Wednesday, 11th December 2024

ಮಾದಿಗ ಸಮುದಾಯದಿಂದ ಶಾಸಕರಿಗೆ ಅಭಿನಂದನೆ ಸೆ.24ಕ್ಕೆ

ತುಮಕೂರು: ಮಾದಿಗ ಸಮುದಾಯದಿಂದ ಜಿಲ್ಲೆಯ ಸಚಿವರಿಗೂ ಎಲ್ಲಾ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಾದಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರವನ್ನು ಸೆ.24ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು  ಜಿಲ್ಲಾ ಮಾದಿಗರ ಬಳಗದ ಅಧ್ಯಕ್ಷ ಕೋಡಿಯಾಲ ಮಹದೇವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,   ನಗರದ ಎಂಪ್ರೆಸ್ ಆಡಿಟೋರಿಯಂನಲ್ಲಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾದಿಗ ಸಮುದಾಯದ ಸಚಿವರಾದ ಕೆ.ಎಚ್.ಮುನಿ ಯಪ್ಪ, ಆರ್.ಬಿ.ತಿಮ್ಮಾಪುರ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ ಗಂಗಹನುಮಯ್ಯ, ಕೆ.ಎಂ.ತಿಮ್ಮರಾಯಪ್ಪ ಅವರನ್ನು ಅಭಿನಂದಿಸಲಾಗುವುದು ಎಂದರು.
ವಕೀಲೆ ಮರಿಚೆನ್ನಮ್ಮ ಮಾತನಾಡಿ ತಾಲೂಕಿನಲ್ಲಿ 45 ಸಾವಿರಕ್ಕೂ ಹೆಚ್ಚು ಮಾದಿಗ ಮತದಾರರದ್ದು ಎಲ್ಲಾ ಚುನಾವಣೆ ಗಳಲ್ಲೂ ನಮ್ಮ ಜನಾಂಗ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ಹಿನ್ನಲೆಯಲ್ಲಿ ಜನಾಂಗಕ್ಕೆ ಆಗಿರುವ ರಾಜಕೀಯ ಅನ್ಯಾಯ ವನ್ನು ಸರಿಪಡಿಸಿ ನಮ್ಮ ಜನಾಂಗದ ಹಿರಿಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿರುವ ಪ್ರತಿಭಾ ವಂತರಿಗೆ ಈ ಬಾರಿಯಾದರೂ ರಾಜಕೀಯ ಸ್ಥಾನ ಮಾನ ನೀಡಬೇಕೆಂದು ಒತ್ತಾಯಿಸಿ ಕೆಲವೊಮ್ಮೆ ಸರ್ಕಾರ ನಮ್ಮ ಜನಾಂಗ ವನ್ನು ದಿಕ್ಕು ತಪ್ಪಿಸುತ್ತಿದೆ. ಜಿಲ್ಲೆಯ ಸಚಿವರುಗಳು ಶಾಸಕರುಗಳು ಒಳ ಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಗೂಡಿಸ ಬೇಕಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಬಂಡೆಕುಮಾರ್ ಮಾತನಾಡಿ, ಮಾದಿಗ ಜನಾಂಗ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಎಡಗೈ ಮತ್ತು ಬಲಗೈ ಸಮುದಾಯಗಳು ಒಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಜಿಲ್ಲೆಯಲ್ಲಿ 4 ಲಕ್ಷ ಮತದಾರರಿದ್ದು ಒಂದು ಎಂಪಿ ಸ್ಥಾನ ಅಥವಾ ಎಂಎಲ್’ಸಿ ಸ್ಥಾನವನ್ನು ನಮ್ಮ ಜನಾಂಗಕ್ಕೆ ನೀಡಬೇಕೆಂದು ಒತ್ತಾಯಿಸಿ ತುಮಕೂರಿನಲ್ಲಿ ಸೆ. 24ರ ಭಾನುವಾರದಂದು ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಎಲ್ಲ ಸಂಘಟನೆಗಳ ಮುಖಂಡರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಗೂಳಹರಿವೆ ನಾಗರಾಜು, ಟಿ.ಸಿ.ರಾಮಯ್ಯ, ರಾಘವೇಂದ್ರಸ್ವಾಮಿ, ಶ್ರೀನಿವಾಸ ಅಯ್ಯನಪಾಳ್ಯ, ರಾಮಮೂರ್ತಿ ಸೇರಿದಂತೆ ಇತರರಿದ್ದರು.