Saturday, 14th December 2024

ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ನೀಡಲು ಒತ್ತಾಯ

ರಾಯಚೂರು: ಎಂ.ಈರಣ್ಣ ವೃತ್ತದಲ್ಲಿರುವ ತಕರಾರಿ ಮಾರುಕಟ್ಟೆಯನ್ನು ಬದಲಾವಣೆ ಮಾಡದಂತೆ ಅಲ್ಲಿಯೇ ತರಕಾರಿ ಮಾರಲು ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿ ಅನುಷಾ ನಗರ ಗುಲ್ಬರ್ಗಾ ಬಿಲ್ಡರ್ಸ್ ಭಾರತ ನಗರ ನಿವಾಸಿ ಗಳ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಅನುಷಾ ನಗರ ಗುಲ್ಬರ್ಗಾ ಬಿಲ್ಡರ್ಸ್ ಭಾರತ ನಗರ ನಿವಾಸಿಗಳ ಕಾಲೋನಿಯ ನಿವಾಸಿಗಳಿಗೆ ಬಡಾವಣೆಯಿಂದ ಉಸ್ಮಾನಿಯಾ ಮಾರುಕಟ್ಟೆ ಯನ್ನು ಸುಮಾರು 5 ಕಿ.ಮೀ. ದೂರ ಇದ್ದು,ಮತ್ತು ಅಲ್ಲಿ ಯಾವುದೇ ರೀತಿಯ ಸ್ವಚ್ಛತೆ ಹಾಗೂ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಸದರಿ ಎಂ.ಈರಣ್ಣ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆಯು ನಮ್ಮ ಬಡಾವಣೆ ಯಿಂದ ಕೇವಲ 2 ಕಿ.ಮೀ. ಅಂತರದಲ್ಲಿದ್ದು, ಇದರಿಂದ ನಮಗೆ ತರಕಾರಿ ತರಲು ತುಂಬಾ ಅನುಕೂಲವಾಗುತ್ತದೆ. ಇಲ್ಲಿನ ಸುತ್ತ – ಮುತ್ತಲಿನ ಬಡಾವಣೆಗಳಿಗೂ ತುಂಬಾ ಅನುಕೂಲವಾಗುತ್ತದೆ.

ಆದ್ದರಿಂದ ಸದರಿ ಎಂ.ಈರಣ್ಣ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡದೆ ಇಲ್ಲಿಯೇ ಮುಂದು ಮುಂದುವರಿಸಬೇಕು ಎಂದು ಒತ್ತಾಯಿಸಿದರು.