಲ್ಲಿ, ಬೆಲೆಯನ್ನು ನಿರ್ಧರಿಸುವಲ್ಲಿ ರಾಪಿಡೋ ಪಾತ್ರ ಇರುವುದಿಲ್ಲ. ಈ ಸೇವೆ ಪಾರದರ್ಶಕ ವಾಗಿರುತ್ತದೆ ಮತ್ತು ಎಲ್ಲಾ ಪಾಲುದಾರರು ಒಳಗೊಳ್ಳಬಹುದಾಗಿದೆ.
ಈ ಇತ್ತೀಚಿನ ಸಾಧನೆ ಬಗ್ಗೆ ಮಾತನಾಡಿದ, ರಾಪಿಡೋದ ಸಹ-ಸಂಸ್ಥಾಪಕ ಶ್ರೀ ಪವನ್ ಗುಂಟುಪಲ್ಲಿ, “ನಾವು ರಾಪಿಡೋ ಆಟೋಗಳಿಗೆ ಸಾಸ್ ಮಾದರಿ ಯನ್ನು ಸಂಯೋಜಿಸಲು ಉತ್ಸುಕರಾಗಿದ್ದೇವೆ. ರಾಪಿಡೋ ಆಟೋಗಳು ಕಾರ್ಯನಿರ್ವಹಿಸುತ್ತಿರುವ ಪ್ರತಿ ನಗರದಲ್ಲಿ ನಾವು ಅದ್ಭುತ ಯಶಸ್ಸನ್ನು ಕಂಡಿದ್ದೇವೆ. ರಾಷ್ಟ್ರವ್ಯಾಪಿ, ನಾವು ಪ್ರಾರಂಭದಿಂದ ಆಟೋ ಚಾಲಕರಿಂದ ₹2700 ಕೋಟಿಗೂ ಹೆಚ್ಚು ಗಳಿಕೆ ಸಾಧ್ಯವಾಗಿಸಿದ್ದೇವೆ ಮತ್ತು ಆಟೋ ಚಾಲಕರಿಗೆ ಗರಿಷ್ಠ ಗಳಿಕೆಯನ್ನು ನೀಡಲು ಶ್ರಮಿಸುತ್ತೇವೆ.
ನಮ್ಮ ಅತ್ಯಾಧುನಿಕ ಸಾಸ್ ಪ್ಲಾಟ್ಫಾರ್ಮ್ ಆಟೋ ಕ್ಯಾಪ್ಟನ್ಗಳಿಗಾಗಿ ಸಾಂಪ್ರದಾಯಿಕ ಕಮಿಷನ್ ವ್ಯವಸ್ಥೆಯನ್ನು ಬದಲಿಸುತ್ತದೆ. ಇದು ಒಂದು ಅದ್ಭುತ ವಿಧಾನವಾಗಿದ್ದು, ಕ್ಯಾಪ್ಟನ್ಗಳು ಪ್ರತಿ ರೈಡ್ಗೆ ಕಮಿಷನ್ಗೆ ಬದಲಾಗಿ ನಾಮಮಾತ್ರ ಪ್ರವೇಶ ಶುಲ್ಕವನ್ನು ಮಾತ್ರ ನೀಡುತ್ತಾರೆ. ಇದು ಉದ್ಯಮದಲ್ಲಿ ಗಮ ನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ, ಇದು ನಮ್ಮ ಆಟೋ ಕ್ಯಾಪ್ಟನ್ ಗಳಿಗೆ ಹೆಚ್ಚು ಆದಾಯ ತರುವ ಮಾಡೆಲ್ ಆಗಿದೆ” ಎಂದು ಹೇಳಿದರು.
ಕ್ಯಾಬ್ ಚಾಲಕರು SaaS ಮಾಡೆಲ್ ಆಧಾರಿತ ಪ್ಲಾಟ್ಫಾರ್ಮ್ ಅನ್ನು ಬಳಸುತ್ತಿದ್ದು, ಅದು ಈಗ ಆಟೋ ಚಾಲಕರೂ ಬಳಸಬಹುದಾಗಿದೆ. ಆಟೋ ಚಾಲಕರು ಅದರಿಂದ ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಡಿಜಿಟಲ್ ಅನುಭವವನ್ನು ಅನುಭವಿಸುತ್ತಾರೆ. ಸಾಸ್ ಮಾದರಿಯು ನಾಮಮಾತ್ರ ಪ್ರವೇಶ ಶುಲ್ಕದಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಆಟೋ ಕ್ಯಾಪ್ಟನ್ಗಳಿಗೆ ತಮ್ಮ ಗಳಿಕೆಯನ್ನು ಹೆಚ್ಚಿಸಲು ಮತ್ತು ಪ್ರತಿ ದಿನದ ಕೊನೆಯಲ್ಲಿ ಅವರ ಕಠಿಣ ಪರಿಶ್ರಮದ ನ್ಯಾಯಯುತ ಪಾಲನ್ನು ಮನೆಗೆ ತೆಗೆದುಕೊಂಡು ಹೋಗಲು ಅಧಿಕಾರ ನೀಡುತ್ತದೆ. ಗ್ರಾಹಕರಿಂದ ನೇರವಾಗಿ ಪಾವತಿಗಳನ್ನು ಸ್ವೀಕರಿಸುವ ಮೂಲಕ, ಕ್ಯಾಪ್ಟನ್ಗಳು ಕಮಿಷನ್ ನಿರ್ಬಂಧಗಳಿಂದ ಮುಕ್ತರಾಗುತ್ತಾರೆ. ತಮ್ಮ ಜೀವಿತಾವಧಿಯ ಗಳಿಕೆಯನ್ನು ಹೆಚ್ಚಿಸುತ್ತಾರೆ. ಇದು ಕ್ಯಾಪ್ಟನ್ಗಳು ಮತ್ತು ಗ್ರಾಹಕರು ಇಬ್ಬರಿಗೂ ಸಮಾನವಾಗಿ ಪ್ರಯೋಜನವನ್ನು ನೀಡುವ ವೇದಿಕೆಯಾಗಿದೆ.
ಗ್ರಾಹಕರು ಆಟೋ ವಿಭಾಗದಲ್ಲಿ ಸ್ಪರ್ಧಾತ್ಮಕ ದರಗಳನ್ನು ಪಡೆಯುತ್ತಾರೆ. ಇದಕ್ಕಾಗಿ ಸಾಫ್ಟ್ವೇರ್ ಆಸ್ ಎ ಸರ್ವೀಸ್ SaaS ಪ್ಲಾಟ್ಫಾರ್ಮ್ಗೆ ಧನ್ಯವಾದ ಸಲ್ಲಿಸಬೇಕಾಗಿದೆ. ಈ ಮೂಲಕ ಕಮಿಷನ್ ಹೊರೆಗಳನ್ನು ತೆಗೆದುಹಾಕಿ, ಚಾಲಕರ ಕಲ್ಯಾಣ ಮತ್ತು ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ತನ್ನ ಬದ್ಧತೆ ಯನ್ನು ರಾಪಿಡೋ ಮುಂದುವರಿಸುತ್ತದೆ.