Friday, 1st December 2023

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರದೀಪ್ ಈಶ್ವರ್ ಸುಳಿವು

ಚಿಕ್ಕಬಳ್ಳಾಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಸ್ಪರ್ಧಿಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳಿವು ನೀಡಿದ್ದಾರೆ.

ಚಿಕ್ಕಬಳ್ಳಾಪುರದ ಕಚೇರಿಯಲ್ಲಿ ಮಾತನಾಡಿದ ಪ್ರದೀಪ್​ ಈಶ್ವರ್​, ‘ಇಬ್ಬರೂ ಗೆಲುವು ಸಾಧಿಸುತ್ತಾರೆ, ಇವರ ಗೆಲುವಿಗೆ ನಾನು ಹಗಲಿರುಳು ದುಡಿಯುತ್ತೇನೆ.

ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೇವೆ. ರಾಜ್ಯದಲ್ಲಿ 20 ಎಂಪಿ ಸೀಟ್​ಗಳನ್ನು ಗೆಲ್ಲುತ್ತೇವೆ‌’ ಎಂದು ಹೇಳಿಕೆ‌ ನೀಡಿದ್ದಾರೆ.

ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದು ಇಬ್ಬರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದಾರೆ.

error: Content is protected !!