ಯಾವನಾದ್ರು ಬೋಸುಡಿಕೆ ನನ್ಮಗ ಬಂದು ಕೇಳಿದಿರಾ?
ತುಮಕೂರು: ಯಾವನಾದ್ರು ಬೋಸುಡಿಕೆ ನನ್ಮಗ ಬಂದು ನನ್ನ ಕೇಳಿದಿರಾ….ಅಯ್ಯೋ ಹೀಗೆ ಮಾತನಾಡಿರೋದು ಯಾರೂ ಅಲ್ಲ ಸ್ವಾಮಿ….ಘನತೆವೆತ್ತ ಸಚಿವ ಮಾಧುಸ್ವಾಮಿ.
ಶಿರಾ ತಾಲೂಕಿನ ಗೋಪಾಲದೇವರಹಳ್ಳಿಗೆ ರಸ್ತೆ ಉದ್ಘಾಟನೆಗೆ ಸಚಿವ ಮಾಧುಸ್ವಾಮಿ ಕಳೆದ ವಾರ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಹೇಮಾವತಿ ನೀರು ಬಿಡುವಂತೆ ಮನವಿ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಕೋಪ ನೆತ್ತಿಗೇರಿಸಿಕೊಂಡ ಸಚಿವರು ಬಾಯಿಗೆ ಬಂದಂತೆ ಗ್ರಾಮಸ್ಥರ ವಿರುದ್ದ ನಾಲಿಗೆ ಹರಿಬಿಟ್ಟು ಮೇಲಿನಂತೆ ಮಾತನಾಡಿ ಮತ್ತೊಮ್ಮೆ ಟೀಕೆಗೊಳಗಾಗಿದ್ದಾರೆ.
ಗ್ರಾಪಂ ಚುನಾವಣೆ ವೇಳೆ ಹೇಮಾವತಿ ನೀರು ಹರಿಸುವಂತೆ ಗೋಪಾಲದೇವರಹಳ್ಳಿ ಗ್ರಾಮಸ್ಥರು ಚುನಾಯಿತ ಬಹಿಷ್ಕರಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಸಚಿವರು ಊರಿಗೆ ಹೋದಾಗ ಬಾಯಿಗೆ ಬಂದಂತೆ ಮಾತನಾಡಿ ರಾದ್ದಾಂತ ಮಾಡಿದ್ದಾರೆ.
ಏನಪ್ಪ ಸ್ವಾಮಿ ನಿನ್ನ ಲೀಲೆ. ನಿನ್ನ ನಾಲಿಗೆ ಎತ್ತಬೇಕು ಅತ್ತಕಡೆ ತಿರುಗಿಸಬೇಡಪ್ಪ, ಹಿಡಿತದಲ್ಲಿ ಇಟ್ಟುಕೊಳ್ಳಪ್ಪ ಎಂದು ನಾಗರೀಕರು ಸಲಹೆ ನೀಡಿದ್ದಾರೆ.
ಸಚಿವರ ಮಾತಿನ ಮೋಡಿಯ ವೀಡಿಯೋ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದೆ.