ಗುಬ್ಬಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗುಡಿಸಲುಗಳಿಗೆ ನೀರು ತುಂಬಿಕೊಂಡು ಬಾರಿ ಸಂಕಷ್ಟ ಎದುರಿಸುತ್ತಿದ್ದ ಹಂದಿ ಜೋಗರ ವಾಸ ಸ್ಥಳಕ್ಕೆ ಉಪ ಲೋಕಾಯುಕ್ತ ಬಿ ವೀರಪ್ಪ ಬೇಟಿ ಪರಿಶೀಲಿಸಿದರು.
ಪಟ್ಟಣದ ಪೊಲೀಸ್ ಸ್ಟೇಷನ್ ಹಿಂಭಾಗ ಮಾರನಕಟ್ಟೆಯಲ್ಲಿ ನಲವತ್ತ ಐದು ಹಂದಿ ಜೋಗ ಕುಟುಂಬಗಳು ವಾಸವಿದ್ದು. ಪ್ರತಿ ಬಾರಿ ಮಳೆ ಬಂದಂತ ಸಂದರ್ಭದಲ್ಲಿ ಗುಡಿಸಲಿಗೆ ನೀರು ತುಂಬಿಕೊಂಡು ಜನರು ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದರು. ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಗುಡಿಸಿಲಿಗಳಿಗೆ ತೆರಳಿ ಅಲ್ಲಿನ ಜನರ ಜೊತೆ ಸ್ಥಿತಿ ಗತಿ ಕುರಿತಾಗಿ ಚರ್ಚಿಸಿದರು.
15 ಹಕ್ಕು ಪತ್ರ ಮಾತ್ರ ನೀಡಿದ್ದು ಉಳಿದ ಹಕ್ಕು ಪತ್ರಗಳನ್ನು ನೀಡಿ ಸಾತೇನಹಳ್ಳಿ ಬಳಿ ನೀಡಿರುವ ಜಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಹಂದಿ ಜೋಗ ಸಮುದಾಯದವರು ಮನವಿ ಮಾಡಿದರು. ಎಲ್ಲರಿಗೂ ಸಹ ಹಂತ ಹಂತವಾಗಿ ಹಕ್ಕು ಪತ್ರ ನೀಡಲಾಗುವುದು. ನೀಡಲಾಗಿರುವ ಸ್ಥಳಕ್ಕೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಚಿಂತಿಸಿ ಕೂಡಲೇ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಬೇಕು. ಇಲ್ಲಿನ ಮಕ್ಕಳಿಗೆ ವಸತಿ ಶಾಲೆಗೆ ಸೇರಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಯಂತ್ ಕುಮಾರ್, ನೂರುನ್ನೀಸಾ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀ ಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.