Saturday, 14th December 2024

ಮತದಾರರಿಂದ ಭರ್ಜರಿ ರೆಸ್ಪೋನ್ಸ್: 1 ಗಂಟೆವರೆಗೆ ಶೇ 41.59 ರಷ್ಟು ಮತದಾನ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಸುತ್ತಿನ ಲೋಕಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿದ್ದೂ, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಹಂತದ ಮತದಾನ ನಡೆದಿದ್ದು, ಮತದಾರರಿಂದ ಭರ್ಜರಿ ರೆಸ್ಪೋನ್ಸ್ ಸಿಕ್ಕಿದ್ದು, ಇಂದು ಮಧ್ಯಾಹ್ನ 1 ಗಂಟೆಯವರೆಗೆ ಶೇ 41.59 ರಷ್ಟು ಮತದಾನ ಆಗಿದೆ ಎಂದು ತಿಳಿದುಬಂದಿದೆ.

ಚಿಕ್ಕೋಡಿ 45, ಉತ್ತರ ಕನ್ನಡ 44.22, ಶಿವಮೊಗ್ಗ 44.98 ಬೆಳಗಾವಿ 40.57, ಬಳ್ಳಾರಿ 44.36, ದಾವಣಗೆರೆ 42.32, ಬಾಗಲಕೋಟೆ 41.91, ಬೀದರ್ 37.97 ವಿಜಯಪುರ 33.87, ಧಾರವಾಡ 40.61 ಕಲಬುರ್ಗಿ 37.48, ಹಾವೇರಿ 43.29, ಕೊಪ್ಪಳ 47.74, ಕೊಪ್ಪಳ 42.74, ರಾಯಚೂರು 38.6 ಶಿವಮೊಗ್ಗ 44.98 ರಷ್ಟು ಪ್ರತೀಶತ ಮತದಾನ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.