Friday, 20th September 2024

ʼಕ್ರಿಸ್ಪಿ ಫ್ರೈಡ್ ಚಿಕನ್‌ ಪರಿಚಯಿಸಿದ ಮ್ಯಾಕ್ಡೊನಾಲ್ಡ್ಸ್ ಇಂಡಿಯಾ; ಕಿಚ್ಚ ಸುದೀಪ್ ಪ್ರಚಾರ ರಾಯಭಾರಿ

ಬೆಂಗಳೂರು: ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಫ್ರೈಡ್ ಚಿಕನ್ ಉತ್ಪನ್ನವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಕಾರ್ಯತಂತ್ರದ ಭಾಗವಾಗಿ, ವೆಸ್ಟ್‌ಲೈಫ್ ಫುಡ್‌ವರ್ಲ್ಡ್ ಒಡೆತನದಲ್ಲಿ ಇರುವ ಮತ್ತು ಅದರಡಿ ಕಾರ್ಯನಿರ್ವಹಿಸುತ್ತಿರುವ ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾ (ಡಬ್ಲ್ಯುಆ್ಯಂಡ್‌ ಎಸ್) ಗರಿಗರಿಯಾದ ʼಕ್ರಿಸ್ಪಿ ಫ್ರೈಡ್ ಚಿಕನ್ʼ ಪರಿಚಯಿಸುತ್ತಿರುವುದಾಗಿ ತಿಳಿಸಿದೆ.

ಈ ಹಿಂದೆಂದಿಗಿಂತಲೂ ಹೆಚ್ಚು ಗರಿಗರಿಯಾಗಿರುವ ಈ ಫ್ರೈಡ್ ಚಿಕನ್, ದಕ್ಷಿಣ ಭಾರತದಲ್ಲಿ ಬ್ರ್ಯಾಂಡ್‌ನ ಚಿಕನ್ ಉತ್ಪನ್ನದ ಜನಪ್ರಿಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

ಈ ಉಪಕ್ರಮಕ್ಕೆ ಇನ್ನಷ್ಟು ಆಕರ್ಷಣೆ ಮತ್ತು ಉತ್ಸಾಹ ಸೇರ್ಪಡೆ ಮಾಡಲು, ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾ ತನ್ನ ಹೊಸ ಅಭಿಯಾನವಾಗಿರುವ – ‘ಲೆಟ್ ದಿ ಕ್ರಂಚ್ ಟೇಕ್‌ ಓವರ್’-ಗೆ ಪ್ರಚಾರ ರಾಯಭಾರಿಯಾಗಿ ಕನ್ನಡದ ಜನಪ್ರಿಯ ಚಿತ್ರ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಿದೆ.

ಈ ಪ್ರಚಾರ ಅಭಿಯಾನವು ಕಿಚ್ಚ ಸುದೀಪ್ ಅಭಿನಯಿಸಿರುವ ಡಿಡಿಬಿ ಮುದ್ರಾ ಗ್ರೂಪ್‌ ತಯಾರಿಸಿದ ಟೆಲಿವಿಷನ್‌ ಜಾಹೀರಾತು ಒಳಗೊಂಡಿದೆ. ನಟ ಕಿಚ್ಚ ಸುದೀಪ್‌ ಅವರು ಕ್ರಿಸ್ಪಿ ಫ್ರೈಡ್ ಚಿಕನ್ ಸವಿಯುತ್ತಿರುವುದನ್ನು ಈ ಟೆಲಿವಿಷನ್‌ ಜಾಹೀರಾತುಗಳು ಪ್ರದರ್ಶಿಸುತ್ತವೆ. ಉತ್ಪನ್ನದ ಗರಿಗರಿಯಾದ ತಾಜಾತನವನ್ನು ವೀಕ್ಷಕರಿಗೆ ಪರಿಚಯಿಸಿಕೊಡಲಿವೆ.

ಪೊಲೀಸರು ಕಿಚ್ಚ ಸುದೀಪ್ ಅವರನ್ನು ಅವರ ಮನೆಯಲ್ಲಿ ವಿಚಾರಣೆ ಮಾಡುವ ಹಾಸ್ಯಮಯ ದೃಶ್ಯದೊಂದಿಗೆ ಈ ಪ್ರಚಾರ ಜಾಹೀರಾತು ಆರಂಭ ಗೊಳ್ಳುತ್ತದೆ. ಪೊಲೀಸರು ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಮಾಹಿತಿ ಪಡೆಯುವಾಗ ಏನಾದರೂ ಸದ್ದು ಕೇಳಿ ಬಂತೆ ಎಂದು ಪ್ರಶ್ನಿಸುತ್ತಾರೆ. ಅಧಿಕಾರಿಗಳು ತಮ್ಮ ನೋಟ್‌ಪ್ಯಾಡ್‌ನಲ್ಲಿ ಹೇಳಿಕೆ ಬರೆದುಕೊಳ್ಳುತ್ತಿದ್ದಂತೆ, “ನಿಮಗೆ ಬೇರೆ ಏನಾದರೂ ಸದ್ದು ಕೇಳಿಸಿತೇ” ಎಂದು ಪ್ರಶ್ನಿಸುತ್ತಾರೆ. “ಹೌದು, ಈ ರೀತಿ ಸದ್ದು ಕೇಳಿಸಿತು ನೋಡಿʼ ಎಂದು ಕುಟುಂಬದ ಸದಸ್ಯರೊಬ್ಬರು ಉದ್ಗರಿಸಿ, ಕ್ರಿಸ್ಪಿ ಫ್ರೈಡ್‌ ಚಿಕನ್‌ ತುಂಡನ್ನು ಗರಿಗರಿ ಸದ್ದಿನೊಂದಿಗೆ ಕಚ್ಚಿ ತಿನ್ನುತ್ತಾರೆ. ಪೋಲೀಸ್ ಸಿಬ್ಬಂದಿಯೂ ಅದೇ ರೀತಿಯಲ್ಲಿ ಚಿಕನ್‌ ತುಂಡನ್ನು ಸವಿಯುತ್ತಲೇ “ಓಹ್…ಹೀಗಾ!” ಎಂದು ಉದ್ಗರಿಸುತ್ತಾರೆ. ಕುಟುಂಬದ ಸದಸ್ಯರು ಪರಿಪೂರ್ಣವಾದ ಗರಿಗರಿಯಾದ ಚಿಕನ್‌ ಸವಿಯುತ್ತಲೇ ಗರಿಗರಿ ಸದ್ದು ಹೊರಡಿಸುತ್ತಾರೆ. ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಫ್ರೈಡ್ ಚಿಕನ್ ಬಕೆಟ್‌ ಪ್ರದರ್ಶನಗೊಳ್ಳುವುದರೊಂದಿಗೆ ಜಾಹೀರಾತು ಕೊನೆಗೊಳ್ಳುತ್ತದೆ.

ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾದ (ಡಬ್ಲ್ಯುಆ್ಯಂಡ್‌ ಎಸ್) ಮುಖ್ಯ ಮಾರುಕಟ್ಟೆ ಅಧಿಕಾರಿ ಅರವಿಂದ್ ಆರ್‌. ಪಿ. ಅವರು ಮಾತನಾಡಿ, “ಮ್ಯಾಕ್‌ ಡೊನಾಲ್ಡ್ಸ್‌ನಲ್ಲಿ, ನಾವು ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿನ ನಮ್ಮ ಗ್ರಾಹಕರಿಗೆ ವೈವಿಧ್ಯಮಯ ಚಿಕನ್‌ ಖಾದ್ಯಗಳನ್ನು ನೀಡಲು ನಮ್ಮ ಭಕ್ಷ್ಯ ಪಟ್ಟಿಗೆ ನಿರಂತರವಾಗಿ ಹೊಸ ರೂಪ ನೀಡುತ್ತಲೇ ಇರುತ್ತೇವೆ. ನಮ್ಮ ಹೊಸ ಕ್ರಿಸ್ಪಿ ಫ್ರೈಡ್ ಚಿಕನ್ ಪ್ರಚಾರ ಅಭಿಯಾನಕ್ಕೆ ಕಿಚ್ಚ ಸುದೀಪ್ ಅವರೇ ಪ್ರಚಾರ ರಾಯಭಾರಿ ಆಗಿರುವುದು ಗ್ರಾಹಕರ ಬಗೆಗಿನ ನಮ್ಮ ಬದ್ಧತೆಗೆ ನಿದರ್ಶನವಾಗಿದೆ. ಅವರ ವ್ಯಾಪಕ ಅಭಿಮಾನಿ ಬಳಗ ಮತ್ತು ಈ ಭಾಗದಲ್ಲಿನ ನಮ್ಮ ಗ್ರಾಹಕರ ಜೊತೆಗಿನ ಒಡನಾಟವು ನಮ್ಮ ಹೊಸ ಕೊಡುಗೆಗಳಿಗೆ ಹೆಚ್ಚಿನ ಬೇಡಿಕೆ ಕುದುರಿಸುವ ಬಗ್ಗೆ ನಮಗೆ ದೃಢ ವಿಶ್ವಾಸ ಇದೆʼ ಎಂದು ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿ, “ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾದ (ಡಬ್ಲ್ಯುಆ್ಯಂಡ್‌ಎಸ್) ಹೊಸ ಕ್ರಿಸ್ಪಿ ಫ್ರೈಡ್ ಚಿಕನ್‌ ಉತ್ಪನ್ನವನ್ನು ಪರಿಚಯಿಸಲು ನಾನು ಉತ್ಸುಕನಾಗಿದ್ದೇನೆ. ಈ ಹೊಸ ಕೊಡುಗೆಯಲ್ಲಿ ಈ ಬ್ರ್ಯಾಂಡ್ ನಿಜವಾಗಿಯೂ ಗರಿಗರಿಯಾದ ಹಾಗೂ ಸ್ವಾದಿಷ್ಟ ಉತ್ಪನ್ನ ಪರಿಚಯಿಸುತ್ತಿರುವುದಕ್ಕೆ ನಾನು ಖುಷಿಪಡುತ್ತೇನೆ. ದಕ್ಷಿಣ ಭಾರತದಲ್ಲಿನ ನನ್ನ ಅಭಿಮಾನಿಗಳು ಮತ್ತು ಆಹಾರ ಪ್ರಿಯರು ಈ ಬಾಯಲ್ಲಿ ನೀರೂರಿಸುವ ರುಚಿ ಸವಿಯುವುದನ್ನು ನೋಡಲು ನಾನು ಕಾತುರನಾಗಿರುವೆ. ನಾನು ಇಷ್ಟಪಡುವ ತೃಪ್ತಿದಾಯಕ ಗರಿಗರಿಯಾದ ತಾಜಾತನದ ಕ್ರಿಸ್ಪಿ ಫ್ರೈಡ್‌ ಚಿಕನ್‌ ಪ್ರತಿಯೊಬ್ಬರಿಗೂ ಇಷ್ಟವಾಗಲಿದೆʼ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಚಲನಚಿತ್ರ ತಾರೆಯರನ್ನು ಅನುಸರಿಸುವ ಅಭಿಮಾನಿಗಳ ಅಭಿಮಾನ ಮತ್ತು ಸಂಭ್ರಮಾಚರಣೆ ಸಂಸ್ಕೃತಿಯನ್ನು ಮ್ಯಾಕ್‌ ಡೊನಾಲ್ಡ್ಸ್ ಇಂಡಿಯಾ, ಕಳೆದ ಹಲವಾರು ವರ್ಷಗಳಿಂದ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ ಬಂದಿದೆ. ಕ್ರಿಸ್ಪಿ ಫ್ರೈಡ್‌ ಚಿಕನ್ ಉತ್ಪನ್ನಕ್ಕೆ ಕಿಚ್ಚ ಸುದೀಪ್‌ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಂಡಿರುವುದಕ್ಕೆ ಪೂರಕವಾಗಿ, ಬ್ರ್ಯಾಂಡ್ ಈ ಹಿಂದೆಯೂ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ಜೂನಿಯರ್ ಎನ್‌ಟಿಆರ್‌ ಅವರಂತಹ ಇತರ ಜನಪ್ರಿಯ ತಾರೆಗಳ ಜೊತೆಗೆ ಕಾರ್ಯನಿರ್ವಹಿಸಿದೆ. ಈ ಸಹಯೋಗಗಳು ಮ್ಯಾಕ್‌ಡೊನಾಲ್ಡ್ಸ್ ಇಂಡಿಯಾ ತನ್ನ ಗ್ರಾಹಕರ ಜೊತೆಗೆ ಪರಿಣಾಮಕಾರಿಯಾಗಿ ಸಂವಹನ ಸಾಧಿಸಲು ಮತ್ತು ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಬಾಂಧವ್ಯ ಹೆಚ್ಚಿಸಲು ನೆರವಾಗಿವೆ.

ಹೊಸ ಕ್ರಿಸ್ಪಿ ಫ್ರೈಡ್ ಚಿಕನ್ ನಿಜವಾದ ಆಹಾರವಾಗಿದ್ದು ಅದು ನಿಜವಾಗಿಯೂ ಒಳ್ಳೆಯದು. ಕೃತಕ ಬಣ್ಣಗಳು, ಕೃತಕ ಸುವಾಸನೆ ಮತ್ತು ಸಂರಕ್ಷಕ ಗಳಿಂದ ಮುಕ್ತವಾಗಿರುವುದರ ಹೊರತಾಗಿ, ಇದು ಕೃತಕ ಉಪ್ಪು ಆಗಿರುವ ಮೊನೊಸೋಡಿಯಂ ಗ್ಲುಟಾಮೇಟ್‌ (ಎಂಎಸ್‌ಜಿ) ಹೊಂದಿಲ್ಲ. ಈ ಉತ್ಪನ್ನವು ಒಂದು ವಿಶಿಷ್ಟವಾದ ಅಗಿಯುವಿಕೆ ಮತ್ತು ರಸಭರಿತ ಸ್ವರೂಪ ಹೊಂದಿದೆ. ಇದನ್ನು ಸೂಕ್ಷ್ಮವಾದ ಆಂತರಿಕ ತಯಾರಿಕಾ ಪ್ರಕ್ರಿಯೆಯ ಮೂಲಕ ಸಿದ್ಧಪಡಿಸಲಾಗಿದೆ. ಇದು ಈಗ ದಕ್ಷಿಣ ಭಾರತದಾದ್ಯಂತ ಮ್ಯಾಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಗ್ರಾಹಕರು ಈ ಗರಿಗರಿಯಾದ ಕೊಡುಗೆ ಯನ್ನು ಡೈನ್-ಇನ್‌ಗೆ ಮಾತ್ರವಲ್ಲದೆ ಡ್ರೈವ್-ಥ್ರೂ ಮೂಲಕ ಮತ್ತು ಮ್ಯಾಕ್‌ಡೆಲಿವರಿ ಮೂಲಕ ಪ್ರಯಾಣದಲ್ಲಿರುವಾಗಲೂ ಖರೀದಿಸಿ, ಸೇವಿಸಿ ಆನಂದಿಸಬಹುದು.